ADVERTISEMENT
ADVERTISEMENT
ಮಂಗಳೂರು: ನಗರದ ಕರಂಗಲಪಾಡಿಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಇರುವ ಇಲೆಕ್ಟ್ರಿಕ್ ವಿಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಇಡೀ ಕಟ್ಟಡವನ್ನು ದಟ್ಟ ಹೊಗೆ ಆವರಿಸಿತು.
ಅವಘಡದ ಭಯಾನಕ ಕ್ಷಣಗಳು
ಬೆಂಕಿ ಕಾಣಿಸಿಕೊಂಡ ತಕ್ಷಣ ಕಟ್ಟಡದಲ್ಲಿದ್ದ ಜನರು ಆತಂಕಗೊಂಡು ಕೆಳಗೆ ಓಡಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಕಟ್ಟಡದ ನಾಲ್ಕನೇ ಮಹಡಿಯಲ್ಲಿದ್ದ ಕಚೇರಿಯಲ್ಲಿನ ಕೆಲವೊಬ್ಬರು ಹೊಗೆಯಲ್ಲಿ ಸಿಕ್ಕಿಕೊಂಡು ಪರದಾಡಿದರು. ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾ ನಡೆಸಿದ್ದು, ಕಟ್ಟಡದಲ್ಲಿ ಸಿಕ್ಕಿಬಿದ್ದವರೆಲ್ಲರನ್ನು ಸುರಕ್ಷಿತವಾಗಿ ಹೊರತೆಗಿಯಲಾಯಿತು. ಆದರೆ ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಕಟ್ಟಡದ ಇಲೆಕ್ಟ್ರಿಕ್ ವಿಭಾಗ ಮತ್ತು ಕೆಲವು ಆಫೀಸ್‌ಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.