ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ರಿಲೀಸ್ ಈಗ ರಾಜಕೀಯ ಟರ್ನ್ ಪಡೆದುಕೊಂಡಿದ್ದು, ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಪಕ್ಷದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತು ಮಾಡಿರೋದು ಜಸ್ಟ್ ಕಣ್ಣೋರೆಸುವ ತಂತ್ರ ಅಂತ ಕಿಡಿಕಾರಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ ನೀನು ಯಾಕೆ ಜಾರಿಕೊಳ್ತಿಯಾ? ಅಂತ ಪ್ರಶ್ನಿಸಿದ್ದಾರೆ. HD ಅಂದರೆ ಏನು ಕುಮಾರಸ್ವಾಮಿ.? ಹರದನಹಳ್ಳಿ ದೇವೇಗೌಡರು ಅಂತ ಅರ್ಥ ತಾನೆ. ಈಗ ನಮ್ಮ ಕುಟುಂಬ ಬೇರೆ, ರೇವಣ್ಣ ಕುಟುಂಬ ಬೇರೆ ಅಂತಿರಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಬಿಜೆಪಿ ಹೈಕಮಾಂಡ್ ಹೇಳಿದ್ದರು. ನಮ್ಮ ತಂದೆಯವರು ತೀರ್ಮಾನ ತೆಗೆದುಕೊಂಡಿದ್ದು ಎಂದು ಸಮರ್ಥಿಸಿಕೊಂಡಿದ್ದಾರೆ. ಟಿಕೆಟ್ ವಿಚಾರದಲ್ಲಿ ಬ್ರದರ್… ಬ್ರದರ್ ಎಂದು ಕುಮಾರಸ್ವಾಮಿ ಅವರ ಸ್ಟೈಲ್ನಲ್ಲೇ ಡಿ.ಕೆ ಶಿವಕುಮಾರ್ ಅಣಕಿಸಿದ್ದಾರೆ.