ವರದಿ: ಮೂರ್ತಿ.ಬಿ ನೆಲಮಂಗಲ
ಬೆಂಗಳೂರಿನ ಚಿಕ್ಕಬಾಣಾವರದ ಸೋಲದೇವನಹಳ್ಳಿ ರೈಲು ನಿಲ್ದಾಣದ ಸಮೀಪ ಒಂದು ಕಿಲೋಮೀಟರ್ ಅಂತರದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ಮೃತದೇಹಗಳು ಪತ್ತೆಯಾಗಿವೆ. ಈ ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಯಶವಂತಪುರ ರೈಲ್ವೆ ಪೊಲೀಸರು ಕೊಲೆಯ ಶಂಕೆಯ ಮೇಲೆ ತನಿಖೆ ಆರಂಭಿಸಿದ್ದಾರೆ.
ADVERTISEMENT
ADVERTISEMENT
ಪತ್ತೆಯಾದ ಶವಗಳಲ್ಲಿ ಒಬ್ಬ ವ್ಯಕ್ತಿಯ ವಯಸ್ಸು ಸುಮಾರು 40 ವರ್ಷಗಳಾಗಿದ್ದರೆ, ಇನ್ನೊಬ್ಬರ ವಯಸ್ಸು ಸುಮಾರು 50 ವರ್ಷಗಳಾಗಿದೆ. ಈ ಇಬ್ಬರ ಗುರುತು, ಹೆಸರು ಮತ್ತು ಇತರ ವಿವರಗಳು ಇನ್ನೂ ಲಭ್ಯವಾಗಿಲ್ಲ. ಸ್ಥಳಕ್ಕೆ ತಕ್ಷಣ ಧಾವಿಸಿದ ಯಶವಂತಪುರ ರೈಲ್ವೆ ಪೊಲೀಸರು, ಈ ಶವಗಳನ್ನು ಬೇರೆಡೆ ಕೊಲೆ ಮಾಡಿ ಇಲ್ಲಿ ಬಿಸಾಡಿರುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ.
ಸೀನ್ ಆಫ್ ಕ್ರೈಂ ತಂಡವು ಶವಗಳನ್ನು ವಿವರವಾಗಿ ಪರಿಶೀಲಿಸಿದ್ದು, ತನಿಖೆಯು ತೀವ್ರಗೊಂಡಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
| Reported by: ಮೂರ್ತಿ.ಬಿ ನೆಲಮಂಗಲ