ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಚರ್ಚೆ ಮತ್ತೆ ಗರಿಗೆದರಿದೆ. ಮೈಸೂರಿನಲ್ಲಿ ನಡೆದ ಒಕ್ಕಲಿಗರ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಮುಂದಿನ ಸಿಎಂ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. “ದೆಹಲಿಯಲ್ಲಿ ಏನು ಆಗಬೇಕು ಅದು ತೀರ್ಮಾನ ಆಗಿದೆ” ಎನ್ನುತ್ತಾ… ಮುಂದಿನ ಸಿಎಂ ಆಗೋ ಆಸೆಯನ್ನ ಡಿಕೆಶಿ ಮತ್ತೆ ತೆರೆದಿಟ್ಟಿದ್ದಾರೆ.
ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ 5 ವರ್ಷದ ಸರ್ಕಾರ ಅಲ್ಲ, 10 ವರ್ಷದ ಸರ್ಕಾರ. ದೆಹಲಿಯಲ್ಲಿ ಏನು ಆಗಬೇಕು ಅದು ತೀರ್ಮಾನ ಆಗಿದೆ. ಅದರ ಬಗ್ಗೆ ಚರ್ಚೆ ಮಾಡಲ್ಲ, ಚರ್ಚೆ ಆಗೋದು ಬೇಡ ಎಂದರು. ಮುಂದಿನ ಸಿಎಂ ಸ್ಥಾನ ನನಗೆ ಫಿಕ್ಸ್ ಅಂತ ಮಾರ್ಮಿಕವಾಗಿಯೇ ಹೇಳಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಮಾತು ಚರ್ಚೆಗೆ ಗ್ರಾಸವಾಗಿದ್ದು, ಲೋಕಸಭಾ ಚುನಾವಣೆ ಬಳಿಕ ಮತ್ತಷ್ಟು ಬದಲಾವಣೆಗಳ ನಿರೀಕ್ಷೆ ಹುಟ್ಟುಹಾಕಿದೆ.