ಕಾಂಗ್ರೆಸ್ ನಲ್ಲಿ ಚುನಾವಣೆ ಅಂದ್ರೆ ಡಿಕೆ, ಡಿಕೆ ಅಂದ್ರೆ ಎಲೆಕ್ಷನ್ ಅನ್ನೋ ಮಾತು ಮುನ್ನೆಲೆಗೆ ಬಂದಿದೆ. ವಿಧಾನಸಭೆ ಚುನಾವಣೆ ಬಳಿಕ, ಉಪಚುನಾವಣೆಯಲ್ಲೂ ತಮ್ಮ ಖದರ್ ತೋರಿಸಿದ್ದಾರೆ. ನಾನು ಜ್ಯೋತಿಷಿ ಅಲ್ಲ, ಆದರೂ ಪಕ್ಕ ಲೆಕ್ಕಾ ಹೇಳ್ತಿನಿ ಎಂದು ಗೆಲ್ಲುವ ನಂಬರ್ ಗಳನ್ನ ಸಾರಾ ಸಗಟಾಗಿ ಹೇಳುತ್ತಿದ್ದ ಡಿಕೆ ಶಿವಕುಮಾರ್ ನಿಜಕ್ಕೂ ಚಾಣಕ್ಯರಾಗಿದ್ದಾರೆ. ಚುನಾವಣೆ ಅಂದ್ರೆ ಡಿಕೆ, ಡಿಕೆ ಅಂದ್ರೆ ಎಲೆಕ್ಷನ್ ಎನ್ನುವ ಮಾತನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಕೆಪಿಸಿಸಿ ಪ್ರಸಿಡೆಂಟ್, ಡಿಸಿಎಂ ಡಿಕೆ ಶಿವಕುಮಾರ್.
ಉಪಚುನಾವಣೆಯಲ್ಲಿ 3ಕ್ಕೆ 3 ಕ್ಷೇತ್ರವನ್ನೂ ಗೆಲ್ಲೋದಾಗಿ ಹೇಳಿದ್ದರು ಡಿಕೆ ಶಿವಕುಮಾರ್. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗೆಲ್ತೇವೆ ಎಂದಿದ್ದರು ಅದರಂತೆ 136 ಸ್ಥಾನಗಳನ್ನ ಗೆದ್ದರು. ಲೋಕಸಭೆಯಲ್ಲಿ 8ರಿಂದ 10 ಕ್ಷೇತ್ರಗಳನ್ನ ಗೆಲ್ಲುವುದಾಗಿ ಹೇಳಿದ್ದರು. ಅದರಂತೆಯೇ ಗೆದ್ದರು. ಮಹಾರಾಷ್ಟ್ರ ಎಲೆಕ್ಷನ್ ಬಗ್ಗೆ ಹೆಚ್ಚು ಗೊತ್ತಿಲ್ಲ ಎಂದಿದ್ದರು. ಇವೆಲ್ಲಾ ನಿದರ್ಶನಗಳನ್ನ ನೋಡಿದರೆ ಪಕ್ಕಾ ಚುನಾವಣಾ ಚಾಣಕ್ಯರಾಗಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್.
ಡಿಕೆ ಶಿವಕುಮಾರ್ ಪಕ್ಕಾ ರಿಸಲ್ಟ್ ಲೆಕ್ಕ ಹೇಳ್ತಾರೆ. ಚುನಾವಣಾ ಚಾಣಕ್ಯ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ತೆಲಂಗಾಣ ಎಲೆಕ್ಷನ್ನಿನಲ್ಲೂ ಉಸ್ತುವಾರಿ ವಹಿಸಿಕೊಂಡಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಎಂದಿದ್ದರು. ಅದರಂತೆ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು.