ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮೀಣ ಗಡಿಯಲ್ಲಿರುವ ಎ. ನಾಗತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಶತಮಾನೋತ್ಸವದ ಹೆಮ್ಮೆಯೊಂದಿಗೆ ಮಾದರಿ ಶಿಕ್ಷಣಕೇಂದ್ರವಾಗಿ ಬೆಳೆಯುತ್ತಿದೆ. ಈ ಶಾಲೆ, ಗ್ರಾಮೀಣ ಪ್ರದೇಶದ 20 ಹಳ್ಳಿಗಳ ವಿದ್ಯಾರ್ಥಿಗಳಿಗೆ ಜ್ಞಾನದ ಬಾಗಿಲು ತೆರೆದು, ಏಳು ದಶಕಗಳ ಕಾಲ ಗುಣಮಟ್ಟದ ಶಿಕ್ಷಣ ನೀಡಿತ್ತು. ಇಂಗ್ಲಿಷ್ ಮಾಧ್ಯಮದ ಪಠ್ಯಕ್ರಮ, ಆಧುನಿಕ ಸೌಲಭ್ಯಗಳು ಮತ್ತು ಸಮುದಾಯದ ಬೆಂಬಲದಿಂದ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯವನ್ನು ಹೊಂದಿದೆ.
1925ರಲ್ಲಿ ಪ್ರಾರಂಭವಾದ ಈ ಸರ್ಕಾರಿ ಪ್ರಾಥಮಿಕ ಶಾಲೆಯು ಪ್ರಾರಂಭದ ದಿನಗಳಿಂದಲೇ ಗ್ರಾಮ ಹಾಗೂ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯಾಭ್ಯಾಸದ ಕೇಂದ್ರವಾಗಿತ್ತು. 1950ರಲ್ಲಿ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ವಿಸ್ತರಿಸಲಾಯಿತು. ಶೈಕ್ಷಣಿಕ ಗುಣಮಟ್ಟ, ಪರಿಶ್ರಮಿ ಶಿಕ್ಷಕರು ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಪೀಠಕ್ಕೆ ಈ ಶಾಲೆಯು ಪ್ರಾಮುಖ್ಯತೆಯನ್ನು ಗಳಿಸಿತು.