ಆರ್. ಮಂಜುನಾಥ್‌ VS ಮುನಿರಾಜು ದಾಸರಹಳ್ಳಿ ಜನ ಯಾರ ಪರ ?

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Film 2025 04 04t204137.706

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

2023 ವಿಧಾನಸಭಾ ಚುನಾವಣಾಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಸ್.ಮುನಿರಾಜು 91,289 ( 40 %) ಮತ ಪಡೆದು 9,194 ಮತಗಳ ಅಂತರದಿಂದ ಗೆದಿದ್ದರು. ಇವರ ವಿರುದ್ಧ ಸರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಆರ್.ಮಂಜುನಾಥ್ 82,095 ( 36 %), ಕಾಂಗ್ರೆಸ್‌ ನ ಧನಂಜಯ ಗಂಗಾಧರಯ್ಯ ಗೆ 43,519 (19 %) ಮತಗಳು ಪಡೆದಿದ್ದರು.

ADVERTISEMENT
ADVERTISEMENT

ದಾರಸರಹಳ್ಳಿ ಕ್ಷೇತ್ರದ ಚಿತ್ರಣ..

ಏಷ್ಯಾದಲ್ಲೇ ಅತಿದೊಡ್ಡ ಇಂಡಸ್ಟ್ರೀಯಲ್‌‌ ಏರಿಯಾ ಹೊಂದಿರುವ
ದಾರಸರಹಳ್ಳಿ ಕ್ಷೇತ್ರವು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತೆದೆ.
ಅತಿ ಹೆಚ್ಚು ವಲಸಿಗರು ಇರೋ ಕ್ಷೇತ್ರ ಅಂತಲೂ ಹೆಸರು ಪಡೆದಿದೆ. 2008ರಲ್ಲಿ ಮರು ವಿಂಗಡನೆಯಾದಾಗ ಬಿಜೆಪಿಯಿಂದ ಟಿಕೆಟ್ ಪಡೆದ ಮುನಿರಾಜು 2008 ಮತ್ತು 2013 ಎರಡು ಬಾರೀ ಸತತವಾಗಿ ಗೆದಿದ್ದರು, 2018ರಲ್ಲಿ ಬಿಜೆಪಿಯ ಮುನಿರಾಜು ಸೋಲಿಸಿ ಜೆಡಿಎಸ್‌ ಮಂಜುನಾಥ್‌‌ ಗೆದ್ದು ಬಿಗಿದ್ದರು. ನಂತರ 2023ರಲ್ಲಿ ಮುನಿರಾಜು ಹಾಗು ಮಂಜು ನಡುವೆ ಬಿಗ್‌ ಫೈಟ್‌‌ ನಲ್ಲಿ ಮುನಿರಾಜುಗೆ ಗೆಲುವು ಪಡೆದರು. ಒಕ್ಕಲಿಗ ಮತದಾರರು ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ದಲಿತ ಮತಗಳು ಅಧಿಕವಾಗಿವೆ.

ಮೂಡ್‌ ಆಫ್‌ ಕರ್ನಾಟಕ ದಾಸರಹಳ್ಳಿ ಜನರ ಮೂಡ್ ಹೇಗಿದೆ.?

2023ರ ಚುನಾವಣೆಗೆ ಹೋಲಿಸಿದರೆ ಈಗ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗಿದ್ದು, ಜೆಡಿಎಸ್‌‌ನಲ್ಲಿದ್ದ ಮಂಜುನಾಥ್‌ ಈಗ ಕಾಂಗ್ರೆಸ್ ಸೇರಿದ್ದಾರೆ. ಮುಂದಿನ ಚುನಾವಣೆಯಲ್ಲಿ ದಾರಸಹಳ್ಳಿ ರೋಚಕತೆಗೆ ಸಾಕ್ಷಿ ಆಗಬಹುದು.ಇಲ್ಲಿ ಯಾರೇ ಗೆದ್ದರು 5 ಸಾವಿರ ಮತಗಳ ಒಳಗೆ ಲೀಡ್‌ ಇರಲಿದೆ. ಬಿಜೆಪಿ ಒಳ ಜಗಳ ಮುನಿರಾಜುಗೆ ಪೆಟ್ಟು ಬೀಳಬಹುದು. ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿ ಕಾಂಗ್ರೆಸ್ ಗೆ ವರ ಆಗುವ ನಿರೀಕ್ಷೆಗಳಿ ಇವೆ.ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ಈಗಲೂ ದಾಸರಹಳ್ಳಿ ಆರ್. ಮಂಜುನಾಥ್‌ ಗೆಲ್ಲುವ ಸಾಧ್ಯತೆ ಹೆಚ್ಚಿದ್ದು, ಬಿಜೆಪಿಯ ಮುನಿರಾಜು ಎಚ್ಚೆತ್ತುಕೊಳ್ಳುವ ಸಮಯ.

ದಾಸರಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು

ದಾಸರಹಳ್ಳಿ ಕ್ಷೇತ್ರದಿಂದ ಎಸ್. ಮುನಿರಾಜು ಬಿಜೆಪಿ ಪರ ಕಣಕ್ಕೆ ಇಳಿದರೆ.
ಕಾಂಗ್ರೆಸ್‌ ನಲ್ಲಿ ಆರ್. ಮಂಜುನಾಥ್, ಧನಂಜಯ ಗಂಗಾಧರಯ್ಯ, ನಾಗಲಕ್ಷ್ಮಿ ಚೌಧರಿ, ಗೀತಾ ಶಿವರಾಂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version