ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಹಿಂದೆ ಮಹಾನಾಯಕನ ಕೈವಾಡ ಇದೆ ಎಂದಿದ್ದ ಹೆಚ್.ಡಿ. ಕುಮಾರಸ್ವಾಮಿಗೆ, ಕಾಂಗ್ರೆಸ್ ತಿರುಗೇಟು ನೀಡಿದೆ. ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಬಿಡುಗಡೆ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರ ಕೈವಾಡ ಇದೆ ಅಂತ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಬಾಬು, ಹೆಚ್.ಡಿ. ಕುಮಾರಸ್ವಾಮಿ ಅವರನ್ನು ದೇವರಾಜೇಗೌಡ ಭೇಟಿ ಆಗಿದ್ದೇಕೆ ಅಂತ ಪ್ರಶ್ನೆ ಮಾಡಿದ್ದಾರೆ. ದೇವರಾಜೇಗೌಡ ಕುಮಾರಸ್ವಾಮಿಯನ್ನ ಭೇಟಿ ಆಗಿ ಪೆನ್ಡ್ರೈವ್ ಬಗ್ಗೆ ಮಾಹಿತಿ ನೀಡಿದ್ದಾರೆ. ಜುಲೈ ತಿಂಗಳಿನಲ್ಲೇ ಪೆನ್ಡ್ರೈವ್ ವಿಚಾರ ಕುಮಾರಸ್ವಾಮಿ ಗೊತ್ತಾಗಿದೆ. ಗೊತ್ತಿದ್ದರೂ ಆಗ ಕುಮಾರಸ್ವಾಮಿ ಸುಮ್ಮಿದ್ದಿದ್ದು ಯಾಕೆ.? ದೇವರಾಜೇಗೌಡ, ಬಿ.ವೈ, ವಿಜಯೇಂದ್ರ, ಆರ್. ಅಶೋಕ್, ಪ್ರೀತಂಗೌಡ ಬಳಿಯೂ ಈ ಬಗ್ಗೆ ಹೇಳಿದ್ದಾರೆ. ಆದರೆ ಈಗ ವಿನಾಕಾರಣ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಹೆಸರು ಎಳೆದು ತರುತ್ತಿರೋದ್ದೇಕೆ ಅಂತ ರಮೇಶ್ ಬಾಬು ಪ್ರಶ್ನಿಸಿದ್ದಾರೆ.