ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನಿನ್ನೆ ಸಂಜೆ ಗುಡುಗು ಸಹಿತ ಭಾರೀ ಮಳೆಯೊಂದಿಗೆ ಬೀಸಿದ ಬಿರುಗಾಳಿಯಿಂದ ಬಸವ ಮೋಟಾರ್ಸ್ ಕಾರ್ ಶೋರೂಂನ ಶೆಡ್ ಕಿತ್ತು ಹೋಗಿ ಭಾರೀ ಅನಾಹುತ ಸಂಭವಿಸಿದೆ.
ಈ ಘಟನೆಯಲ್ಲಿ ಕಾರ್ ಶೋರೂಂನ ಶೆಡ್ ಸಂಪೂರ್ಣವಾಗಿ ಹಾರಿಹೋಗಿದ್ದು, ಕಬ್ಬಿಣದ ಕಂಬಗಳು ಮತ್ತು ಶೆಡ್‌ನ ಭಾಗಗಳು ಕಾರುಗಳ ಮೇಲೆ ಬಿದ್ದು ಹಾನಿಯಾಗಿದೆ. ಶೋರೂಂನಲ್ಲಿದ್ದ ಕಾರುಗಳಿಗೆ ಮಾತ್ರವೇ ಅಲ್ಲ, ಶೆಡ್‌ನೊಳಗೆ ಇದ್ದ ಮಿಷನ್‌ಗಳಿಗೂ ಗಂಭೀರ ಹಾನಿಯಾಗಿದೆ. ಈ ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಘಟನೆಯು ಲಿಂಗಸುಗೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಿರುಗಾಳಿಯ ತೀವ್ರತೆಗೆ ಶೋರೂಂನ ಚಾವಣಿ ತಡೆದುಕೊಳ್ಳಲಾಗದೇ ಕುಸಿದು ಬಿದ್ದಿದೆ. ಸ್ಥಳೀಯರು ಈ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.
ಪ್ರಕೃತಿಯ ಈ ಆಕಸ್ಮಿಕ ರೌದ್ರಾವತಾರದಿಂದ ಉಂಟಾದ ನಷ್ಟದ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದ್ದು, ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಯನ್ನು ಈ ನಡೆದಿದೆ.