“ಬುರ್ಖಾ ಧರಿಸಿದ್ರೆ ಏನೂ ಆಗಲ್ಲ, ಶಾರ್ಟ್ ಡ್ರೆಸ್ ತೊಟ್ರೆ ನರಕಕ್ಕೆ ಹೋಗ್ತಾರೆ”: ವಿದ್ಯಾರ್ಥಿನಿ ಹೇಳಿಕೆ ವೈರಲ್

Untitled design 2025 03 24t151531.979

ಚಾಮರಾಜನಗರ (ಮಾ.24): ಶಾಲೆಗಳಲ್ಲಿ ಮಕ್ಕಳಿಗೆ ವ್ಯವಸ್ಥಿತವಾಗಿ ಬ್ರೈನ್‌ವಾಶ್ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಚರ್ಚೆಗೆ ಬಂದಿದೆ. ಚಾಮರಾಜನಗರದ ಖಾಸಗಿ ಶಾಲೆಯೊಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ವೈಜ್ಞಾನಿಕ ಪ್ರದರ್ಶನದಲ್ಲಿ ಶಾಲೆಯ ಬಾಲಕಿ, “ಬುರ್ಖಾ ಧರಿಸಿದರೆ ಶವಕ್ಕೆ ಏನೂ ಆಗೋದಿಲ್ಲ, ಆದರೆ ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗ್ತಾರೆ, ಹಾವು, ಚೇಳು ತಿನ್ನುತ್ತವೆ” ಎಂಬ ಮಾತುಗಳನ್ನು ಹೇಳಿದ ವಿಡಿಯೋ ಹರಿದಾಡುತ್ತಿದೆ. ಈ ಹೇಳಿಕೆ ಬಗೆಗೆ ಸಾಮಾಜಿಕ ಜಾಲತಾಣದಲ್ಲಿ ‘Karnataka Portfolio’ ಎಕ್ಸ್‌‌ ಖಾತೆಯಲ್ಲಿ ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ADVERTISEMENT
ADVERTISEMENT

ಟ್ವಿಟ್‌ನಲ್ಲಿ ಏನಿದೆ? 

“ಇದು ಶಿಕ್ಷಣವೇ ಅಥವಾ ವ್ಯವಸ್ಥಿತ ಬ್ರೈನ್‌ವಾಶ್ ಆಗಿದೆಯೇ? ಇಂತಹ ಧರ್ಮಾಂಧತೆ, ಮೌಢ್ಯವನ್ನು ಮಕ್ಕಳ ಮೆದುಳಿಗೆ ತುಂಬಲು ಶಾಲೆಗಳು ವೇದಿಕೆಯಾಗಿ ಬದಲಾಗಿದೆಯೇ?” ಎಂದು ಪ್ರಶ್ನಿಸಲಾಗಿದೆ. ಈ ಘಟನೆ ಚಾಮರಾಜನಗರದ ಹುಡಾ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ವೈಜ್ಞಾನಿಕ ಪ್ರದರ್ಶನದ ವೇಳೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. “ಇದು 4% ಮೀಸಲಾತಿಯ ನಿಜವಾದ ಉದ್ದೇಶವೇ? ಅಥವಾ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಟ್ಟ ₹1000 ಕೋಟಿ ಬಜೆಟ್‌ನ ‘ಉತ್ತಮ’ ಬಳಕೆ ಎನ್ನಬೇಕೇ?” ಎಂದು ಕೆಲವರು ಪ್ರಶ್ನಿಸಿದ್ದಾರೆ. ಮಕ್ಕಳು ಇನ್ನೂ ಆಟಪಾಠಗಳಲ್ಲಿ ನಿರತರಾಗಬೇಕಾದ ವಯಸ್ಸಿನಲ್ಲಿ ಇಂತಹ ಧಾರ್ಮಿಕ ಆಮಿಷದ ಮಾತುಗಳನ್ನು ಆಡುತ್ತಿರುವುದು ಆತಂಕಕಾರಿಯಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಕೆಲವು ಶಿಕ್ಷಣ ತಜ್ಞರು, ಮಕ್ಕಳಿಗೆ ವೈಜ್ಞಾನಿಕ ಮನೋಭಾವನೆ, ತರ್ಕಬದ್ಧ ಚಿಂತನೆ ಮತ್ತು ಸಾಮುದಾಯಿಕ ಸೌಹಾರ್ದತೆಯನ್ನು ಬೆಳೆಸಬೇಕು ಎಂಬುದರ ಬದಲು ಧಾರ್ಮಿಕ ಧೋರಣೆಗಳನ್ನು ತುಂಬುವುದು ಅಪಾಯಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಡಿಯೋ ಬಗ್ಗೆ ಕೆಲವರು “ಶಿಕ್ಷಣದೊಂದಿಗೆ ಧರ್ಮಾಂಧತೆ ಬೆರೆಸಬೇಡಿ” ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಎಲ್ಲ ಸಮುದಾಯಗಳಿಗೂ ಅನ್ವಯವಾಗಬೇಕಲ್ಲವೇ? ಹಿಂದೂ ಸಂಪ್ರದಾಯಗಳ ಉಲ್ಲೇಖಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಧರ್ಮಾಂಧತೆಯನ್ನು ಏಕೆ  ನೋಡಿಕೊಳ್ಳುತ್ತಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಈ ಕುರಿತು ಸರ್ಕಾರದ ನಿರ್ಲಕ್ಷ್ಯವಿರಬೇಕಾದರೆ, ಶಿಕ್ಷಣ ಇಲಾಖೆಯು ಕೂಡ ತನಿಖೆ ನಡೆಸಿ, ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ವಿದ್ಯಾರ್ಥಿಗಳಿಗೆ ಧಾರ್ಮಿಕ ಮತಾಂಧತೆ ಬೋಧನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಸಾರ್ವಜನಿಕ ವಲಯಗಳಲ್ಲಿ ಇದೆ.

ಇಂತಹ ಘಟನೆಗಳು ಮುಂದುವರೆದರೆ, ಸಮಾಜದಲ್ಲಿ ಸಾಮುದಾಯಿಕ ದ್ವೇಷ ತೀವ್ರಗೊಳ್ಳುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 

Exit mobile version