ಮಂಗಳಮುಖಿ ತನುಶ್ರೀ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

123 2025 04 28t120903.756

ಕೆ.ಆರ್.ಪುರಂ ಪೊಲೀಸರು ಮಂಗಳಮುಖಿ ತನುಶ್ರೀ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಜಗದೀಶ್, ಪ್ರಭಾಕರ್, ಮತ್ತು ಸುಶಾಂತ್‌ರನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಜಗದೀಶ್ ಕೊಲೆಯನ್ನು ಯೋಜಿತವಾಗಿ ಮಾಡಿರುವುದು ಬಯಲಾಗಿದೆ. ತನುಶ್ರೀ ಜಗದೀಶ್‌ನನ್ನು ಬಲವಂತವಾಗಿ ಮದುವೆಯಾಗಲು ಒತ್ತಾಯಿಸುತ್ತಿದ್ದಳು ಎಂಬುದು ಕೊಲೆಗೆ ಕಾರಣವಾಗಿದೆ.

ಏಪ್ರಿಲ್ 17ರ ರಾತ್ರಿ ಜಗದೀಶ್ ತನುಶ್ರೀ ಮನೆಗೆ ಬಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆಗೆ ಧೈರ್ಯಕ್ಕಾಗಿ ತನ್ನ ಇಬ್ಬರು ಸ್ನೇಹಿತರಾದ ಪ್ರಭಾಕರ್ ಮತ್ತು ಸುಶಾಂತ್‌ರನ್ನು ಜೊತೆಗೆ ಕರೆತಂದಿದ್ದ. ಈ ಇಬ್ಬರು ಕೊಲೆಯ ಯೋಜನೆ ಮತ್ತು ಕೃತ್ಯಕ್ಕೆ ಸಹಕಾರ ನೀಡಿದ್ದಾರೆ. ಕೊಲೆಯ ಬಳಿಕ ಜಗದೀಶ್ ತಿರುಪತಿಗೆ ಪರಾರಿಯಾಗಿದ್ದ. ಏಪ್ರಿಲ್ 20ರಂದು ತನುಶ್ರೀ ಮನೆಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಕೊಲೆ ನಡೆದ ಮೂರು ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿತು.

ADVERTISEMENT
ADVERTISEMENT

ತನುಶ್ರೀ ಮತ್ತು ಜಗದೀಶ್ ಸಾಮಾಜಿಕ ಸೇವೆಯ ಸಂದರ್ಭದಲ್ಲಿ ಪರಿಚಯವಾಗಿದ್ದರು. ಇಬ್ಬರ ನಡುವೆ ಸ್ನೇಹ ಬೆಳೆದಿತ್ತು, ಮತ್ತು ಒಂದೆರಡು ಬಾರಿ ಸಾಮಾಜಿಕ ಕಾರ್ಯಕ್ಕಾಗಿ ಒಟ್ಟಿಗೆ ಪ್ರಯಾಣಿಸಿದ್ದರು. ಜಗದೀಶ್ ಆಗಾಗ ತನುಶ್ರೀ ಮನೆಗೆ ಭೇಟಿ ನೀಡುತ್ತಿದ್ದ. ಆದರೆ, ತನುಶ್ರೀ ಜಗದೀಶ್‌ನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದಳು. ಈ ಕಾಟಕ್ಕೆ ಬೇಸತ್ತ ಜಗದೀಶ್ ಕೊಲೆಗೆ ಯೋಜನೆ ರೂಪಿಸಿದ್ದಾನೆ.

ಕೊಲೆ ಪ್ರಕರಣ ದಾಖಲಿಸಿಕೊಂಡ ಕೆ ಆರ್.ಪುರಂ ಪೊಲೀಸರು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ಜಗದೀಶ್ ಕೊಲೆಯನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version