ಸೂಪರ್ ಸ್ಟಾರ್ ರಜನಿಕಾಂತ್ ಮಗಳ ಬಾಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಹುಭಾಷಾ ನಟ, ಪತಿ ಧನುಷ್ಗೆ ಡಿವೋರ್ಸ್ ನೀಡಲು ಐಶ್ವರ್ಯಾ ಮುಂದಾಗಿದ್ದಾರೆ. ಕಳೆದ ಹಲವು ತಿಂಗಳಿನಿಂದ ಬೇರೆ ಬೇರೆಯಾಗಿಯೇ ವಾಸಿಸುತ್ತಿರುವ ಐಶ್ವರ್ಯಾ ಮತ್ತು ಧನುಷ್, ಈಗ ತಮ್ಮ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಇಡಲು ರೆಡಿ ಆಗಿದ್ದಾರೆ.ಈಗಾಗಲೇ ಡಿವೋರ್ಸ್ ನೀಡಲು ಫ್ಯಾಮಿಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
2004ರಲ್ಲಿ ಧನುಷ್ ಮತ್ತು ಐಶ್ವರ್ಯಾ ಮದುವೆ ಆಗಿದ್ರು. ಈ ದಂಪತಿಗೆ ಯಾತ್ರ ಮತ್ತು ಲಿಂಗ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಂದರ ಸಂಸಾರದಲ್ಲಿ 2-3 ವರ್ಷಗಳಿಂದಲ್ಲೇ ಬಿರುಕು ಕಾಣಿಸಿಕೊಳ್ಳಲು ಪ್ರಾರಂಭವಾಗಿತ್ತು.