ಬಾಗಲಕೋಟೆ : ಲೋಕಸಭಾ ಅಖಾಡದಲ್ಲಿ ಮಾತಿನ ಮಲ್ಲಯುದ್ಧ ಜೋರಾಗಿ ನಡೆಯುತ್ತಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ, ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಕಿಡಿಕಾರಿದ್ದಾರೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪರ ಪ್ರಚಾರ ನಡೆಸಿದ ಕಾಶಪ್ಪನವರ್, ಯತ್ನಾಳ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಗೊಡ್ಡೆಮ್ಮೆಗಳ ಹಾಗೆ ಒದರುವುದನ್ನೇ ಚಟ ಮಾಡಿಕೊಂಡಿರುವ ಯತ್ನಾಳ್ ಗೆ ಸಮುದಾಯ, ಜಾತಿ ಮತ್ತು ಪಕ್ಷದ ಬಗ್ಗೆ ಬದ್ಧತೆ ಇಲ್ಲ.
ಕುರುಬರಿಗೆ, ಪಂಚಮಸಾಲಿಯವರಿಗೆ, ಅಲ್ಪಸಂಖ್ಯಾತರಿಗೆ-ಹೀಗೆ ಯಾರಿಗೂ ವೋಟು ಹಾಕಬಾರದು ಅಂತ ಹೇಳುತ್ತಾರೆ ಎಂದ ಕಾಶಪ್ಪನವರ್ ಪಂಚಮಸಾಲಿ ಸಮುದಾಯಕ್ಕೆ ಅವರ ಕೊಡುಗೆ ಏನೂ ಇಲ್ಲ, ಅಲ್ಪಸಂಖ್ಯಾತರನ್ನು ನಖಶಿಖಾಂತ ದ್ವೇಷಿಸುವ ಯತ್ನಾಳ್ ಹಿಂದೆ ತಾನು ಜೆಡಿಎಸ್ ಪಕ್ಷದಲ್ಲಿದ್ದಾಗ ತಲೆ ಮೇಲೆ ಟಿಪ್ಪು ಸುಲ್ತಾನ್ ಟೋಪಿ ಧರಿಸಿದ್ದ ಮತ್ತು ಕೈಯಲ್ಲಿ ಟಿಪ್ಪುನಂತ ಖಡ್ಗ ಹಿಡಿದಿದ್ದ. ದೇಶ ತನ್ನಪ್ಪನ ಆಸ್ತಿಯೇನೋ ಎಂಬಂತೆ ಮಾತಾಡುತ್ತಾನೆ ಎಂದು ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದರು. ಅವನು ಹೀಗೆ ಗೊಡ್ಡೆಮ್ಮಗಳ ರೀತಿ ಒದರುವುದನ್ನು ನಿಲ್ಲಿಸದಿದ್ದರೆ ಈಶ್ವರಪ್ಪನಿಗೆ ಆದ ಗತಿ ಅವನಿಗೂ ಆಗುತ್ತದೆ ಎಂದು ಕಾಶಪ್ಪನವರ್ ಹೇಳಿದರು.