ನಟ ದರ್ಶನ್ ಅಂಡ್ ಗ್ಯಾಂಗ್ನಿಂದ ಕೊಲೆಯಾದ ರೇಣುಕಾಸ್ವಾಮಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಾ ಇದೆ. ಈ ಕೇಸ್ ಅನ್ನು ಬಹಳ ಸೂಕ್ಷ್ಮವಾಗಿ ತನಿಖೆ ನಡೆಸುತ್ತಿರುವ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಘಟನೆ ಬೆಳಕಿಗೆ ಬಂದಿದ್ದು ಪೊಲೀಸರ ಚಾಣಾಕ್ಷತನದಿಂದ. ಸ್ವಲ್ಪವೇ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ ಈ ಪ್ರಕರಣದಲ್ಲಿ ಯಡವಟ್ಟು ಆಗ್ತಾ ಇತ್ತು ಎಂದು ಹೇಳಿದರು.ಇನ್ನು, ಈ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯ ಮರ್ಡರ್ ಹೀನ & ಹೇಯ ಕೃತ್ಯವಾಗಿದೆ. ಆರೋಪಿಗಳು ತೀರಾ ದೌರ್ಜನ್ಯ ಪೂರಕವಾಗಿ ಕೊಲೆ ಮಾಡಿದ್ದಾರೆ. ಕೃತ್ಯ ಮಾಡಿದವರಿಗೆ ತಕ್ಷ ಶಿಕ್ಷೆ ಆಗುತ್ತೆ ಎಂದು ಕಮಿಷನರ್ ದಯಾನಂದ್ ಅವರು ಭರವಸೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರಂಭದಲ್ಲಿ ತನಿಖಾ ತಂಡದಲ್ಲಿ ಇದ್ದ ಇನ್ಸ್ಪೆಕ್ಟರ್ ಡಿಸಿಪಿ ಗಿರೀಶ್ ಅವರನ್ನು ಈ ಪ್ರಕರಣದ ತನಿಖೆಗೆ ವಾಪಸ್ ಸೇರಿಸಲಾಗಿದೆ. ಸಂಪೂರ್ಣ ಮೇಲುಸ್ತುವಾರಿ ಡಿಸಿಪಿ ಗಿರೀಶ್ ಅವರೇ ವಹಿಸಿದ್ದಾರೆ.
ಇದುವರೆಗೂ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ಕೂಲಂಕುಷವಾದ ತನಿಖೆ ನಡೆಯುತ್ತಿದೆ. ಮೃತ ವ್ಯಕ್ತಿಯ ಸಾವಿಗೆ ನ್ಯಾಯ ಸಿಗಬೇಕು. ಆದಷ್ಟು ಶೀಘ್ರವೇ ನ್ಯಾಯಾಲಯಕ್ಕೆ ಕೊಲೆ ಪ್ರಕರಣದ ಸಮರ್ಪಕವಾದ ಸಾಕ್ಷಿಗಳನ್ನು ಒದಗಿಸುತ್ತೇವೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಗೆ ತೆಗೆದುಕೊಂಡು ಹೋಗಿದ್ದೇವೆ ಎಂದು ಕಮಿಷನರ್ ಬಿ.ದಯಾನಂದ್ ಅವರು ಸ್ಪಷ್ಟಪಡಿಸಿದ್ದಾರೆ.