ವರದಿ: ಮೂರ್ತಿ.ಬಿ ನೆಲಮಂಗಲ
ನೆಲಮಂಗಲ, ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಅನ್ನೊದು ಗಾದೆಯಾಗಿ ಬಿಳಿದುಬಿಟ್ಟಿದೆ.. ಗಂಡ ಹೆಂಡತಿಯ ಜಗಳ ಇದೀಗ ಬೇರೆ ಸ್ವರೂಪನೇ ತಗೆದುಕೊಳ್ಳುತ್ತಿದೆ.. ಬಾಳಿ ಬದುಕಬೇಕಾದ ಜೀವ, ದಾರುಣ ಅಂತ್ಯ ಕಂಡಿದೆ.
ಸುಂದರವಾದ ಈ ಯುವತಿ ಮಾಡೆಲಿಂಗ್ ಮಾಡುತ್ತಾ, ಸುಖವಾಗಿ ಇದ್ದಳು, ಎರಡನೇ ಮದುವೆಯಾಗಿ ನೆಮ್ಮದಿಯ ಜೀವನ ಸಾಗುಸುತ್ತಿದ್ದ ಸಲ್ಮಾ, ಬೆಂಗಳೂರಿನ ನೆಲಮಂಗಲದ ಭಕ್ತನಪಾಳ್ಯದಲ್ಲಿ ಕಳೆದ 8 ತಿಂಗಳ ಹಿಂದೆ ಎರಡನೇ ಮದುವೆಯಾಗಿದ್ದ ಪತಿ ಇಮ್ರಾನ್ ಜೊತೆ ಸಂಸಾರ ನಡೆಸುತ್ತಿದ್ದಳು. ಆದರೆ ನಿನ್ನೆ ರಾತ್ರಿ ಮೊದಲನೇ ಮದುವೆಯ ವಿಚಾರದ ಬಗ್ಗೆ ಪ್ರಸ್ತಾಪವಾಗಿ ಸಣ್ಣಜಗಳವೂ ಆರಂಭವಾಗಿದೆ.ಮಾತಿಗೆ ಮಾತು ಬೆಳೆದು ಜಗಳ ತೀವ್ರ ಸ್ವರೂಪ ಪಡೆದು ಸಲ್ಮಾ ಕೊಲೆಯಲ್ಲಿ ಅಂತ್ಯವಾಗಿದ್ದಾಳೆ.
ನೆಲಮಂಗಲದ ಬಾಡಿಗೆ ಮನೆಯಲ್ಲಿ ಜೀವನ ಆರಂಭಿಸಿದ ಸಲ್ಮಾ ಹಾಗೂ ಪತಿ ಇಮ್ರಾನ್ ಇಬ್ಬರಿಗೂ ಮೊದಲನೇ ಮದುವೆಯಾಗಿದ್ದಾರೆ, ಆದರೆ ಸಲ್ಮಾಗೆ ಒರ್ವ ಮಗನಿದ್ದಾನೆ.. ಆ ಮಗನನ್ನ ನೋಡುವ ವಿಚಾರ ಹಾಗೂ ಬೇರೆ ಬೇರೆ ವಿಚಾರಗಳಲ್ಲಿ ಗಲಾಟೆಯಾಗಿ, ಪತಿ ಇಮ್ರಾನ್ ಪತ್ನಿ ಸಲ್ಮಾಳ ಕತ್ತು ಹಿಸುಕಿ ಕೊಲೆಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಎಸ್ ಪಿ ಸಿಕೆ ಬಾಬಾ ಮಾಹಿತಿ ಕಲೆ ಹಾಕಿದ್ದಾರೆ.
ಸಲ್ಮಾ ಪೋಷಕರು ಈತನ ವಿರುದ್ದ ವರದಕ್ಷಿಣೆ ಕಿರುಕುಳ, ಹಲ್ಲೆ, ಕೊಲೆ ಪ್ರಕರಣವನ್ನ ದಾಖಲು ಮಾಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಕೊಲೆ ಮಾಡಿದ್ದ ಇಮ್ರಾನ್ ಪೊಲೀಸರಿಗೆ ಶರಣಾಗಿದ್ದಾನೆ.