ರಿಯಲ್ ಎಸ್ಟೇಟ್ ಉದ್ಯಮಿ, ಗ್ರಾಪಂ ಸದಸ್ಯನ ಬರ್ಬರ ಹತ್ಯೆ

ಸ್ನೇಹಿತರಿದಂಲೇ ಸ್ನೇಹಿತನ ಬರ್ಬರ ಹತ್ಯೆ

Untitled design

ಶಿವಯ್ಯ ಮಠಪತಿ, ಗ್ಯಾರಂಟಿ ನ್ಯೂಸ್ ಬೀದರ್

ಬೀದರ್ ನಗರದ ಅಲಿಯಾಬಾದ ರಿಂಗ್ ರಸ್ತೆಯಲ್ಲಿರುವ ದಾಬಾವೊಂದರಲ್ಲಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬನ ಭೀಕರ ಹತ್ಯೆಯಾಗಿದೆ. ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಈತನ ಹೆಸರು ವೈಜಿನಾಥ್ ದತ್ತಾತ್ರಿ. ಈತ ಗ್ರಾಮ ಪಂಚಾಯತ್‌ನಲ್ಲಿ ಕಳೆದ ಮೂರು ಅವಧಿಯಲ್ಲಿ ಸದಸ್ಯನಾಗಿ ಆಯ್ಕೆಯಾಗಿದ್ದ. ಗ್ರಾಮದ ಜನರಿಗೆ ಏನೇ ಸಮಸ್ಯೆ ಬಂದರೂ ಕೂಡಾ ಮನೆಯ ಮಗನ ಹಾಗೆ ಅವರ ಸಮಸ್ಯೆಯನ್ನ ಬಗೆಹರಿಸುತ್ತಿದ್ದ.

ADVERTISEMENT
ADVERTISEMENT

ಗ್ರಾಮದಲ್ಲಿ ಅಭಿವೃದ್ದಿ‌ಪರ ಕೆಲಸಗಳನ್ನು‌ ಮಾಡುತ್ತಿದ್ದ ವೈಜಿನಾಥ್ ದತ್ತಾತ್ರಿ. ನೆನ್ನೆ ಮಧ್ಯಾಹ್ನ ಸ್ನೇಹಿತರೊಂದಿಗೆ ಬೀದರ್‌ ನಗರದ ಸಮೀಪದ ದಾಬಾಕ್ಕೆ ಊಟಕ್ಕೆಂದು ತೆರಳಿದ್ದ. ಊಟ ಮುಗಿಸಿ ಕೈತೊಳೆಯಲೆಂದು ಹೊರಗಡೆ ಹೋದ ವೈಜಿನಾಥ್‌ಗೆ  ಊಟ ಮುಗಿಸಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ದುಷ್ಕರ್ಮಿಗಳು ಆತನ ಮೇಲೆರಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಚಾಕುವಿನಿಂದ ಇರಿಯಲು ಮುಂದಾಗುತ್ತಿದ್ದಂತೆ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಆದರೂ ಬೆನ್ನು ಬಿಡದ ದುಷ್ಕರ್ಮಿಗಳು ದಾಬಾದಿಂದ 200 ಮೀಟರ್ ದೂರದಲ್ಲಿ ಅಟ್ಟಿಸಿಕೊಂಡು ಹೋಗಿದ್ದಾರೆ. ಎದೆ, ಕತ್ತು ಹಾಗೂ ತಲೆಗೆ ಬಲವಾಗಿ‌ ಹೊಡೆದಿದ್ದಾರೆ. ಬಳಿಕ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.

ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬೆನ್ನು ಬಿದ್ದಿರುವ ಪೊಲೀಸರು, ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೊಲೆ ಆರೋಪಿಯ ಗುರುತು ಪತ್ತೆ ಮಾಡಿರುವ ಪೊಲೀಸರು ಬೀದರ್ ಮೂಲದ ವ್ಯಕ್ತಿಯಿಂದಲೇ ಹತ್ಯೆ ನಡೆದಿದೆ ಎಂದು ಬಲ್ಲ ಮೂಲಗಳು ತಿಳಿಸಿದ್ದು, ಆರೋಪಿಗೆ ಬಲೆ ಬೀಸಿದ್ದಾರೆ.

ಶಿವಯ್ಯ ಮಠಪತಿ, ಗ್ಯಾರಂಟಿ ನ್ಯೂಸ್ ಬೀದರ್

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version