ಭಾರತೀಯ ಹವಾಮಾನ ಇಲಾಖೆ (IMD) ಈ ನಗರಗಳಲ್ಲಿ ಐದು ದಿನಗಳ ಕಾಲ ಗುಡುಗು-ಮಿಂಚಿನೊಂದಿಗೆ ಭಾರೀ ಮಳೆ ಉಕ್ಕಿಬರುವ ಸಾಧ್ಯತೆ ಇದೆ ಎಂದು ಪೂರ್ವಸೂಚನೆ ನೀಡಿದೆ. ಬಿಸಿಲಿನಿಂದ ಸ್ವಲ್ಪಆರಮಾಯಕ ನೀಡುವಂತಹ ಈ ಮಳೆ, ನಗರವಾಸಿಗಳಿಗೆ ತಂಪೆರೆಯಲಿದೆ.
ಬೆಂಗಳೂರಿನಲ್ಲಿ ವರುಣಾರ್ಭಟ ಜೋರಾಗಿದೆ, ಹೊರವಲಯಗಳಲ್ಲಿ ಇಂದು ಬೆಳಗ್ಗೆಯೇ ಮಳೆಯಾಗಿದೆ. ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ ಸುತ್ತಮುತ್ತ ವರುಣ ತಂಪೆರೆದಿದ್ದಾನೆ. ಇಡೀ ನಗರದಲ್ಲಿ ಬೆಳ್ಳಂಬೆಳಗ್ಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ದಾಸರಹಳ್ಳಿ, ಪೀಣ್ಯ, ಎಂಟನೇ ಮೈಲಿ ಸುತ್ತಮುತ್ತ ತುಂತುರು ಮಳೆಯಾಗಿದೆ.
ಬೆಂಗಳೂರು ಮಹಾನಗರದ ಹಲವೆಡೆ ಜಿಟಿಜಿಟಿ ಮಳೆಯಾಗಿದ್ದರೆ ಇನ್ನು ಕೆಲವೆಡೆ ಭಾರಿ ಮಳೆ ಸುರಿದಿದೆ. ನಗರದ ಮೆಜೆಸ್ಟಿಕ್, ವಿಧಾನಸೌಧ, ಫ್ರೀಡಂಪಾರ್ಕ್, ಮಲ್ಲೇಶ್ವರಂ, ಕಾರ್ಪೊರೇಷನ್, ಶಾಂತಿನಗರ, ರಿಚ್ಮಂಡ್ ಟೌನ್, ಲಾಲ್ಬಾಗ್, ಎಸ್ಬಿಎಂ ವೃತ್ತ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಹವಾಮಾನ ಮತ್ತು IMDಯ ಅಂದಾಜು
ರಾಜಧಾನಿ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ, ಬೆಂಗಳೂರಿನ ಗರಿಷ್ಠ ತಾಪಮಾನ 32.4 ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 1.6 ಡಿಗ್ರಿ ಸೆಲ್ಸಿಯಸ್ ಕಡಿಮೆ) ಮತ್ತು ಕನಿಷ್ಠ ತಾಪಮಾನ 20.8ಡಿಗ್ರಿ ಸೆಲ್ಸಿಯಸ್ (ಸಾಮಾನ್ಯಕ್ಕಿಂತ 1ಡಿಗ್ರಿ ಸೆಲ್ಸಿಯಸ್ ಕಡಿಮೆ) ದಾಖಲಾಗಿದೆ. ಇದರೊಂದಿಗೆ, ಏಪ್ರಿಲ್ 3 ರಿಂದ 7ರ ವರಿಗೆ ಸತತವಾಗಿ ಮೋಡಗಳು, ಮಳೆ ಮತ್ತು ಗುಡುಗು-ಸಿಡಿಲುಗಳ ಸಾಧ್ಯತೆ ಇದೆ. ಏಪ್ರಿಲ್ 7 (ಭಾನುವಾರ) ರಂದು ನಗರದ ಹೆಚ್ಚು ಭಾಗಗಳಲ್ಲಿ ವ್ಯಾಪಕ ಮಳೆ ಸುರಿಯಲಿದೆ.
ಕರ್ನಾಟಕದ ಇತರ ಭಾಗಗಳಂತೆ ಬೆಂಗಳೂರಿನಲ್ಲೂ ಇತ್ತೀಚೆಗೆ ತಾಪಮಾನ ಹೆಚ್ಚಾಗುತ್ತಿದ್ದು, ಈ ಮಳೆ ಮತ್ತು ತಂಪಾದ ಗಾಳಿ ನಗರವಾಸಿಗಳಿಗೆ ಸುಗಮ ಹವಾಮಾನವನ್ನು ನೀಡಲಿದೆ. ಆದರೆ, ಮಳೆ ಮತ್ತು ನೀರಿನ ತಡೆಗಳಿಂದಾಗಿ ಟ್ರಾಫಿಕ್ ಸಮಸ್ಯೆಗಳು ಮತ್ತು ರಸ್ತೆಗಳಲ್ಲಿ ಜಾಮ್‌ಗಳ ಸಾಧ್ಯತೆ ಇದೆ. ಆದ್ದರಿಂದ, ಪ್ರಯಾಣಿಕರು ಸಮಯಕ್ಕೆ ಮುಂಚಿತವಾಗಿ ಹೊರಡಲು ಸೂಚಿಸಲಾಗಿದೆ.
ಗಾಳಿಯೊಂದಿಗೆ ಮಳೆ ಬೀಳುವ ಸಾಧ್ಯತೆ ಇರುವುದರಿಂದ, ಛತ್ರಿ ಅಥವಾ ರೇನ್‌ಕೋಟ್ ಸದಾ ಜೊತೆಯಲ್ಲಿ ಇಟ್ಟುಕೋಳಿ.