ಚಲಿಸುತ್ತಿದ್ದ ಆಟೋಗೆ ಬೆಂಕಿ: ನಡುರಸ್ತೆಯಲ್ಲೇ ಹೊತ್ತಿ ಉರಿದ ಆಟೋ

123 (65)

ಕಲಬುರಗಿ: ಕಲಬುರಗಿಯ ರಾಮ ನಗರದಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ದಗದಗನೇ ಉರಿದ ಘಟನೆ ನಡೆದಿದೆ.

ನೋಡ ನೋಡುತ್ತಿದ್ದಂತೆ ಆಟೋಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳೀಯರು ತಕ್ಷಣವೇ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ.

ADVERTISEMENT
ADVERTISEMENT

ಬೆಂಕಿಗೆ ತುತ್ತಾದ ಆಟೋ ವೀರಭದ್ರಪ್ಪ ಎಂಬವರಿಗೆ ಸೇರಿದ್ದಾಗಿದೆ. ಈ ಘಟನೆ ಕಲಬುರಗಿ ಸಂಚಾರಿ ಠಾಣೆ 2ರ ವ್ಯಾಪ್ತಿಯಲ್ಲಿ ನಡೆದಿದೆ.

ಗುಜರಾತ್‌ನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ: ಮಕ್ಕಳನ್ನು ಕಾಪಾಡಲು ತಾಯಿ ಸಾಹಸ

ಅಹ್ಮದಾಬಾದ್: ಗುಜರಾತ್‌ನ ಅಹ್ಮದಾಬಾದ್ ನಗರದ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಮಕ್ಕಳನ್ನು ರಕ್ಷಿಸಲು ತಾಯಿಯೊಬ್ಬರು ಕೈಗೊಂಡ ಸಾಹಸ ನಿರ್ಧಾರ ಎಲ್ಲರ ಗಮನ ಸೆಳೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಹ್ಮದಾಬಾದ್‌ನ ಅಪಾರ್ಟ್‌ಮೆಂಟ್‌ ನ 12 ಮಹಡಿಗಳ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಸುಮಾರು 7 ಗಂಟೆಯ ಸುಮಾರಿಗೆ ಈ ಬೆಂಕಿ ಕಾಣಿಸಿಕೊಂಡಿತ್ತು. ಈ ಅಪಘಾತದಲ್ಲಿ 6ನೇ ಮಹಡಿಯಲ್ಲಿ ಇದ್ದ ಫ್ಲ್ಯಾಟ್‌ವೊಂದರಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಅದು ಕ್ಷಣಾರ್ಧದಲ್ಲೇ ಇಡೀ ಮಹಡಿಗೆ ಹಾಗೂ ಮೇಲ್ಮಹಡಿಗಳಿಗೆ ಹಬ್ಬಿತ್ತು.

ಬೆಂಕಿಯಿಂದ ಉಂಟಾದ ತೀವ್ರ ಹೊಗೆ, ಶ್ವಾಸಕೋಶಕ್ಕೆ ತೊಂದರೆ ತಂದ ಕಾರಣ, ಕಟ್ಟಡದಲ್ಲಿದ್ದ ನಿವಾಸಿಗಳು  ಜೀವ ಉಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತೋ ಆ ರೀತಿಯಲ್ಲಿ ಪರದಾಡುವ ಸ್ಥಿತಿ ಉಂಟಾಯಿತು. ಇಂಥ ಸಂಕಟದ ಸಂದರ್ಭದಲ್ಲಿ ತಾಯಿಯೊಬ್ಬರು ತಾವು ಹಾಗೂ ತಮ್ಮ ಪುಟ್ಟ ಮಕ್ಕಳನ್ನು ರಕ್ಷಿಸಲು ಕೈಗೊಂಡ ಸಾಹಸ ಮನಕಲುಕುವಂತಿತ್ತು.

ಅವರ ಫ್ಲ್ಯಾಟ್‌ನಲ್ಲಿ ಹೊಗೆ ತುಂಬಿ ಉಸಿರಾಡಲು ಕೂಡ ಆಗದ ಪರಿಸ್ಥಿತಿಯಲ್ಲಿದ್ದು, ಬಾಲ್ಕನಿಗೆ ಬಂದ ಅವರು ತಮ್ಮ ಎರಡು ಪುಟ್ಟ ಮಕ್ಕಳನ್ನು ಕೆಳಗಿದ್ದ ಯುವಕರಿಗೆ ಎಸೆದು ರಕ್ಷಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟರು. ಮೊದಲು ಅವರು ತನ್ನ ಮೊದಲ ಮಗುವನ್ನು ಬಾಲ್ಕನಿಯಿಂದ ಜಾಗರೂಕವಾಗಿ ನೇತಾಡಿಸಿ, ಕೆಳಗಿದ್ದ ಇಬ್ಬರು ಯುವಕರಿಗೆ ಕೊಡಲಾಯಿತು. ನಂತರ ಮತ್ತೊಂದು ಮಗುವನ್ನು ಸಹ ಅದೇ ರೀತಿಯಲ್ಲಿ ಕಳಿಸಿದರು. ಮಕ್ಕಳು ಸುರಕ್ಷಿತವಾಗಿ ಕೆಳಗೆ ಇಳಿದ ಬಳಿಕ ತಾಯಿ ತಾನೂ ಸಹ ಜೀವವನ್ನು ಪಣಕ್ಕಿಟ್ಟು, ಆತುರದ ಹೊರಟು ಕೆಳಗೆ ಇಳಿದರು.

ಈ ದೃಶ್ಯಗಳನ್ನೊಳಗೊಂಡ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಾಯಿಯ ಧೈರ್ಯ ಹಾಗೂ ನಿರ್ಧಾರಕ್ಕೆ ಹಲವರು ಶ್ಲಾಘಿಸಿದ್ದಾರೆ. ಕೆಲ ಸೆಕೆಂಡುಗಳಲ್ಲಿ ನಡೆಯುವ ಈ ಘಟನೆ ವ್ಯಕ್ತಿಯೊಬ್ಬರ ಬದುಕಿನಲ್ಲಿ ಎಷ್ಟೊಂದು ತೀವ್ರ ಮತ್ತು ಭಯಾನಕ ಕ್ಷಣಗಳನ್ನು ತಂದೀತು ಎಂಬುದಕ್ಕೆ ಸಾಕ್ಷಿಯಾಗಿದೆ.

ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ತಕ್ಷಣ ಬೆಂಕಿಯನ್ನು ನಂದಿಸುವ ಕಾರ್ಯವನ್ನು ಆರಂಭಿಸಿದರು. ಸ್ಥಳೀಯ ಪೊಲೀಸರು ಹಾಗೂ ಸಿಬ್ಬಂದಿಯರು ಕೂಡ ಕೂಡಲೇ ಸ್ಥಳಕ್ಕೆ ಧಾವಿಸಿ ಕಟ್ಟಡದಲ್ಲಿದ್ದ ಎಲ್ಲಾ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿದರು. ಅಗ್ನಿಶಾಮಕ ಇಲಾಖೆಯ ಪ್ರಕಾರ, ಅಗ್ನಿ ತೀವ್ರವಾಗಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ ಅಪಾರ್ಟ್‌ಮೆಂಟ್‌ನಲ್ಲಿ ಸಾಕಷ್ಟು ಆಸ್ತಿ ಹಾನಿಯಾಗಿದೆ.

Exit mobile version