ವಿಜಯಪುರ: ಭಾರತ-ಪಾಕಿಸ್ತಾನ ನಡುವೆ ಯುದ್ಧದ ಸಾಧ್ಯತೆ ಎದುರಾದರೆ ತನ್ನ ಆಸ್ತಿಯನ್ನು ದೇಶಕ್ಕೆ ಕಾಣಿಕೆಯಾಗಿ ಸಮರ್ಪಿಸಲು ವಿಜಯಪುರದ ನಿವಾಸಿಯೊಬ್ಬರು ಮುಂದಾಗಿದ್ದಾರೆ. “ನೆತ್ತರಿಗೆ ನೆತ್ತರು ಹರಿಸಿ ಪ್ರತಿಕಾರ ತೀರಿಸಿಕೊಳ್ಳಿ” ಎಂಬ ಆಕ್ರೋಶದೊಂದಿಗೆ ಈ ದೇಶಭಕ್ತ ತನ್ನ ಆಸ್ತಿಯನ್ನು ರಾಷ್ಟ್ರದ ಸೇವೆಗೆ ಮೀಸಲಿಡಲು ತುರ್ತು ನಿರ್ಧಾರ ಕೈಗೊಂಡಿದ್ದಾರೆ.
ವಿಜಯಪುರದ ಕುಲಕರ್ಣಿ ಲೇಔಟ್ನ ನಿವಾಸಿಯಾದ ಸಂತೋಷ ಸುಭಾಷ ಚೌಧರಿ, ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ತಮ್ಮ ಆಸ್ತಿಯನ್ನು ದೇಶದ ಸೈನ್ಯವನ್ನು ಬಲಗೊಳಿಸಲು ಕಾಣಿಕೆಯಾಗಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ತುರ್ತು ಪರಿಸ್ಥಿತಿ ಅಥವಾ ಯುದ್ಧದ ಸಂದರ್ಭದಲ್ಲಿ ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ಸಮರ್ಪಿಸುವುದಾಗಿ ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಸಂತೋಷ ಚೌಧರಿಯ ಈ ನಿರ್ಧಾರವು ದೇಶದ ರಕ್ಷಣೆಗಾಗಿ ತಮ್ಮ ಸರ್ವಸ್ವವನ್ನೂ ಒಡ್ಡಲು ಸಿದ್ಧರಿರುವ ಭಾರತೀಯರ ದೇಶಪ್ರೇಮವನ್ನು ಎತ್ತಿಹಿಡಿಯುತ್ತದೆ.