ರಾಯಚೂರು : ದಾರಿಯಲ್ಲಿ ತಮ್ಮಪಾಡಿಗೆ ತಾವು ನಡೆದುಕೊಂಡು ಬರ್ತಿದ್ದ ಮಹಿಳೆಯರ ಮೇಲೆ ರಾಕ್ಷಸನೊಬ್ಬ ಮನ ಬಂದಂತೆ ಹಲ್ಲೆ ಮಾಡಿರುವ ಘಟನೆ ರಾಯಚೂರು ತಾಲ್ಲೂಕಿನ ಏಗನೂರು ಅನ್ನೋ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೇರೆ ಯಾಗಿದೆ.
ತಿಮ್ಮಪ್ಪ ಅನ್ನೋ ವ್ಯಕ್ತಿ ತನ್ನ ಪತ್ನಿ ಪದ್ಮಾವತಿ ಅವರ ತಂಗಿ ಭೂದೇವಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.. ನಿನ್ನೆ ಸಂಜೆ ಏಗನೂರು ಗ್ರಾಮದಲ್ಲಿ ಪದ್ಮಾವತಿ ಹಾಗೂ ತಂಗಿ ಭೂದೇವಿ ಮನೆಗೆ ಹೋಗ್ತಿದ್ದಾಗ ಬೈಕ್ನಲ್ಲಿ ಬಂದ ತಿಮ್ಮಪ್ಪ ಈ ರೀತಿ ಹಲ್ಲೆ ನಡೆಸಿದ್ದಾನೆ..ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾಕ್ಷಸ ತಿಮ್ಮಪ್ಪ ಪತ್ನಿ ಹಾಗೂ ನಾದಿನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸೋಕೆ ಕಾರಣವೇ ಆಸ್ತಿ ವಿಚಾರ..ಹೌದು,ಈ ರಾಕ್ಷಸ ತಿಮ್ಮಪ್ಪ ಯಾದವ್ ಹಾಗೂ ಪತ್ನಿ ಪದ್ಮಾವತಿಗೆ ನಾಲ್ಕು ಜನ ಮುದ್ದಾದ ಮಕ್ಕಳಿದ್ದಾರೆ. ಮೊದಮೊದಲು ಮಟ್ಕಾ ದಂಧೆ ನಡೆಸ್ತಿದ್ದನು. ಬಳಿಕ ಪತ್ನಿಗೆ ನಿತ್ಯ ಟಾರ್ಚರ್ ಶುರು ಮಾಡಿದ್ದ. ಅಲ್ಲದೇ ಎರಡನೇ ಮದುವೆ ಕೂಡ ಆಗಿದ್ದಾನೆ. ಹೀಗಾಗಿ ಪತ್ನಿ ಪದ್ಮಾವತಿ ಕೋರ್ಟ್ ಮೊರೆ ಹೋಗಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಕೋರ್ಟ್ ಕೂಡ ಪತ್ನಿ ಪದ್ಮಾವತಿಗೆ ಜೀವನಾಂಶ ಕೊಡುವಂತೆ ಪತಿ ತಿಮ್ಮಪ್ಪಗೆ ಸೂಚಿಸಿತ್ತು. ಆದ್ರೆ ಕಳೆದ ಎರಡು ತಿಂಗಳ ಹಿಂದಷ್ಟೇ ಆರೋಪಿ ತಿಮ್ಮಪ್ಪ ಪತ್ನಿಗೆ ಜೀವನಾಂಶ ಕೊಡಲಾಗದೇ ಜೈಲು ಸೇರಿದ್ದನು. ಬಳಿಕ ಮತ್ತೆ ಹೊರ ಬಂದು ಪತ್ನಿಗೆ ಟಾರ್ಚರ್ ಕೊಡ್ತಿದನಂತೆ.
ತಿಮ್ಮಪ್ಪ ಐದು ಎಕರೆ ಜಮೀನು ಮಾಲೀಕ. ಹೀಗಾಗಿ ತನ್ನ ನಾಲ್ಕು ಮಕ್ಕಳ ಭವಿಷ್ಯಕ್ಕಾಗಿ ಜಮೀನಿನಲ್ಲಿ ಪಾಲು ಕೇಳಿದ್ಲು ಪದ್ಮಾವತಿ. ಈ ಮಧ್ಯೆ ನಿನ್ನೆಯಷ್ಟೇ ಪದ್ಮಾವತಿ ಜೀವನಾಂಶದ ಕುರಿತು ಮತ್ತೆ ಕೋರ್ಟ್ಗೆ ಹೋಗಿ ಬಂದಿದ್ದರು. ಇತ್ತ ಆಕೆ ತಂಗಿ ಭೂದೇವಿಗೆ ನಿಶ್ಚಿತಾರ್ಥವಾಗಿದ್ದು ಇನ್ನೊಂದು ತಿಂಗಳಲ್ಲಿ ಮದುವೆ ಇತ್ತು. ಹೀಗಾಗಿ ಅಕ್ಕ ಪದ್ಮಾವತಿ ಜೊತೆ ಟೇಲರಿಂಗ್ ಕೆಲಸ ಕಲಿಯೋಕೆ ಆಕೆ ಜೊತೆ ಹೋಗ್ತಿದ್ದಳು.
ನಿನ್ನೆ ಗ್ರಾಮದಲ್ಲಿ ಅಕ್ಕತಂಗಿ ನಡೆದುಕೊಂಡು ಹೋಗ್ತಿದ್ದಾಗೆ ಬೈಕ್ನಲ್ಲಿ ಬಂದ ಪಾಪಿ ಇಬ್ಬರ ಮೇಲೂ ಮಚ್ಚು ಬೀಸಿ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಪದ್ಮಾವತಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅತ್ತ ಭೂದೇವಿ ಅವಳ ಸ್ಥಿತಿ ಕೂಡ ಗಂಭೀರವಾಗಿದೆ.
ಗಾಯಾಳು ಪದ್ಮಾವತಿ ಹಾಗೂ ಭೂದೇವಿಯನ್ನ ರಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇತ್ತ ಘಟನೆ ಬಳಿಕ ಎಸ್ಕೆಪ್ ಆಗಿದ್ದ ಆರೋಪಿ ತಿಮ್ಮಪ್ಪನನ್ನ ರಾಯಚೂರು ಗ್ರಾಮೀಣ ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.
ಅನಿಲ್ ಕುಮಾರ್, ಗ್ಯಾರಂಟಿ ನ್ಯೂಸ್. ರಾಯಚೂರು