ರೇಣುಕಾಸ್ವಾಮಿ ಹತ್ಯೆ ಕೇಸಿನ ನೆನಪುಗಳೊಂದಿಗೆ, ಅವರ ಮನೆಯಲ್ಲಿ ಇಂದು ಸಂಭ್ರಮದ ಶುಭಕಾರ್ಯ ನಡೆಯುತ್ತಿದೆ. ನಗರದ ವಿಆರ್ಎಸ್ ಬಡಾವಣೆಯಲ್ಲಿರುವ ರೇಣುಕಾಸ್ವಾಮಿಯ ನಿವಾಸದಲ್ಲಿ ಅವರ 5 ತಿಂಗಳ ಮಗುವಿನ ನಾಮಕರಣ ಶಾಸ್ತ್ರವನ್ನು ಕುಟುಂಬಸ್ಥರು ಕಣ್ಣೀರಿನ ನಡುವೆ ಆಚರಿಸಿದ್ದಾರೆ. ಮಗುವಿಗೆ “ಶಶಿಧರ ಸ್ವಾಮಿ” ಎಂದು ನಾಮಕರಣ ಮಾಡಲಾಗಿದೆ.
ರೇಣುಕಾಸ್ವಾಮಿಯನ್ನು 8 ತಿಂಗಳ ಹಿಂದೆ ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್‌ನ ಸಹವರ್ತಿಗಳು ಕೊಲೆ ಮಾಡಿದ್ದಾರೆ ಎಂಬ ಆರೋಪದಿಂದ ಚಿತ್ರದುರ್ಗ ಪೊಲೀಸರು 17 ಮಂದಿಯನ್ನು ಬಂಧಿಸಿದ್ದರು. ಈ ದುಃಖದ ನೆನಪುಗಳು ಇನ್ನೂ ಹಸಿಯಾಗಿದ್ದಾಗ, ರೇಣುಕಾಸ್ವಾಮಿಯ ಪೋಷಕರು ಮತ್ತು ಸಂಬಂಧಿಗಳು ಮಗುವಿನ ಜೊತೆ ಮೊದಲ ಬಾರಿಗೆ ಶುಭಕಾರ್ಯದಲ್ಲಿ ಭಾಗಿಯಾಗಿದ್ದಾರೆ. ರೇಣುಕಾಸ್ವಾಮಿಯ ತಂಗಿ ಸುಚೇತಾ ಅವರು ಮಗುವಿನ ಕಿವಿಯಲ್ಲಿ “ಶಶಿಧರ ಸ್ವಾಮಿ” ಎಂದು ಮೂರು ಸಾರಿ ಹೇಳಿ ಹೆಸರಿಟ್ಟರು.
ಸಾಂಪ್ರದಾಯಿಕವಾಗಿ ನಡೆದ ಈ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಮತ್ತು ನಿಕಟ ಸಂಬಂಧಿಗಳು ಮಾತ್ರ ಪಾಲ್ಗೊಂಡಿದ್ದರೂ, ಸಂಭ್ರಮಕ್ಕೆ ದುಃಖದ ಛಾಯೆ ಹರಡಿತ್ತು. ರೇಣುಕಾಸ್ವಾಮಿಯ ತಾಯಿ ರತ್ನಪ್ರಭಾ ಅವರು ಮಗನ ಮುಖ ನೋಡಿ ಕಣ್ಣೀರು ಸುರಿಸಿದರೆ, ತಂದೆ ಶಿವಗೌಡ್ರು “ನಮ್ಮ ಮಗನ ನೆನಪುಗಳು ಈ ಮಗುವಿನಲ್ಲಿ ಮುಖದಲ್ಲಿ ನೋಡುತ್ತೇವೆ ” ಎಂದು ಸಂಕಟವನ್ನು ಹಂಚಿಕೊಂಡರು. ಪೊಲೀಸ್ ತನಿಖೆ ಇನ್ನೂ ನಡೆಯುತ್ತಿರುವ ಸಂದರ್ಭದಲ್ಲಿ, ಕುಟುಂಬವು ಮಗುವಿನ ಭವಿಷ್ಯಕ್ಕಾಗಿ ಆಶಾಪೂರ್ವಕವಾಗಿ ನೋಡುತ್ತಿದೆ.