ಲಕ್ನೋ : ಅತ್ತೆ ಸೊಸೆ ಅಂದರೆ ತಾಯಿ ಮಗಳಿಂದಂತೆ ಅಂತಹ ಸಂಬಂಧಕ್ಕೆ ಕಳಂಕ ತರುವ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಬುಲೇಂದಶೆಹರ್ ನಲ್ಲಿ ನಡೆದಿದೆ. ವಿಕೃತ ಕಾಮಿ ಸೊಸೆಯೊಬ್ಬಳು ಅತ್ತೆ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಮುಂದಾಗಿದ್ದು, ಅಶ್ಲೀಲ ವಿಡಿಯೋ ತೋರಿಸಿ ಅತ್ತೆಗೆ ಧಮ್ಕಿ ಹಾಕಿದ್ದಾಳೆ. ಈಗಾಗಲೇ ಸೊಸೆಯ ಈ ವಿಚಿತ್ರ ವರ್ತನೆ ಕಂಡ ಅತ್ತೆಯು ಭಯಬೀತಳಾಗಿದ್ದು ಪೋಲಿಸರ ಮೊರೆ ಹೋಗಿದ್ದಾರೆ.
ಸಂತ್ರಸ್ತ ಮಹಿಳೆಯು ಮೊದಲಿಗೆ ಬುಲೇಂದಶೆಹರ್ ನ ಕುರಾವಲಿಯಲ್ಲಿ ವಾಸವಾಗಿದ್ರು, ಮಗನಿಗೆ ಮದುವೆ ಮಾಡಿ 2 ವರ್ಷ ಆಗಿತ್ತು. ಆದರೆ ಸೊಸೆಗೆ ಮಕ್ಕಳು ಇರಲ್ಲಿಲ್ಲ. ಈ ಕಾರಣಕ್ಕೆ ಅತ್ತೆ ಸೊಸೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆಕೆಯ ಗರ್ಭಕೋಶದಲ್ಲಿ ಸಮಸ್ಯೆ ಇರುವುದಾಗಿ ತಿಳಿದು ಬಂದಿದ್ದು, ಮಕ್ಕಳು ಆಗೋದು ಅನುಮಾನ ಅಂತ ಡಾಕ್ಟರ್ ತಿಳಿಸಿದ್ದರು.
ಆರೋಪಿಯು ಈ ಹಿಂದೆ ತನ್ನ ಅತ್ತೆಗೆ ನಿದ್ದೆ ಮಾತ್ರೆ ನೀಡಿ ಅವರನ್ನು ವಿವಸ್ತ್ರಗೊಳಿಸಿ ವೀಡಿಯೋ ಮಾಡಿಕೊಂಡಿದ್ದಳು. ನಿನ್ನ ಮಗ ಹಾಗೂ ಮಾವನನ್ನು ಬಿಟ್ಟು ನನ್ನಟ್ಟೊಟ್ಟಿಗೆ ಬಂದುಬಿಡಿ, ನನ್ನೊಂದಿಗೆ ಶಾರೀರಿಕ ಸಂಬಂಧ ಬೆಳೆಸದಿದ್ದರೆ ನಿನ್ನ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವದಾಗಿ ಹೆದರಿಸಿದ್ದಾಳೆ. ಘಟನೆ ಕುರಿತು ಪೊಲೀಸರು ಈಗಾಗಲೇ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.