ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ ಲೋಕಸಭಾ ಚುನಾವಣೆ ಮುಗಿಯುವವರೆಗೂ ಗಂಡ, ಹೆಂಡತಿ ತಮ್ಮ ರಾಜಕೀಯ ನಿಲುವು ಬೇರೆ ಬೇರೆಯಾಗಿರುವ ಕಾರಣ, ಒಂದೆಡೆ ಇರುವುದು ಬೇಡ ಎಂಬ ನಿರ್ಧಾರ ತೆಗೆದುಕೊಂಡಿದ್ದಾರೆ. ಮಧ್ಯಪ್ರದೇಶದ ಅನುಭಾ ಮುಂಜಾರೆ ಸ್ಥಳೀಯ ಕಾಂಗ್ರೆಸ್ ಶಾಸಕಿಯಾಗಿದ್ದು, ಇವರ ಪತಿ ಕಂಕರ್ ಮುಂಜಾರೆ ಬಾಲಾಘಾಟಾ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಸಂಬಂಧ ತಮ್ಮ ಬೇರೆ ಬೇರೆ ಸೈದ್ಧಾಂತಿಕ ನಿಲುವು ಹೊಂದಿರುವ ಕಾರಣ ಕಂಕರ್ ಅವರು ಶುಕ್ರವಾರ ತಮ್ಮ ಮನೆ ಬಿಟ್ಟು ತೆರಳಿದ್ದಾರೆ. ಏ 19ರ ಮತದಾನ ಮುಕ್ತಾಯಗೊಂಡ ಮೇಲೆ ಮನೆಗೆ ಹಿಂತಿರುಗುವುದಾಗಿ ಹೇಳಿ ತೊರೆದಿದ್ದಾರೆ. ಪತಿಯ ಈ ನಿರ್ಧಾರದಿಂದಾಗಿ ಅನುಜಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಂಕರ್ ಬೇರೆ ಪಕ್ಷದಿಂದ ಸ್ಪರ್ಧಿಸಿದ್ದರು. ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದೆ. ಆಗ ನಾವಿಬ್ಬರೂ ಒಟ್ಟಿಗೆ ಇದ್ದೇವು. ಆಗ ಇಲ್ಲದ ಈ ಸಿದ್ಧಾಂತ ಈಗೇಕೆ ಎಂದು ಮುನಿಸಿಕೊಂಡಿದ್ದಾರೆ.