ವಿಶ್ವದ ಪ್ರಸಿದ್ದ ಚಲನಚಿತ್ರೋತ್ಸವ ಕಾನ್ಸ್ ಫಿಲ್ಮ್ಸ್ ಫೆಸ್ಟಿವಲ್ ಶುರುವಾಗಿದೆ. ಎಲ್ಲಾ ದೇಶದ ಸ್ಟಾರ್ ನಟ-ನಟಿಯರು ಈ ಫೆಸ್ಟಿವಲ್ ಗೆ ಬರ್ತಾಯಿದ್ದಾರೆ… ಈಗ ಕನ್ನಡದ ‘ಐರಾವತ’ ಸಿನಿನಾ ಬೆಡಗಿ ಊರ್ವಶಿ ರೌಟೇಲಾ ಡ್ರೆಸ್ ಗಮನ ಸೆಳೆದಿದೆ. ಜೊತೆಗೆ ದೀಪಿಕಾ ಪಡುಕೋಣೆ ಡ್ರೆಸಿಂಗ್ ಸ್ಟೈಲ್ ಅನ್ನೇ ಊರ್ವಶಿ ಕಾಪಿ ಮಾಡಿದ್ದಾರೆ ಅಂತ ಕೆಲವರು ಕಾಲೆಳೆಯುತ್ತಿದ್ದಾರೆ..
ಕಾನ್ಸ್ ಚಲನಚಿತ್ರೋತ್ಸವದ ಮೊದಲ ದಿನ ‘ಐರಾವತ’ ನಟಿ ಎಂಟ್ರಿ ಕೊಟ್ಟಿದ್ದಾರೆ. ಪಿಂಕ್ ಬಣ್ಣದ ಡ್ರೆಸ್ನಲ್ಲಿ ಸಖತ್ ಕ್ಯೂಟ್ ಆಗಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.ಊರ್ವಶಿ ಧರಿಸಿದ ಗೌನ್ ಅನ್ನ ದೀಪಿಕಾ ಪಡುಕೋಣೆ ಧರಿಸಿದ ಗೌನ್ ಗೆ ಜನ ಹೋಲಿಸಿದ್ದಾರೆ .
2018ರಲ್ಲಿ ನಡೆದ ಕಾನ್ಸ್ ಫಿಲ್ಮ್ಸ್ ಫೆಸ್ಟಿವಲ್ನಲ್ಲಿ ದೀಪಿಕಾ ಪಿಂಕ್ ಕಲರ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಗೆಟಪ್ನಲ್ಲಿ ಊರ್ವಶಿ ಕೂಡ ಕಾಣಿಸಿಕೊಂಡಿದ್ದಾರೆ.. ಇದನ್ನ ನೋಡಿ ದೀಪಿಕಾ ಸ್ಟೈಲ್ ಕಾಪಿ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.