ಮಧ್ಯರಾತ್ರಿ ಮನೆ ಬಾಗಿಲು ತಟ್ಟಿದ ಯುವತಿ: ಮದ್ಯ ಕುಡಿಸಿ ರೇಪ್ ಶಂಕೆ

Film (90)

ಮಂಗಳೂರಿನ ಉಳ್ಳಾಲ ಸಮೀಪದ ಮುನ್ನೂರು ಗ್ರಾಮದ ನಿರ್ಜನ ಪ್ರದೇಶದಲ್ಲಿ ಮಧ್ಯರಾತ್ರಿ ಹೊರರಾಜ್ಯದ ಯುವತಿಯೊಬ್ಬಳು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಘಟನೆಯು 2012ರ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣವನ್ನು ನೆನಪಿಸುವಂತೆ ಮಾಡಿದ್ದು, ಯುವತಿಯ ಮೇಲೆ ಅತ್ಯಾಚಾರ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಯುವತಿಯು ಪಶ್ಚಿಮ ಬಂಗಾಳ ಮೂಲದವಳು ಎಂದು ಹೇಳಿಕೊಂಡಿದ್ದಾಳೆ. ಆಕೆ ಅರೆಪ್ರಜ್ಞಾಸ್ಥಿತಿಯಲ್ಲಿ ಗ್ರಾಮದ ಮನೆಗಳ ಬಾಗಿಲು ತಟ್ಟಿ, ನೆರವು ಕೋರಿದ್ದಾಳೆ. ಸ್ಥಳೀಯರು ಬಾಗಿಲು ತೆರೆದು ನೋಡಿದಾಗ, ಯುವತಿಯು ಅಮಲಿನ ಸ್ಥಿತಿಯಲ್ಲಿ ಕಾಣಿಸಿದ್ದಾಳೆ. ಆಕೆಯ ದೇಹದ ಮೇಲೆ ಗಾಯದ ಕಲೆಗಳು ಗೋಚರಿಸಿದ್ದು, ಹಿಂದಿಯಲ್ಲಿ ಮಾತನಾಡುತ್ತಾ, “ಮೂವರು ಆಟೋದಲ್ಲಿ ಕರೆತಂದರು, ನನಗೆ ಮದ್ಯ ಕುಡಿಸಿದ್ದಾರೆ” ಎಂದು ತಿಳಿಸಿದ್ದಾಳೆ. ಜೊತೆಗೆ, ಕುಡಿಯಲು ನೀರು ಕೇಳಿ, ಸ್ಥಳದಲ್ಲೇ ಕುಸಿದುಬಿದ್ದಿದ್ದಾಳೆ.

ADVERTISEMENT
ADVERTISEMENT

ಯುವತಿಯ ಈ ಸ್ಥಿತಿಯನ್ನು ಕಂಡು ಸ್ಥಳೀಯರು ಕಂಗಾಲಾಗಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಗೆ ಎಚ್ಚರ ತಪ್ಪಿದ ನಂತರ ವಿಚಾರಣೆ ನಡೆಸಲು ಯೋಜಿಸಿದ್ದಾರೆ. ಯುವತಿಯು ಎಲ್ಲಿಂದ ಬಂದಿದ್ದಾಳೆ, ಆಟೋದಲ್ಲಿದ್ದವರು ಯಾರು ಮತ್ತು ಆಕೆಯ ಮೇಲೆ ಅತ್ಯಾಚಾರ ನಡೆದಿದೆಯೇ ಎಂಬ ವಿಷಯಗಳು ಇನ್ನೂ ದೃಢಪಟ್ಟಿಲ್ಲ. ಆದರೆ, ಆಕೆಯ ಸ್ಥಿತಿಯನ್ನು ಗಮನಿಸಿದರೆ ಅತ್ಯಾಚಾರದ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಊಹಿಸಲಾಗಿದೆ.

ಪೊಲೀಸರು ಸ್ಥಳೀಯರನ್ನು ವಿಚಾರಿಸಿದ್ದಾರೆ ಮತ್ತು ಯುವತಿಯು ಆಟೋದಿಂದ ಇಳಿದ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ. ಈ ಘಟನೆಯು ಸೌಜನ್ಯ ಕೇಸ್‌‌‌‌‌‌‌‌‌ನಂತಹ ಗಂಭೀರ ಅಪರಾಧವನ್ನು ನೆನಪಿಸಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟುಮಾಡಿದೆ. 2012ರಲ್ಲಿ ಧರ್ಮಸ್ಥಳ ಬಳಿಯ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ ಮತ್ತು ಈ ಘಟನೆಯು ಆ ದುರಂತವನ್ನು ಮತ್ತೆ ಮರುಕಳಿಸಿದಂತಿದೆ.

ಯುವತಿಯ ಸ್ಥಿತಿಯಿಂದಾಗಿ ಮುನ್ನೂರು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರು ಈ ಘಟನೆಯಿಂದ ಕಳವಳಗೊಂಡಿದ್ದು, ಪೊಲೀಸರು ಶೀಘ್ರವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಯುವತಿಯ ವೈದ್ಯಕೀಯ ವರದಿ ಮತ್ತು ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಈ ಘಟನೆಯು ಮಂಗಳೂರಿನಲ್ಲಿ ಮಹಿಳಾ ಸುರಕ್ಷತೆಯ ಕುರಿತಾದ ಚರ್ಚೆಯನ್ನು ಮತ್ತೆ ಮುಂಚೂಣಿಗೆ ತಂದಿದೆ.

Exit mobile version