ಕಿಲಾಡಿ ಲೇಡಿಯ ಹನಿಟ್ರ್ಯಾಪ್ ಪ್ಲಾನ್ ಬಿಚ್ಚಿಟ್ಟ ಸಚಿವ ರಾಜಣ್ಣ!

Untitled design 2025 03 25t133835.621
ADVERTISEMENT
ADVERTISEMENT

ಬೆಂಗಳೂರು : ರಾಜ್ಯದಲ್ಲಿ ಹನಿಟ್ರ್ಯಾಪ್‌ ಪ್ರಯತ್ನ ನಡೆದಿದೆ ಎನ್ನಲಾದ ಆರೋಪಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ. ಎನ್‌ ರಾಜಣ್ಣ ಸ್ಪಷ್ಟನೆ ಕೊಟ್ಟಿದ್ದು, ಎರಡು ಬಾರಿ ಯುವತಿಯರು ಹಾಗೂ ಎರಡು ಬಾರಿ ಯುವಕರು ಸಚಿವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ ಎಂದು ರಾಜಣ್ಣ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ, ಹೈಕೋರ್ಟ್ ಲಾಯರ್ ಎಂಬ ನೆಪದಲ್ಲಿ ಯುವತಿಯರು ಸಚಿವ ರಾಜಣ್ಣನವರ ಬಳಿ ಭೇಟಿ ನೀಡಿದ ಪ್ರಕರಣದ ಕುರಿತು ಸಚಿವ ರಾಜಣ್ಣ ಅವರು ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ. ‘ಮಿರ ಮಿರ ಮಿಂಚೋ ಟಾಪ್, ಜೀನ್ಸ್’ ಧರಿಸಿದ ಯುವತಿಯರು ಬಂದು, ‘ಪರ್ಸನಲ್ ಆಗಿ ಮಾತಾಡಬೇಕು’ ಎಂದು ಹೇಳಿದ್ದರು ಎಂದು ಕೆ.ಎನ್‌ ರಾಜಣ್ಣ ಅವರು ತಿಳಿಸಿದ್ದಾರೆ. 

ಯುವತಿಯರ ಸಂಚು

ನಂತರ ಮಾತನಾಡಿದ ರಾಜಣ್ಣ ಅವರು ಮೊದಲ ಬಾರಿಗೆ ಬಂದ ಯುವತಿ ತನ್ನನ್ನು ಲಾಯರ್ ಎಂದು ಪರಿಚಯಿಸಿದ್ದರು, ಎರಡನೇ ಬಾರಿ ಹೈಕೋರ್ಟ್ ಲಾಯರ್ ಎಂದು ಹೇಳಿದ್ದಾಳೆ ಎಂದರು. ಸಚಿವರ ಬಳಿ ತಾನು ಪರ್ಸನಲ್‌ ಆಗಿ ಮಾತನಾಡಬೇಕು ಎಂದು ಹೇಳಿದ್ದಳು. ಈ ಸಂಬಂಧ ಸಚಿವ ರಾಜಣ್ಣ ಅವರಿಗೆ ಅನುಮಾನ ಮೂಡಿಸಿದ್ದು, ಯಾರು ಈ ಯುವತಿಯರು? ಇವರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು ತಪ್ಪಿಸ್ಥರ ವಿರುದ್ಧ ಕ್ರಮ ಆಗಬೇಕು. ಇವರ ವಿರುದ್ಧ ಅಪರಿಚಿತ ಯುವಕ, ಯುವತಿ ಎಂದು ನಾಲ್ಕು ಪುಟಗಳ ದೂರು ನೀಡಲು ಸಿದ್ಧಪಡಿಸಿದ್ದೇನೆ ಎಂದು ಹೇಳಿದರು.

Exit mobile version