ಪಹಲ್ಗಾಮ್ ಉಗ್ರರ ದಾಳಿ: ಶಿವಮೊಗ್ಗದ ಮಂಜುನಾಥ್ ಕುಟುಂಬದಿಂದ ಅಂತಿಮ ವಿಧಿವಿಧಾನಕ್ಕೆ ಸಿದ್ಧತೆ

123 2025 04 24t073208.703
ADVERTISEMENT
ADVERTISEMENT

ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂವ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ ಶಿವಮೊಗ್ಗದ ವಿಜಯನಗರ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಅವರ ಮೃತದೇಹವನ್ನು ಶಿವಮೊಗ್ಗಕ್ಕೆ ಕೊಂಡೊಯ್ಯಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ಮಂಜುನಾಥ್ ಅವರ ಸಂಬಂಧಿ ಅಶ್ವಿನ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಮೃತದೇಹದ ಆಗಮನ ಮತ್ತು ಅಂತಿಮ ವಿಧಿವಿಧಾನ

ಮಂಜುನಾಥ್ ಅವರ ಮೃತದೇಹವನ್ನು ಸಮೇತ ಅವರ ಪತ್ನಿ ಪಲ್ಲವಿ ಮತ್ತು ಪುತ್ರ ಅಭಿಜಯ್ ಬೆಂಗಳೂರಿನಿಂದ ಶಿವಮೊಗ್ಗದತ್ತ ಪ್ರಯಾಣ ಬೆಳೆಸಿದ್ದಾರೆ. ಇಂದು ಬೆಳಿಗ್ಗೆ 9:30ರ ಸುಮಾರಿಗೆ ಶಿವಮೊಗ್ಗದ ವಿಜಯನಗರದಲ್ಲಿರುವ ಅವರ ನಿವಾಸಕ್ಕೆ ಆಗಮಿಸುವ ನಿರೀಕ್ಷೆಯಿದೆ. ಮೃತದೇಹ ಆಗಮಿಸಿದ ಬಳಿಕ ಮನೆಯ ಮುಂಭಾಗದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುವುದು. ನಂತರ ಕುಟುಂಬದ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಮಧ್ಯಾಹ್ನ ಶವಸಂಸ್ಕಾರದ ಕಾರ್ಯ ನಡೆಯಲಿದೆ. ಮಂಜುನಾಥ್ ಅವರ ಮೃತ್ಯು ಮೂರು ದಿನಗಳ ಹಿಂದೆ ಸಂಭವಿಸಿದ್ದರಿಂದ, ಸ್ಮಶಾನದಲ್ಲಿ ಹೆಚ್ಚಿನ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ನಡೆಸಬೇಕಾಗಿದೆ. ಸಮುದಾಯದ ಗುರುಗಳ ಮಾರ್ಗದರ್ಶನದಲ್ಲಿ ಎಲ್ಲ ಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಲಿವೆ. ಸಂಬಂಧಿಕರೆಲ್ಲರೂ ಈಗಾಗಲೇ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ ಎಂದು ಅಶ್ವಿನ್ ತಿಳಿಸಿದ್ದಾರೆ.

ಮಂಜುನಾಥ್ ಅವರ ಮೃತದೇಹಕ್ಕಾಗಿ ಕುಟುಂಬಸ್ಥರು ಕಾದು ಕುಳಿತಿದ್ದು, ವಿಜಯನಗರದ ಅವರ ನಿವಾಸದಲ್ಲಿ ಶೋಕದ ವಾತಾವರಣ ಮನೆಮಾಡಿದೆ.

    Exit mobile version