ಹಾವೇರಿ(ರಾಣೆಬೆನ್ನೂರು) ಉದ್ದಿಮೆ ಸ್ಥಾಪಿಸಲು ಹಾವೇರಿ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶ ಇದೆ. ದೂರದೃಷ್ಟಿ ಇಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ತರಲು ಎಲ್ಲರೂ ಪ್ರಯತ್ನ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಕಮದೋಡ ಗ್ರಾಮದ ಹೊರವಲಯದಲ್ಲಿ ವಿಂಡೋ ಕ್ರಾಫ್ಟ್ ತಯಾರಿಕಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಹಾವೇರಿಯಲ್ಲಿ 400 ಎಕರೆಯ ಇಂಡಸ್ಟ್ರೀಯಲ್ ಟೌನ್ ಶಿಪ್ ಮಾಡಿದ್ದೇವೆ. ಅಲ್ಲಿ ನಮ್ಮ ಯುವಕರಿಗೆ ವಿಫುಲವಾದ ಅವಕಾಶವಿದೆ. ರಾಣೆಬೆನ್ನೂರು ಸಾಕಷ್ಟು ಅವಕಾಶಗಳಿರುವ ನಗರ, ಇಲ್ಲಿ ಉದ್ಯಮಗಳನ್ನು ತೆರೆದು ಇಲ್ಲಿನ ಯುವಕರಿಗೆ ಉದ್ಯೋಗ ಕಲ್ಪಿಸಲು ಅವಕಾಶ ಇದೆ. ಏಕೆಂದರೆ ಭೂಮಿ ಅಷ್ಟೇ ಇದೆ. ಆದರೆ, ಭೂಮಿಯ ಮೇಲಿನ ಅವಲಂಬನೆ ಹೆಚ್ಚಾಗಿದೆ. ಹೀಗಾಗಿ ಎಲ್ಲ ರಂಗದಲ್ಲಿ ನಾವು ಬೆಳೆಯಬೇಕು. ನಮ್ಮ ಜಿಲ್ಲೆ ದೊಡ್ಡ ಅವಕಾಶ ಇರುವ ಜಿಲ್ಲೆ, ಸಾಕಷ್ಟು ಉದ್ದಿಮೆ ತರಲು ಅವಕಾಶ ಇದೆ. ದೂರದೃಷ್ಟಿ ಇಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ತರಲು ಎಲ್ಲರೂ ಪ್ರಯತ್ನ ಮಾಡೋಣ ಎಂದು ಹೇಳಿದರು.
ಸಂತೋಷ್ ಪಾಟೀಲ್ ಅವರು ಆಧುನಿಕ ಕ್ರಾಪ್ಟ್ ತಯಾರು ಮಾಡುವ ಘಟಕ ಪ್ರಾರಂಭ ಮಾಡಿದ್ದಾರೆ. ವಿಂಡೋ ಕಾಪ್ಸ್ ಸಂಸ್ಥೆ ಆಧುನಿಕವಾಗಿ ತಯಾರು ಮಾಡುವಂತ ಪಾಲೆಥೆನಿಯಂ ಹಾಗೂ ಫಾಲಿಕೆಮಿಕಲ್ ಇರುವ ಆಧುನಿಕ ವಸ್ತುಗಳಿಗೆ ಬಹಳ ಬೆಡಿಕೆ ಇದೆ. ಮೊದಲು ಕಟ್ಟಿಗೆ ವಸ್ತುಗಳಿಗೆ ಬೇಡಿಕೆ ಇತ್ತು. ಈಗಲೂ ಹಳೆಯ ಮನೆಗಳಿಗೆ ತೇಗಿನ ಮರಗಳ ತೊಲೆಗಳಿವೆ. ಈಗ ಕಾಲ ಬದಲಾಗಿದೆ. ಕಾಡು ಕಡಿಮೆಯಾಗಿದೆ. ಇದರಿಂದ ನಮ್ಮ ಪರಿಸರದ ಮೇಲೆ ಬಹಳ ಪರಿಣಾಮವಾಗುತ್ತಿದೆ. ಹೀಗಾಗಿ ಬೇರೆ ಬೇರೆ ಪದಾರ್ಥಗಳಿಂದ ದಿನಬಳಕೆಗೆ ಹೊಸ ಹೊಸ ಸಂಶೋಧನೆ ಮಾಡಿ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ಮೊದಲು ದೆಹಲಿ, ಬಾಂಬೆ, ಬೆಂಗಳೂರಿನಲ್ಲಿ ಈ ರೀತಿಯ ವಸ್ತುಗಳಿಗೆ ಬೇಡಿಕೆ ಇತ್ತು. ಈಗ ಸಣ್ಣ ನಗರಗಳಲ್ಲಿಯೂ ಬೇಡಿಕೆ ಇದೆ ಎಂದು ಹೇಳಿದರು.
ಸಂತೋಷ ಉದ್ಯಮಿಯಾಗಿ ಉದ್ಯೋಗ ಕೊಡು ಎನ್ನುವ ಉದ್ದೇಶದಿಂದ ಈ ಕಾರ್ಖಾನೆ ಸ್ಥಾಪಿಸಿದ್ದಾನೆ. ಅವನು ಬಹಳ ಶ್ರಮವಹಿಸಿದ್ದಾನೆ. ಇಡೀ ಉತ್ತರ ಕರ್ನಾಟಕಕ್ಕೆ ಉತ್ಪನ್ನಗಳನ್ನು ಪೂರೈಕೆ ಮಾಡುವಂತಾಗಲಿ. ಕಾಲ ಬದಲಾವಣೆಯಾಗುತ್ತಿದೆ. ಹೊಸ ಆವಿಷ್ಕಾರಗಳು ಬರುತ್ತಿವೆ. ಈ ಉದ್ಯಮದಲ್ಲಿ ನಮ್ಮ ಹುಡುಗರನ್ನು ತೊಡಗಿಸಿಕೊಳ್ಳಬೇಕು. ನಮ್ಮ ಭಾಗದ ಯುವಕರಿಗೆ ಜಾಣ್ಮೆ ಇದೆ. ಹೊಸ ಹುಡುಗರ ಆತ್ಮವಿಶ್ವಾಸ ಮತ್ತು ಉತ್ಸಾಹವೇ ಬಂಡವಾಳ. ಬಹಳ ಜನರಿಗೆ ಅವಕಾಶ ಸಿಗುವುದಿಲ್ಲ. ಕೆಲವರು ಅವಕಾಶಗಳನ್ನು ಸದುಪಯೋಗ ಪಡೆಸಿಕೊಳ್ಳುವುದಿಲ್ಲ. ನಾನು ಕೈಗಾರಿಕೆ ಸ್ಥಾಪಿಸುವಾಗ ನನ್ನ ಬಳಿ 3 ಲಕ್ಷ ರೂ. ಬಂಡವಾಳ ಇತ್ತು. ಅದರಲ್ಲಿ ನಮ್ಮ ತಂದೆಯ ಬಳಿ 1 ಲಕ್ಷ ಸಾಲ ಪಡೆದು ಉದ್ಯಮ ಸ್ಥಾಪಿಸಿದ್ದೆ. ಕೆಲವರು ಕಾರ್ಖಾನೆ ಸ್ಥಾಪನೆಗೆ ಬಂದ ಸಬ್ಸಿಡಿ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಉದ್ದಿಮೆ ಹಾಳು ಮಾಡಿಕೊಂಡಿದ್ದಾರೆ ಎಂದರು.
ಉದ್ಯಮದಲ್ಲಿ ಕಷ್ಟ ಬರುತ್ತದೆ. ಕಷ್ಟ ಬಂದಾಗ ಗಟ್ಟಿಯಾಗಿ ನಿಂತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಪ್ರಾಮಾಣಿಕತೆ ಬಿಟ್ಟು ಸುಳ್ಳು ಹೇಳಿದರೆ ವ್ಯವಹಾರ ನಿಲ್ಲುವುದಿಲ್ಲ. ವ್ಯವಹಾರ ಸತ್ಯದ ಮೇಲೆ ತೀರ್ಮಾನವಾಗುತ್ತದೆ. ಉದ್ಯಮದಲ್ಲಿ ಪಾಮಾಣಿಕತೆ ಮತ್ತು ಶ್ರಮ ಬೇಕು. ರಾಜಕಾರಣಿ ಮತ್ತು ಉದ್ಯಮಿಗಳಿಗೆ ಒಂದು ಕಿವಿ ಮಾತು ಉದ್ಯಮ ನಮಗೆ ಜೀವನದ ಆಹಾರ. ಇದನ್ನು ಬಿಟ್ಟು ರಾಜಕಾರಣ ಮಾಡಬೇಡಿ ಇದನ್ನು ಬಿಟ್ಟು ರಾಜಕಾರಣ ಮಾಡಿದರೆ, ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ ಅನ್ನುವಂತಾಗುತ್ತದೆ. ಉದ್ಯಮವನ್ನು ಚನ್ನಾಗಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ರಾಣೆಬೆನ್ನೂರಿನಲ್ಲಿ ಇಂತಹ ಆಧುನಿಕ ಕಾರ್ಖಾನೆ ಆಗಿರುವುದು ಸಂತೋಷದ ವಿಷಯ ಎಂದರು.
ಈ ಸಂಧರ್ಭದಲ್ಲಿ ರಾಣೆಬೆನ್ನೂರ ಶಾಸಕರಾದ ಪ್ರಕಾಶ ಕೋಳಿವಾಡ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವೀರುಪಾಕ್ಷಪ್ಪ ಬಳ್ಳಾರಿ ಯುವ ಮುಖಂಡರಾದ ಭರತ ಬೊಮ್ಮಾಯಿ, ವಿಂಡೋಕ್ರಾಫ್ಟ್ ತಯಾರಿಕಾ ಘಟಕದ ಮಾಲಕರಾದ ಸಂತೋಷ ಪಾಟೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.