ಚಿತ್ರದುರ್ಗ: ಅನ್ಯಕೋಮಿನ ಯುವಕನ ಜೊತೆ ಯುವತಿ ವಿವಾಹವಾದ ಕಾರಣಕ್ಕೆ ಏಕಾಏಕಿ ಯುವತಿ ಮನೆಯವರಿಂದ ಯುವಕನ ಮನೆ ಮೇಲೆ ದಾಳಿ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ನಡೆದಿದೆ.
ಅವ್ರಿಬ್ಬರೂ ಹಲವು ವರ್ಷ ಪ್ರೀತಿ ಮಾಡಿ ವಿವಾಹ ಮಾಡಿಕೊಂಡಿದ್ದಾರೆ. ಅಂತರ್ಜಾತಿ ಅನ್ನೊ ಕಾರಣಕ್ಕೆ ಯುವತಿಯ ಪೊಷಕರು ಯುವಕನ ಮನೆ ಸೇರಿ 9 ಮನೆಗಳ ಮೇಲೆ ದಾಳಿ ಮಾಡಿದ್ದು, ಕಲ್ಲು, ದೊಣ್ಣೆಗಳಿಂದ ದಾಂಧಲೆ ಮಾಡಿದ್ದು, 2 ಬೈಕ್, 1 ಟಾಟಾ ಏಸ್ ಜಖಂ ಆಗಿದೆ.
ನನ್ನಿವಾಳ ಗ್ರಾಮದ ಪೃಥ್ವಿರಾಜ್ ಎಂಬ ಯುವಕನನ್ನು, ಬಂಡೆಹಟ್ಟಿಯ ಶ್ರಾವಣಿ ಎಂಬ ಯುವತಿ ಕಾಲೇಜು ವ್ಯಾಸಂಗ ಮಾಡ್ತಿದ್ದ ವೇಳೆ ಲವ್ ಮಾಡಿದ್ದರು. ಆದರೆ ನಾಯಕ ಸಮುದಾಯದ ಯುವತಿ, ಮಾದಿಗ ಸಮುದಾಯದ ಯುವಕ ಅನ್ನೋ ಕಾರಣಕ್ಕೆ ಯುವತಿ ಪೊಷಕರು ಮದುವೆಗೆ ವಿರೋಧಿಸಿದ್ದರು.
ಹಲವು ವರ್ಷಗಳಿಂದ ಪ್ರೀತಿಯ ಬಲೆಯಲ್ಲಿ ಬಿದ್ದ ಇವರಿಬ್ಬರು ಕೆಲ ದಿನಗಳ ಹಿಂದಷ್ಟೇ ಊರು ಬಿಟ್ಟು ಹೋಗಿ ಎಲ್ಲೋ ಮದುವೆ ಆಗಿದ್ದಾರೆ. ಮಗಳು ಶ್ರಾವಣಿ, ಪೃಥ್ವಿರಾಜ್ ಜೊತೆ ಮದುವೆ ಆಗಿದ್ದಾಳೆ ಎಂಬ ಮಾಹಿತಿ ಯುವತಿಯ ಪೊಷಕರಿಗೆ ತಿಳಿಯುತ್ತಿದ್ದಂತೆ ಯುವಕನ ಪೊಷಕರನ್ನ ಕೇಳಿದ್ದರಂತೆ. ಆದರೆ ಇದರ ಬಗ್ಗೆ ನಮಗೇನು ಗೊತ್ತಿಲ್ಲ ಅಂತ ಪೃಥ್ವಿರಾಜ್ ಪೊಷಕರು ಹೇಳಿದ್ದರಂತೆ.
ಇದರಿಂದ ಕೋಪಗೊಂಡ ಯುವತಿ ಪೊಷಕರು ತಡರಾತ್ರಿ ಕಲ್ಲು, ದೊಣ್ಣೆಗಳಿಂದ ನನ್ನಿವಾಳ ಗ್ರಾಮಕ್ಕೆ ಏಕಾಏಕಿ ನುಗ್ಗಿ ಯುವಕನ ಮನೆ ಸೇರಿದಂತೆ ಅವರ ಸಂಬಂಧಿಕರ 9 ಮನೆಗಳ ಮೇಲೆ ದಾಳಿ ಮಾಡಿ, ಬಾಗಿಲು ಮುರಿದು, ಕಲ್ಲು ದೊಣ್ಣೆಗಳಿಂದ 2 ಬೈಕ್, 1 ಟಾಟಾ ಏಸ್ ವಾಹನಗಳನ್ನ ಜಖಂ ಮಾಡಿದ್ದಾರೆ. ಅಲ್ಲದೇ ಯುವಕನ ತಂದೆ- ತಾಯಿಗೂ ಕೂಡಾ ಕೊಲೆ ಬೆದರಿಕೆ ಹಾಕಿದ್ದಾರೆ.
ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಳ್ಳಕೆರೆ DYSP ರಾಜಣ್ಣ, CPR ಆರ್.ಎಪ್. ದೇಸಾಯಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡಾ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.