ಯಾದಗಿರಿ: ಭೂಕಂಪ, ಭೂ-ಸುನಾಮಿ, ಜಲ-ಸುನಾಮಿ, ಮತ್ತು ಗಾಳಿ ಸುನಾಮಿಯಂಥ ಪ್ರಕೃತಿ ವಿಕೋಪಗಳು ಹೆಚ್ಚಾಗಬಹುದು. ಇದರ ಜೊತೆಗೆ, ಕಟ್ಟಡ ಕುಸಿತಗಳು ಮತ್ತು ಬಾಹ್ಯಾಕಾಶದಲ್ಲಿ ತಾಂತ್ರಿಕ ತೊಂದರೆಗಳ ಸಾಧ್ಯತೆ ಇದೆ ಎಂದು ಯಾದಗಿರಿಯಲ್ಲಿ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಶಿವಯೋಗಿ ಶಿವಾನಂದ ಸ್ವಾಮೀಜಿ ಅವರು “ಕಳೆದ ವರ್ಷದ್ದಕ್ಕಿಂತಲೂ ಈ ಬಾರಿ ಅಪಾಯಗಳ ತೀವ್ರತೆ ಹೆಚ್ಚಿದೆ ಎಂದು ಹೇಳಿದ್ದಾರೆ.
ಯುಗಾದಿ ಹಬ್ಬದ ವೇಳೆ ಮತ್ತೊಮ್ಮೆ ಭವಿಷ್ಯ ಹೇಳ್ತೇನೆ ಎಂದ ಸ್ವಾಮೀಜಿ, “ಮುಂದಿನ ಸಂವತ್ಸರದಲ್ಲಿ ರಾಜ್ಯದಲ್ಲಿ ಉತ್ತಮ ಮಳೆ ಮತ್ತು ಸುಭಿಕ್ಷತೆ ಇರುತ್ತದೆ. ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ. ಆದರೆ, ಜಾಗತಿಕ ಮಟ್ಟದಲ್ಲಿ ಭೀಕರ ಸನ್ನಿವೇಶಗಳು ರೂಪುಗೊಳ್ಳಲಿವೆ” ಎಂದು ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ರಾಜ್ಯದ ಸ್ಥಿತಿಯ ಬಗ್ಗೆಯೂ ಭವಿಷ್ಯ ನುಡಿದ್ದಾರೆ. ಸ್ವಾಮೀಜಿಯವರು, “ರಾಜ್ಯದಲ್ಲಿ ಮಳೆ-ಬೆಳೆಗಳು ಸಮೃದ್ಧವಾಗಿ ಸಿಗುತ್ತವೆ. ರೈತರಿಗೆ ಸಂತೋಷದ ವರ್ಷವಾಗಲಿದೆ” ಎಂದು ಶಿವಯೋಗಿ ಶಿವಾನಂದ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.