ಹುಬ್ಬಳ್ಳಿಯ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣವೇ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಲೇ ಇದೆ. ಹೀಗಿರುವಾಗಲೇ ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ಮರ್ಡರ್ ಆಗಿದೆ. ಕೊಲೆಯಾಗಿರುವುದು 22 ವರ್ಷದ ಯುವತಿ. ಹೆಸರು ಸ್ವಾತಿ. ಕೊಲೆ ಆರೋಪಿಯ ಹೆಸರು ನಯಾಜ್.
ಮಾರ್ಚ್ 6ನೇ ತಾರೀಕು, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಪತ್ತೆಪುರ ಬಳಿ, ಒಬ್ಬ ಯುವತಿಯ ಶವ ಪತ್ತೆಯಾಗಿತ್ತು. ಪೊಲೀಸರೇ ಯು.ಡಿ.ಆರ್. ಅಂದ್ರೆ ಅನ್ ನ್ಯಾಚುರಲ್ ಡೆತ್ ಕೇಸ್ ದಾಖಲಿಸಿಕೊಂಡು, ಪೋಸ್ಟ್ ಮಾರ್ಟಂ ಕೂಡಾ ಮಾಡಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಯುವತಿಯನ್ನು ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಬಿಸಾಕಿ ಹೋಗಿದ್ದಾರೆ ಅನ್ನೋದು ಗೊತ್ತಾಯ್ತು. ಆಮೇಲೆ ಅದು ಸ್ವಾತಿ ಅನ್ನೋ ಯುವತಿಯ ಶವ ಎನ್ನೋದು ಕನ್ಫರ್ಮ್ ಆಯ್ತು.
ಸ್ವಾತಿಗೆ ಇನ್ನೂ 22 ವರ್ಷ. ಹಾವೇರಿಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದವಳು. ಈ ಸ್ವಾತಿ, ನಯಾಜ್ ಅನ್ನೋ ಹುಡುಗನನ್ನ ಪ್ರೀತಿ ಮಾಡ್ತಿದ್ದಳಂತೆ.
ಸ್ವಾತಿ ಎಂಬ ಯುವತಿ ಶವ ಎನ್ನುವುದು ಗೊತ್ತಾಗಿದ್ದು, ತನಿಖೆ ತೀವ್ರಗೊಳಿಸಿದಾಗ ಸ್ವಾತಿ ಹಂತಕ ನಯಾಜ್ ಎನ್ನುವುದು ದೃಢಪಟ್ಟಿದ್ದು, ಇದೀಗ ನಯಾಜ್ ಸೇರಿದಂತೆ ಮೂವರು ಆರೋಪಗಳ ಹೆಡೆಮುರಿಕಟ್ಟಿದ್ದಾರೆ. ಆದ್ರೆ, ನಯಾಜ್ನ ಕ್ರೌರ್ಯ ಬೆಚ್ಚಬೀಳಿಸಿದೆ.
ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ನಯಾಜ್ ಹಾಗೂ ವಿನಯ್ , ದುರ್ಗಾಚಾರಿ ಎಂಬ ಯುವಕರೇ ಸ್ವಾತಿ ಹತ್ಯೆ ಗೈದವರು ಎಂದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ನಯಾಜ್ ಹಿರೇಕೇರೂರು ತಾಲೂಕು ಹಳೆ ವಿರಾಪುರ ಗ್ರಾಮದವನು. ಕೊಲೆಯಾದ ಸ್ವಾತಿ ಹಾಗೂ ಕೊಲೆ ಮಾಡಿದ ಮೂವರು ಆರೋಪಿಗಳು ಹೋರಿ ಬೆದರಿಸುವ ಸ್ಪರ್ಧೆ ಅಭಿಮಾನಿಗಳು.
ಹೋರಿ ಬೆದರಿಸೋ ಸ್ಪರ್ಧೆಗೆ ಬರುತ್ತಿದ್ದ ಸ್ವಾತಿಗೆ, ಈ ನಯಾಜ್ ಅನ್ನೋವ್ನ ಪರಿಚಯವಾಗಿದೆ. ಪರಿಚಯ ಪ್ರೀತಿಯಾಗಿದೆ. ನಯಾಜ್ ಜೊತೆಗೆ ವಿನಯ್, ದುರ್ಗಾಚಾರಿ ಅನ್ನೋ ಇನ್ನಿಬ್ಬರ ಜೊತೆಯಲ್ಲೂ ಸ್ನೇಹ ಬೆಳೆದಿದೆ. ಪ್ರೀತಿ ಮಾಡ್ತಿದ್ದ ನಯಾಜ್, ಸ್ವಾತಿಗೆ ಮತಾಂತರವಾದರೆ ಮದುವೆಯಾಗ್ತೇನೆ ಎಂದು ಹೇಳಿದ್ದನಂತೆ. ಆದರೆ, ಸ್ವಾತಿ ಒಪ್ಪಿಲ್ಲ. ಗೆಳೆಯರಾಗಿದ್ದ ವಿನಯ್ ಮತ್ತು ದುರ್ಗಾಚಾರಿ ಇಬ್ಬರೂ ಕೂಡಾ ನಯಾಜ್‌ನಿಂದ ದೂರ ಇರು ಎಂದು ಹೆದರಿಸಿದ್ದರಂತೆ. ಒಪ್ಪದೇ ಹೋದಾಗ ಮರ್ಡರ್ ಆಗಿದೆ ಅನ್ನೋದು ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿರೋ ಮಾಹಿತಿ.
ಇದಾದ ಮೇಲೆ ನಯಾಜ್, ಸ್ವಾತಿಯನ್ನ ಕೊಲೆ ಮಾಡೋಕೆ ಸ್ಕೆಚ್ ಹಾಕಿದ್ದಾನೆ. ಕೊಲೆಗೆ ಸಾಥ್ ನೀಡಿರೋದು ವಿನಯ್ ಮತ್ತು ದುರ್ಗಾಚಾರಿ. ಬಾಡಿಗೆ ಕಾರು ಮಾಡಿಕೊಂಡು ಬಂದವರು, ರಾಣೇಬೆನ್ನೂರು ಹೊರ ವಲಯದ ಸುವರ್ಣ ಪಾರ್ಕ್ ಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಕಾರಿನಲ್ಲೇ ಟವೆಲ್ ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾರೆ.
ಮಾರ್ಚ್ 3ನೇ ತಾರೀಕು ಸ್ವಾತಿ ಕಾಣೆಯಾಗಿದ್ದಾಳೆ. ಎಲ್ಲೋ ಹೋಗಿರಬಹುದು ಎಂದು ತಮ್ಮ ಪ್ರಯತ್ನವನ್ನೆಲ್ಲ ಮಾಡಿ, ಮೂರು ದಿನಗಳ ನಂತರ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದಾರೆ. ನರ್ಸ್ ಆಗಿ ಕೆಲಸ ಮಾಡ್ತಿದ್ದ ಸ್ವಾತಿಗೆ ತಂದೆ ಇರಲಿಲ್ಲ. ತಾಯಿ ಮಾತ್ರ ಇದ್ದರು. ತಾಯಿ ಶಶಿರೇಖಾ, ಮಗಳ ಶವವನ್ನ ಗುರುತಿಸಿದ್ದಾರೆ.
ಮೇಲ್ನೋಟಕ್ಕೆ ಇದು ಲವ್ ಜಿಹಾದ್ ಪ್ರಕರಣ ಎಂದು ಕಂಡು ಬಂದರೂ, ಆರೋಪಿಗಳಲ್ಲಿ ಇಬ್ಬರು ಹಿಂದೂ ಯುವಕರ ಹೆಸರೂ ಕೂಡಾ ಇರೋದ್ರಿಂದ ಇದು ಲವ್ ಜಿಹಾದ್ ಅಲ್ಲ, ಬೇರೇನೋ ಇರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ತನಿಖೆ ನಡೆಯುತ್ತಿದೆ.