ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದ್ದೆವನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಒಬ್ಬಳೇ ಒಬ್ಬಳು ವಿದ್ಯಾರ್ಧಿನಿ ವ್ಯಾಸಾಂಗ ಮಾಡುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಯಾವುದೇ ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಅಂಚಿಗೆ ಹೋದ ಈ ಶಾಲೆಯನ್ನು ಅಡುಗೆ ಸಿಬ್ಬಂದಿ ತನ್ನ ಮಗಳನ್ನು ಒಂದನೇ ತರಗತಿಗೆ ದಾಖಲಿಸಿ ಶಾಲೆಯನ್ನು ಉಳಿಸಿದ್ದಾರೆ.ಒಂದನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಮಾನಸರಿಗೆ ಪಾಠ ಮಾಡಲು ಓರ್ವ ಶಿಕ್ಷಕಿಯನ್ನು ನೇಮಿಸಲಾಗಿದೆ.ಹಾಗೇ, ಮಧ್ಯಾಹ್ನದ ಬಿಸಿ ಊಟಕ್ಕಾಗಿ ಅಡುಗೆ ಸಿಬ್ಬಂದಿಯನ್ನೂ ಕೂಡ ಸರ್ಕಾರ ನೇಮಿಸಿದೆ.
ವಿದ್ಯಾರ್ಥಿಗಳು ಇಲ್ಲದೇ ಶಾಲೆ ಮುಚ್ಚುವ ಹಂತಕ್ಕೆ ಹೋಗಿತ್ತು. ಕೊನೆಗೆ ಓರ್ವ ವಿದ್ಯಾರ್ಥಿನಿ ದಾಖಲಾದ ಹಿನ್ನೆಲೆಯಲ್ಲಿ ಶಾಲೆಯನ್ನು ತೆರೆಯಲಾಗಿದೆ. ವಿದ್ಯಾರ್ಥಿನಿ ಮಾಸನ ಅಡುಗೆ ಸಿಬ್ಬಂದಿ ಮಗಳಾಗಿದ್ದಾರೆ. ತಮ್ಮ ಮಗಳನ್ನು ಶಾಲೆಗೆ ದಾಖಲಿಸಿ, ಸರ್ಕಾರಿ ಶಾಲೆಯನ್ನು ಉಳಿಸುವ ಪ್ರಯತ್ನವನ್ನು ಮಾನಸ ತಾಯಿ ಮಾಡುತ್ತಿದ್ದಾರೆ .
ಈ ಶಾಲೆಯಲ್ಲಿ ಒಬ್ಬಳೇ ವಿದ್ಯಾರ್ಥಿನಿ ಕಲಿಯುತ್ತಿದ್ದಾಳೆ. ಗ್ರಾಮದ ಪೋಷಕರನ್ನು ಮನವೊಲಿಸಿ ಪಕ್ಕದ ಶಾಲೆಗೆ ಕಳುಹಿಸಲು ಪ್ರಯತ್ನಗಳು ವಿಫಲವಾದರೂ, ಈ ತಾಯಿಯ ನಿಷ್ಠೆ ಮತ್ತು ಸರ್ಕಾರದ ಬದ್ಧತೆ ಶಿಕ್ಷಣದ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಇದು ಕೇವಲ ಶಾಲೆಯ ಕಥೆಯಲ್ಲ, ಸಾಮೂಹಿಕ ಜವಾಬ್ದಾರಿ ಮತ್ತು ಶಿಕ್ಷಣದ ಪ್ರತಿಷ್ಠೆಯ ಸಂದೇಶ.