ತಿನ್ನುವಾಗ ಆಹಾರದಲ್ಲಿ ಕೂದಲು, ಸಣ್ಣಪುಟ್ಟ ಕಲ್ಲು ಸಿಗೋದು ಸಾಮಾನ್ಯ. ಇವುಗಳ ಬದಲಾಗಿ ಕಾಂಡೋಮ್, ಗುಟ್ಕಾಗಳು ಸಿಕ್ಕಿದ್ರೆ ಹೇಗಾಗಬೇಡ. ಹೌದು ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ನಲ್ಲಿರುವ ಪ್ರಮುಖ ಆಟೋ ಮೊಬೈಲ್ ಕಂಪನಿಗೆ ಪೂರೈಸಿದ ಸಮೋಸಗಳಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳು ಪತ್ತೆಯಾಗಿದ್ದು, ಆರ್ಡರ್ ಕೊಟ್ಟವರು ನೋಡಿ ಬೆಚ್ಚಿಬಿದ್ದಿದ್ದಾರೆ. ಪುಣೆಯ ಕ್ಯಾಟಲಿಸ್ಟ್ ಸರ್ವೀಸ್ ಸಲ್ಯೂಷನ್ಸ್ ಪ್ರೈ. ಲಿ. ಆಟೋಮೊಬೈಲ್ ಸಂಸ್ಥೆಯೂ, ಕ್ಯಾಟರಿಂಗ್ ಸಂಸ್ಥೆಗೆ ಆಹಾರ ಪೂರೈಸಲು ಗುತ್ತಿಗೆ ನೀಡಿದರು.
ಮನೋಹರ್ ಎಂಟರ್ಪ್ರೈಸಸ್ ಎಂಬ ಮತ್ತೊಂದು ಉಪಗುತ್ತಿಗೆ ಸಂಸ್ಥೆಗೆ ಸಮೋಸ ನೀಡುವ ಗುತ್ತಿಗೆಯನ್ನು ಕೊಡಲಾಗಿತ್ತು. ಇದರಿಂದ ತಮ್ಮ ಗುತ್ತಿಗೆ ರದ್ದು ಮಾಡಿದ ಕೋಪದಿಂದ ಸಮೋಸದಲ್ಲಿ ಕಾಂಡೊಮ್ , ಗುಟ್ಕಾ, ಮತ್ತು ಕಲನ್ನು ತುಂಬಿ ನೀಡಿದ್ದಾರೆ. ಇನ್ನು ವಿಚಾರಣೆ ವೇಳೆ ಮನೋಹರ್ ಎಂಟರ್ಪ್ರೈಸಸ್ನ ಮಾರುಕಟ್ಟೆ ಖ್ಯಾತಿಗೆ ಮಸಿ ಬಳಿಯಲು ಬಯಸಿದ್ದರು.
ರಹೀಮ್ ಶೇಖ್, ಫಿರೋಜ್ ಶೇಖ್, ವಿಕ್ಕಿ ಶೇಖ್, ಅಜರ್ ಶೇಖ್ ಮತ್ತು ಮಜರ್ ಶೇಖ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 328, 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 34 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.