ನೈರುತ್ಯ ರೈಲ್ವೆ ಇಲಾಖೆ (South Western Railway) ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ವಿಶೇಷ ರೈಲುಗಳ ಸಂಚಾರಕ್ಕೆ ಮುಂದಾಗಿದೆ. ಈ ರೈಲುಗಳು ಎಸ್ಎಂವಿಟಿ ಬೆಂಗಳೂರಿನಿಂದ ಕೊಲ್ಲಂ ಮತ್ತು ಮಂಗಳೂರು ಜಂಕ್ಷನ್ಗೆ ಸಂಚರಿಸಲಿವೆ.
ಎಸ್ಎಂವಿಟಿ ಬೆಂಗಳೂರಿನಿಂದ ಕೊಲ್ಲಂ ಮತ್ತು ಮಂಗಳೂರಿಗೆ ವಿಶೇಷ ರೈಲುಗಳ ಸೇವೆಯನ್ನು ಒದಗಿಸಲಾಗುತ್ತಿದೆ. ಈ ರೈಲುಗಳು ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡಲು ವಿವಿಧ ದರ್ಜೆಯ ಕೋಚ್ಗಳೊಂದಿಗೆ ಸಂಚರಿಸಲಿವೆ. ನೈರುತ್ಯ ರೈಲ್ವೆ ಇಲಾಖೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಎಸ್ಎಂವಿಟಿ ಬೆಂಗಳೂರಿನಿಂದ ಕೊಲ್ಲಂ ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೋದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ, ಕೊಟ್ಟಾಯಂ, ಚಂಗನಾಸ್ಸೆರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕಾಯಕುಲಂ ಮತ್ತು ಕೊಲ್ಲಂನಲ್ಲಿ ನಿಲುಗಡೆಯಾಗುತ್ತದೆ. ಎಸ್ಎಂವಿಟಿ ಬೆಂಗಳೂರು ಟು ಮಂಗಳೂರು ಜಂಕ್ಷನ್ ಈ ರೈಲು ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚರಿಸುತ್ತದೆ.
ಎಸ್ಎಂವಿಟಿ ಬೆಂಗಳೂರು ಟು ಕೊಲ್ಲಂ:
-
ರೈಲು ಸಂಖ್ಯೆ 06585: ಏಪ್ರಿಲ್ 19, 2025 (ಶನಿವಾರ) ಮಧ್ಯಾಹ್ನ 3:50ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಏಪ್ರಿಲ್ 20 (ಭಾನುವಾರ) ಬೆಳಿಗ್ಗೆ 6:20ಕ್ಕೆ ಕೊಲ್ಲಂ ತಲುಪುತ್ತದೆ.
-
ರೈಲು ಸಂಖ್ಯೆ 06586: ಏಪ್ರಿಲ್ 20, 2025 (ಭಾನುವಾರ) ಸಂಜೆ 5:50ಕ್ಕೆ ಕೊಲ್ಲಂನಿಂದ ಹೊರಟು ಏಪ್ರಿಲ್ 21 (ಸೋಮವಾರ) ಬೆಳಿಗ್ಗೆ 8:35ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪುತ್ತದೆ.
ಎಸ್ಎಂವಿಟಿ ಬೆಂಗಳೂರು ಟು ಮಂಗಳೂರು ಜಂಕ್ಷನ್:
-
ರೈಲು ಸಂಖ್ಯೆ 06579: ಏಪ್ರಿಲ್ 17, 2025 (ಗುರುವಾರ) ರಾತ್ರಿ 11:55ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಏಪ್ರಿಲ್ 18 (ಶುಕ್ರವಾರ) ಸಂಜೆ 4:00ಗೆ ಮಂಗಳೂರು ಜಂಕ್ಷನ್ ತಲುಪುತ್ತದೆ.
-
ರೈಲು ಸಂಖ್ಯೆ 06580: ಏಪ್ರಿಲ್ 20, 2025 (ಭಾನುವಾರ) ಮಧ್ಯಾಹ್ನ 2:10ಕ್ಕೆ ಮಂಗಳೂರಿನಿಂದ ಹೊರಟು ಏಪ್ರಿಲ್ 21 (ಸೋಮವಾರ) ಬೆಳಿಗ್ಗೆ 7:30ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪುತ್ತದೆ.
ಕೋಚ್ಗಳ ವಿವರ:
ಎಸ್ಎಂವಿಟಿ ಬೆಂಗಳೂರು-ಕೊಲ್ಲಂ:
-
1 ಎಸಿ ಟು-ಟೈರ್ ಕೋಚ್
-
1 ಎಸಿ ತ್ರೀ-ಟೈರ್ ಕೋಚ್
-
8 ಸ್ಲೀಪರ್ ಕ್ಲಾಸ್ ಕೋಚ್ಗಳು
-
4 ಜನರಲ್ ಸೆಕೆಂಡ್ ಕ್ಲಾಸ್ ಕೋಚ್ಗಳು
-
2 ಸೆಕೆಂಡ್ ಕ್ಲಾಸ್ ಕೋಚ್ಗಳು
ಎಸ್ಎಂವಿಟಿ ಬೆಂಗಳೂರು-ಮಂಗಳೂರು:
-
1 ಪ್ರಥಮ ದರ್ಜೆ ಎಸಿ ಕೋಚ್
-
2 ಎಸಿ ಟು-ಟೈರ್ ಕೋಚ್ಗಳು
-
4 ಎಸಿ ತ್ರೀ-ಟೈರ್ ಕೋಚ್ಗಳು
-
7 ಸ್ಲೀಪರ್ ಕ್ಲಾಸ್ ಕೋಚ್ಗಳು
-
4 ಸಾಮಾನ್ಯ ದ್ವಿತೀಯ ದರ್ಜೆ ಕೋಚ್ಗಳು
-
2 ಸಾಮಾನ್ಯ ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್ಗಳು
ಈ ರೈಲುಗಳು ಒಂದು ದಿನಕ್ಕೆ ಒಂದು ಸೇವೆಯನ್ನು ಮಾತ್ರ ಒದಗಿಸುತ್ತವೆ, ಮತ್ತು ಪ್ರಯಾಣಿಕರು ತಮ್ಮ ಟಿಕೆಟ್ಗಳನ್ನು ರೈಲ್ವೆಯ ಅಧಿಕೃತ ವೆಬ್ಸೈಟ್ ಅಥವಾ ಕೌಂಟರ್ಗಳ ಮೂಲಕ ಬುಕ್ ಮಾಡಬಹುದು.