ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಗೆ ಇಂದು ಬಿಗ್ ಡೇ. ದರ್ಶನ್ ಗೆ ಇಂದು ಮೂರು ಮೂರು..ಕಷ್ಟ..ಸಂಕಷ್ಟ ಎದುರಾಗಿದೆ. ದರ್ಶನ್ ಸಲ್ಲಿಸಿರೋ ರೆಗ್ಯೂಲರ್ & ಮಧ್ಯಂತರ ಬೇಲ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ನಡೆಯಲಿದೆ. ಎರಡೂ ಅರ್ಜಿಗಳನ್ನ ವಿಚಾರಣೆ ನಡೆಸಲಿದೆ ಕೋರ್ಟ್. ಒಂದೆಡೆ ರೆಗ್ಯೂಲರ್ ಜಾಮೀನಿಗಾಗಿ ದರ್ಶನ್ ಅರ್ಜಿ ಹಾಕಿದ್ದಾರೆ. ಮತ್ತೊಂದೆಡೆ ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ದರ್ಶನ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಲಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ SPP ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಲಿದ್ದಾರೆ. ಹೀಗಾಗಿ ದರ್ಶನ್ ಗೆ ಇಂದು ಎರಡೆರಡು ಶಾಕ್ ಫಿಕ್ಸ್ ಅಂತನೇ ಹೇಳಬಹುದು. ಎರಡೂ ಅರ್ಜಿಗಳು ರಿಜೆಕ್ಟ್ ಆದ್ರೆ ದರ್ಶನ್ ಗೆ ಕಂಟಕ ಎದುರಾಗುತ್ತದೆ. ಮತ್ತೆ ಜೈಲಿನ ಹಾದಿ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.