ನಟ ದರ್ಶನ್ ತೂಗುದೀಪ ಸರ್ಜರಿ ಮಾಡಿಸಿಕೊಳ್ಳುವ ದಿನಾಂಕವನ್ನು ಕೊನೆಗೂ ಫಿಕ್ಸ್ ಮಾಡಲಾಗಿದೆ. ಬಳ್ಳಾರಿ ಜೈಲಿನಲ್ಲಿ ಇದ್ದ ದರ್ಶನ್ ಅವರಿಗೆ ಬೆನ್ನು ನೋವು ತೀವ್ರವಾಗಿದ್ದು, ಲಕ್ವ ಹೊಡೆಯುವ ಅಪಾಯದ ಕಾರಣ ವೈದ್ಯರು ತಕ್ಷಣವೇ ಸರ್ಜರಿ ಮಾಡಿಸಿಕೊಳ್ಳಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಡಿಸೆಂಬರ್ 11ರಂದು ಜಾಮೀನು ಅವಧಿ ಅಂತ್ಯಗೊಳ್ಳಲಿದ್ದು, ಇದುವರೆಗೆ ಅವರು ಸರ್ಜರಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಿಪಿ ಏರಿಳಿತದ ಸಮಸ್ಯೆಯಿಂದಾಗಿ ತಡವಾಗಿದೆ ಎಂದು ಅವರ ವಕೀಲರು ಕೋರ್ಟ್ಗೆ ಸ್ಪಷ್ಟನೆ ನೀಡಿದ್ದಾರೆ.
ಕೋರ್ಟ್ ವಿಚಾರಣೆಯಲ್ಲಿ ವಕೀಲ ಪ್ರಸನ್ನ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಾಮಾನ್ಯವಾಗಿ ಯಾರೇ ಆಸ್ಪತ್ರೆಗೆ ಬಂದರೂ ಕೂಡ ಅವರಿಗೆ ಮಾತ್ರೆ ಕೊಟ್ಟು ಬಿಪಿ ಕಂಟ್ರೋಲ್ ಮಾಡಿ ಆಪರೇಷನ್ ಮಾಡ್ತಾರೆ. ಹೀಗಿರುವಾಗ ದರ್ಶನ್ ಅವರ ವಿಚಾರದಲ್ಲಿ ಯಾಕೆ ಇದು ಸಾಧ್ಯವಾಗುತ್ತಿಲ್ಲ. ದರ್ಶನ್ ಅವರನ್ನು ತಲೆ ಬಾಚ್ಕೊಳಿ, ಪೌಡರ್ ಹಾಕ್ಕೊಳ್ಳಿ ಅಂತ ಆಪರೇಷನ್ಗೆ ಸಿದ್ಧ ಮಾಡ್ತಾಯಿದ್ದಾರಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ವಾದ ವಿವಾದವನ್ನು ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದು, ಸರ್ಜರಿ ಹಾಗೂ ಮಧ್ಯಂತರ ಜಾಮೀನು ವಿಸ್ತರಣೆ ವಿಷಯದಲ್ಲಿ ದರ್ಶನ್ ನಿರ್ಧಾರ ಕೈಗೊಳ್ಳಬೇಕಾಗಿದೆ. ಸರ್ಜರಿ ನಡೆಸಿದರೆ ಜಾಮೀನು ಅವಧಿ ವಿಸ್ತರಣೆ ಮಾಡುವ ಸಾಧ್ಯತೆಯಿದ್ದು, ಸರ್ಜರಿ ಮಾಡಿಸದೇ ಇದ್ದರೆ ಕೋರ್ಟ್ ಅವರ ವಕೀಲರ ಹೇಳಿಕೆಗಳನ್ನು ತಿರಸ್ಕರಿಸಿ ಜಾಮೀನು ರದ್ದು ಮಾಡುವ ಸಂಭವವಿದೆ. ದರ್ಶನ್ ತಮ್ಮ ಜಾಮೀನು ವಿಸ್ತರಣೆಗಾಗಿ ಈ ಬಾರಿ ಸರ್ಜರಿಗೆ ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. . ಈ ಎಲ್ಲಾ ಸಂದರ್ಭಗಳಲ್ಲಿ ದರ್ಶನ್ ಮರುಜೈಲಿಗೆ ಹೋಗುವುದು ಬಹುತೇಕ ಖಚಿತವಾಗಿರುವಂತಿದೆ. ಸರ್ಜರಿ ಹಾಗೂ ಜೈಲು ಎರಡೇ ಬಿಟ್ಟರೆ ಸದ್ಯಕ್ಕೆ ಯಾವುದೂ ಕೂಡ ಕೈಯಲ್ಲಿ ಇಲ್ಲ ಅನ್ನೋದು ಮಾತ್ರ ನಿಜ. ಅವರ ಮುಂದಿನ ಪ್ಲಾನ್ ಇನ್ನು ಇನೇರಡು ದಿನಗಳಲ್ಲಿ ಸ್ಪಷ್ಟವಾಗಲಿದೆ.