ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ನವಮೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ವೈಧೃತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 39 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ.
ರಾಹು ಕಾಲ ಸಂಜೆ 04:35 ರಿಂದ 05:59
ಯಮಘಂಡ ಕಾಲ ಮಧ್ಯಾಹ್ನ 12:19 ರಿಂದ 01:44
ಗುಳಿಕ ಕಾಲ ಮಧ್ಯಾಹ್ನ 03:10 ರಿಂದ 04:35
ಮೇಷ ರಾಶಿ: ನಿಮ್ಮೊಳಗಿನ ವಿಷಮಭಾವವು ಕೆಲವರ ವಿಚಾರದಲ್ಲಿ ಕಡಿಮೆಯಾಗುವುದು. ಮಕ್ಕಳಿಗೆ ಸಿಗುವ ಗೌರವದಿಂದ ನಿಮಗೆ ಹೆಮ್ಮೆ. ನೀವು ಪ್ರತಿಕೂಲಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರುವಿರಿ. ಸ್ತ್ರೀಯರಿಂದ ಇಂದಿನ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಅಗೌರವವನ್ನು ಕೊಟ್ಟಂತೆ ನಿಮಗೆ ಅನ್ನಿಸಬಹುದು. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ಸಾಹಿತ್ಯಾಸಕ್ತರಿಗೆ ಒಳ್ಳೆಯ ಗೌರವ ಬರುವುದು. ಮಕ್ಕಳು ಅಡ್ಡದಾರಿಗೆ ಹೋಗುವ ಸನ್ನಿವೇಶವು ಬರಬಹುದು. ಮಾರ್ಗದರ್ಶನದ ಅವಶ್ಯಕತೆ ಇರಲಿದೆ. ಸ್ವಾವಂಬಿಯಾಗಲು ನೀವು ಇಚ್ಛಿಸುವಿರಿ. ಸಿಟ್ಟನ್ನು ಕಡಿಮೆ ಮಾಡಿಕೊಂಡು ಎಲ್ಲವನ್ನೂ ಸ್ವೀಕರಿಸಿದರೆ ಯಶಸ್ಸು ನಿಮ್ಮದೇ. ಉನ್ನತ ಅಧಿಕಾರವು ನಿಮ್ಮನ್ನು ಹುಡುಕಿಕೊಂಡು ಬಂದೀತು. ತಪ್ಪನ್ನು ಒಪ್ಪಿಕೊಂಡು ಸುಮ್ಮನಾಗುವಿರಿ. ನಿಯಮವನ್ನು ಪಾಲಿಸುವುದು ಮುಖ್ಯವಾಗಿರಲಿ.
ವೃಷಭ ರಾಶಿ: ಪ್ರೇಮ ವಿವಾವಹವು ಇಂದು ಸಿದ್ಧಿಯಾದ ಸಂಭ್ರಮದಲ್ಲಿ ಇರುವಿರಿ. ಮನೆಯವರ ಜೊತೆ ವಿನಾಕಾರಣ ಏರುದನಿಯಲ್ಲಿ ಮಾತನಾಡುವಿರಿ. ಆಸ್ತಿಯು ನಷ್ಟವಾಗುದು ಎಂಬ ಹೆದರಿಕೆ ಇರಲಿದೆ. ಹಣಕಾಸಿನ ಒತ್ತಡವು ಕಡಿಮೆ ಆಗಲಿದೆ. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ವಾಹನ ಚಾಲನೆಯಲ್ಲಿ ಭೀತಿ ಕಾಣಿಸುವುದು. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು. ನಿಮ್ಮ ತಾಳ್ಮೆಯ ವರ್ತನೆಯಿಂದ ಸಂಕಟವು ದೂರಾಗುವುದು. ಕಲಿಕೆಯಲ್ಲಿ ಹೊಸತನವನ್ನು ಇರುವುದು. ಸಂತಾನವು ನಿಮಗೆ ಖುಷಿ ಕೊಡುವುದು. ವಿದೇಶಪ್ರಯಾಣವನ್ನು ಮಾಡುವ ಯೋಚನೆಯಲ್ಲಿಯೇ ಇರುವಿರಿ. ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದ್ದೀರಿ. ಪುಣ್ಯಸ್ಥಳಗಳ ದರ್ಶನವು ಇರಲಿದೆ. ತಿಳುವಳಿಕೆಯ ವಿಚಾರದಲ್ಲಿ ನಿಮಗೆ ಮುಜುಗರ ಆಗಬಹುದು. ಸಂಗಾತಿಯ ಕಾರಣದಿಂದ ಅಪಮಾನವಾಗಬಹುದು.
ಮಿಥುನ ರಾಶಿ: ನಿಮ್ಮ ಕಾರ್ಯನಿಷ್ಠೆ ಇತರರಿಗೆ ಮಾದರಿ. ಅಕಾರಣವಾದ ಪ್ರೀತಿಯು ಅಕಾರಣವಾಗಿಯೇ ಮುಕ್ತಾಯವಾಗುವುದು. ಪ್ರೀತಿಯ ವಿಚಾರಕ್ಕೆ ಬಂದರೆ ಪೂರ್ಣ ಸಮಾಧಾನ ಇರದು. ಸಂಗಾತಿಯ ಮೇಲೆ ಅನುಮಾನವನ್ನು ವ್ಯಕ್ತಪಡಿಸುವಿರಿ. ಹಣವನ್ನು ಕೊಟ್ಟಾದರೂ ಆಗಬೇಕಾದ ಕಾರ್ಯವನ್ನು ಶೀಘ್ರವಾಗಿ ಮಾಡಿಸಿಕೊಳ್ಳಿ. ಅತಿಯಾದ ಖರ್ಚನ್ನು ಮಾಡಿಕೊಳ್ಳುವಿರಿ. ನಿಮ್ಮವರ ಪ್ರೀತಿಯು ನಿಮಗೆ ಕಡಿಮೆ ಆದಂತೆ ಅನ್ನಿಸಬಹುದು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಹಣವನ್ನು ಗಳಿಸುವ ಹಂಬಲವು ಇದ್ದು ಅದಕ್ಕಾಗಿ ಮಾರ್ಗವನ್ನೂ ಪರ್ಯಾಲೋಚಿಸಿ. ಸಹೋದರಿಯ ಜೊತೆ ಭಾವನೆಯನ್ನು ತೆರೆದಿಡುವಿರಿ. ಸಮಯಸಾಧನೆಗೆ ದಾರಿ ಹುಡುಕುವಿರಿ. ಯಾರನ್ನೋ ಮುಖಭಂಗ ಮಾಡಿ, ಅನಂತರ ಪಶ್ಚಾತ್ತಾಪಪಡುವಿರಿ. ಕುಟುಂದ ಜೊತೆ ಸಮಯ ಕಳೆಯುವುದು ಇಂದು ಸಾಧ್ಯವಾಗದು.
ಕರ್ಕಾಟಕ ರಾಶಿ: ಬೇಡದ ಆಹಾರದಿಂದ ಅನಾರೋಗ್ಯ ಉಂಟಾಗುವುದು. ವಾಹನ ಖರೀದಿಗೆ ಯೋಚನೆ ಇರಲಿದ್ದು ಸಾಲ ಮಾಡಬೇಕಾಗವುದು. ನಿಮ್ಮ ವೇಗದ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ಬಂದ ಹಣವನ್ನು ಕೊಡಬೇಕಾದವರಿಗೆ ನೀಡಿ. ಮನೆಯವರ ಸಣ್ಣ ತಪ್ಪುಗಳೂ ನಿಮಗೆ ಸಹ್ಯವಾಗದೇ ಇರುವುದು. ಮತ್ತೆ ಮತ್ತೆ ಉಂಟಾದ ಅನಾರೋಗ್ಯದಿಂದ ನಿಮ್ಮ ದಿನಚರಿಯನ್ನೇ ಬದಲಿಸಿಕೊಳ್ಳುವಿರಿ. ಬಂಧುಗಳು ನಿಮ್ಮ ಬಗ್ಗೆ ಏನಾದರೂ ಆಡಿಕೊಂಡಾರು. ಶ್ರಮವು ಯುಕ್ತಿಯಿಂದ ಕೂಡಿರಲಿ. ಧನಾತ್ಮಕ ಚಿಂತನೆಯನ್ನು ಪ್ರಯತ್ನಪೂರ್ವಕವಾಗಿ ಮಾಡಿಬೇಕಾದೀತು. ನಿದ್ರೆಯು ಬಾರದೇ ಕಷ್ಟವಾದೀತು. ಮನೆತನದ ಗೌರವವನ್ನು ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಲಿದೆ. ಕಳೆದುಕೊಂಡ ವಸ್ತುವಿಗಾಗಿ ನೀವು ಬಹಳ ಬೇಸರಪಡುವಿರಿ. ಕುಟುಂಬದ ಹಿರಿಯರನ್ನು ಕಳೆದುಕೊಳ್ಳುವಿರಿ. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ. ಸಂಗಾತಿಯ ಆರೋಗ್ಯವು ಹದ ತಪ್ಪುವುದು.
ಸಿಂಹ ರಾಶಿ: ಆತ್ಮ ಪ್ರಶಂಸೆಯನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ಜ್ಞಾನವನ್ನು ಇತರರಿಗೆ ಹಂಚುವಿರಿ. ಭೂಮಿಯ ಲಾಭವು ಆಗಲಿದ್ದು ಅನೇಕ ದಿನದ ಚಿಂತೆಗಳು ದೂರಾಗುವುದು. ಉದ್ಯೋಗದಲ್ಲಿ ಅಧಿಕ ಆದಾಯು ಸಿಗುವುದು ಎಂಬ ನಿರೀಕ್ಷೆ ಇರಲಿದೆ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ. ಸ್ನೇಹಿತರಿಗೆ ಮಾನಸಿಕ ಬೆಂಬಲವನ್ನು ನೀಡುವಿರಿ. ಮಾತಿಗೆ ಸಂಬಂಧಿಸದಂತೆ ದೋಷವು ನಿಮಗೆ ಕಾಣಸಿಗುವುದು. ನಿಮ್ಮ ಕೆಲಸವನ್ನು ಶಿಸ್ತಿನಿಂದ ಮಾಡಿ ಮುಗಿಸುವಿರಿ. ಕಾರ್ಯಸಾಧನೆಗೆ ಹೆಚ್ಚು ಓಡಾಟವನ್ನು ಮಾಡಬೇಕಾದೀತು. ಇಂದು ಪ್ರಯತ್ನಿಸಿದ ಕಾರ್ಯವು ಆಗದೇ ಇರುವುದಕ್ಕೆ ಬೇಸರಿಸುವಿರಿ. ಇನ್ನೊಬ್ಬರನ್ನು ಟೀಕಿಸುವುದು ನಿಮಗೆ ಬೇಡ. ಹಿರಿಯರ ಕಿವಿಮಾತಿನ ಮೇಲೆ ನಿರ್ಲಕ್ಷ್ಯವಿರುವುದು. ವಸ್ತುಗಳ ಮೇಲೆ ಅಧಿಕ ಮೋಹವನ್ನು ಇಟ್ಟುಕೊಳ್ಳಲಾರಿರಿ. ಸಮಯಕ್ಕೆ ಆಗಬೇಕಾದುದು ಆಗುವುದು ಎಂಬ ತಟಸ್ಥ ಸ್ಥಿತಿ ಇರಲಿದೆ. ಹೊಂದಿಕೊಳ್ಳುವುದು ಗೊತ್ತಿದ್ದರೂ ಅದು ನಿಮಗೆ ಕೀಳರಿಮೆಯನ್ನು ತರಬಹುದು. ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾದೀತು.
ಕನ್ಯಾ ರಾಶಿ: ಆತ್ಮವಿಶ್ವಾಸದ ಕೊರತೆಯಿಂದ ಆತಂಕದ ಭೀತಿ ಎದುರಾಗುವುದು. ನಿಮ್ಮ ಅನಗತ್ಯ ಮೊಂಡುತನ ನಿಮ್ಮನ್ನೇ ಕುರುಡುಮಾಡಬಹುದು. ರಾಜಕೀಯದಲ್ಲಿ ತೃಪ್ತಿ ಸಿಗದೇ ತೊಳಲಾಟ ಇರಲಿದೆ. ಸಂಗಾತಿಯ ಆರೋಗ್ಯದ ಕಡೆ ನಿಮ್ಮ ಗಮನವು ಹೆಚ್ಚಿರುವುದು. ಅನಾದರದಿಂದ ನಿಮಗೆ ಸಿಟ್ಟುಬರಬಹುದು. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ಪ್ರತ್ಯೇಕತೆಯನ್ನು ನೀವು ಬಯಸುತ್ತಿರುವಿರಿ. ಏಕಾಂತವು ನಿಮಗೆ ಬಹಳ ಪ್ರಿಯವಾಗಲಿದೆ. ಆರ್ಥಿಕ ಅಭಿವೃದ್ಧಿಯಿಂದ ನೆಮ್ಮದಿ ಇರುವುದು. ದಾಂಪತ್ಯ ಜೀವನವನ್ನು ಬಹಳ ಆನಂದಿಸುವಿರಿ. ನಿಮ್ಮ ನೆಲೆಯನ್ನು ಉಳಿಸಿಕೊಳ್ಳುವುದು ಕಷ್ಟ. ಖರ್ಚುಗಳಿಗೆ ನಿರ್ದಿಷ್ಟತೆ ಇರಲಿ. ಚಂಚಲವಾದ ಮನಸ್ಸಿನಿಂದ ಯಾರು ಹೇಳಿದ್ದೂ ನಿಮಗೆ ಗೊತ್ತಾಗದು. ನಿಮ್ಮ ಬಗ್ಗೆ ನಿಮ್ಮನ್ನೇ ಕೇಳಿಕೊಳ್ಳಿ. ಇನ್ನೊಬ್ಬರ ಜೊತೆ ಸೇರಿ ಟೀಕೆಯನ್ನು ಮಾಡುವಿರಿ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗದು.