ಕಲಬುರಗಿಯಲ್ಲಿ ಗಾಂಜಾ ಮಾರಾಟಗಾರರ ಬಂಧನ: 6.5 ಲಕ್ಷ ಮೌಲ್ಯದ ಗಾಂಜಾ ಜಪ್ತಿ

123 2025 04 23t174357.218

ಕಲಬುರಗಿ: ಕಲಬುರಗಿ ನಗರದ ಲಂಗಾರ ಹನುಮಾನ ಗುಡಿ ಸಮೀಪ ನಿಷೇಧಿತ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಬ್ ಅರ್ಬನ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಳಿಯಿಂದ 6 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ 6.915 ಕೆ.ಜಿ ನಿಷೇಧಿತ ಗಾಂಜಾವನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಆಜಾದಪೂರ ರಸ್ತೆಯ ಉಮರ್ ಕಾಲೋನಿಯ ನಿವಾಸಿ ಶಹಬಾಜ ಅಬ್ದುಲ್ ರಶೀದ (30) ಮತ್ತು ಹಗರಗಾ ರಸ್ತೆಯ ಅಮನ ನಗರದ ನಿವಾಸಿ ಬಾನು ಮಹ್ಮದ್ ಇಸ್ಮಾಯಿಲ್ (31). ಇವರು ಮಹಾರಾಷ್ಟ್ರದ ಜಲಗಾಂವದಿಂದ ಗಾಂಜಾವನ್ನು ತಂದು, ಉಮರ್ ಕಾಲೋನಿಯ ನಿವಾಸಿ ಅಬ್ಬು ಶೇಖ್ ಅಲಿಯಾಸ್ ಸ್ಪೀಡ್ ಅಬ್ಬು (ತಂದೆ: ನವಾಬ್ ಶೇಖ್) ಮತ್ತು ಬಾಪು ನಗರದ ನಿವಾಸಿ ರಮೇಶ್ ವಿಜಯಕುಮಾರ ಕಾಳೆ ಎಂಬವರಿಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ADVERTISEMENT
ADVERTISEMENT

ಪೊಲೀಸರು ಈ ಪ್ರಕರಣದಲ್ಲಿ ತನಿಖೆಯನ್ನು ಮುಂದುವರೆಸಿದ್ದು, ಗಾಂಜಾ ಮಾರಾಟದ ಜಾಲದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ಸಿಸಿಬಿ ಪೊಲೀಸರ ಭರ್ಜರಿ ದಾಳಿ: ₹5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

ಬೆಂಗಳೂರು ನಗರದಲ್ಲಿ ಸಿಸಿಬಿ (ಅಪರಾಧ ಶಾಖಾ ವಿಭಾಗ) ಪೊಲೀಸರು ಡ್ರಗ್ಸ್ ಮಾಫಿಯಾ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಿರುವ ಪೊಲೀಸರು, ಒಟ್ಟಾರೆ ₹5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಪ್ರಕರಣದಲ್ಲಿ, ಅಧಿಕಾರಿಗಳು ₹3.5 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ ಮಾಡಿದ್ದಾರೆ. ಇದಕ್ಕೆ ಜೊತೆಗೆ ಆರೋಪಿಯ ಬಳಿ ಸಿಕ್ಕ ₹30 ಲಕ್ಷ ನಗದನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಎರಡನೇ ಪ್ರಕರಣದಲ್ಲಿ, ಸಿಸಿಬಿ ಪೊಲೀಸರು ಸುಮಾರು 1 ಕೆಜಿ ಎಂಡಿಎಂಎ (MDMA) ಡ್ರಗ್‌ ಅನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ₹1.5 ಕೋಟಿ ಎಂದು ಅಂದಾಜಿಸಲಾಗಿದೆ. ಇದನ್ನು ಈ ಹಿಂದೆ ಈಗಲ್ ಟನ್ ರೆಸಾರ್ಟ್‌ನಲ್ಲಿ ಬಂಧನೆಯಾದ ಡ್ರಗ್ ಪೆಡ್ಲರ್‌ನಿಂದಲೇ ಮತ್ತೆ ಸಿಗಿಸಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಪಿತರು ಬೆಂಗಳೂರು ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುವ ಉದ್ದೇಶದಿಂದ ಸಾಗಾಟ ನಡೆಸುತ್ತಿದ್ದರೆಂದು ಮೂಲಗಳಿಂದ ಮಾಹಿತಿ ಲಭಿಸಿದೆ.

 

    Exit mobile version