ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಬರೋಬ್ಬರಿ 144 ವರ್ಷಗಳ ನಂತರ ಮಹಾಕುಂಭ ಮೇಳ ನಡೆಯುತ್ತಿದೆ. ಈ ಮೇಳದಲ್ಲಿ ಕೋಟ್ಯಾಂತರ ಜನ ಭಾಗವಹಿಸಿದ್ದಾರೆ. ಜೀವಮಾನದಲ್ಲಿ ಒಮ್ಮೆ ಮಾತ್ರ ನೋಡಬಹುದಾದ ಅದ್ಭುತ ಹಾಗೂ ಮನೋಹರ ದೃಶ್ಯವಿದು. ಇನ್ನು ಈ ಮಹಾಕುಂಭ ಮೇಳದಲ್ಲಿ 100ಕ್ಕೂ ಹೆಚ್ಚು ಹೃದಯಾಘಾತಕ್ಕೊಳಗಾದ ಭಕ್ತರಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರವು ಭಕ್ತರಿಗಾಗಿ ಕ್ಲಿನಿಕ್ಗಳನ್ನು ಸ್ಥಾಪಿಸಿದ್ದು, 1,00,0998 ಜನರು ಒಪಿಡಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮಹಾಕುಂಭದಲ್ಲಿ ಹೃದಯಾಘಾತಕ್ಕೊಳಗಾಗಿದ್ದ 100ಕ್ಕೂ ಅಧಿಕ ಭಕ್ತರ ಪ್ರಾಣ ಉಳಿಸಲಾಗಿದೆ. ಮಹಾಕುಂಭ ಮೇಳಕ್ಕೆ ಆಗಮಿಸುವ ಭಕ್ತರಿಗಾಗಿ ಉತ್ತರ ಪ್ರದೇಶ ಸರ್ಕಾರದಿಂದ ಕ್ಲಿನಿಕ್ ಸಹ ಆರಂಭಿಸಲಾಗಿತ್ತು.
ಭಾರತ ಮತ್ತು ವಿದೇಶದಿಂದ ಮಹಾಕುಂಭ ಮೇಳಕ್ಕೆ ಆಗಮಿಸಿರುವ ಭಕ್ತರು ವೈದ್ಯಕೀಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದಕ್ಕೂ ಮುನ್ನ ಮಧ್ಯಪ್ರದೇಶ ಮೂಲದ ಇಬ್ಬರು ಭಕ್ತರು ಸೆಂಟ್ರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಮಹಾಕುಂಭ ಮೇಳದ ನೋಡಲ್ ವೈದ್ಯಕೀಯ ಸಂಸ್ಥೆಯ ವೈದ್ಯ ಗೌರವ್ ದುಬೆ ಹೇಳಿದ್ದಾರೆ.
ಮಹಾಕುಂಭ ಮೇಳದ ಹಿನ್ನೆಲೆ ಪ್ರಯಾಗ್ರಾಜ್ನಲ್ಲಿ 10 ಹಾಸಿಗೆಗಳ ಐಸಿಯು ಸಿದ್ಧಪಡಿಸಲಾಗಿದೆ. ರೋಗಿಗಳ ಮೇಲೆ ನಿಗಾ ಇರಿಸಲು ಎಐ ಆಧಾರಿತ ಕ್ಯಾಮೆರಾಗಳನ್ನು ಉತ್ತರ ಪ್ರದೇಶ ಸರ್ಕಾರ ಬಳಕೆ ಮಾಡಿಕೊಂಡಿದೆ. ದಂತ ಶಸ್ತ್ರಚಿಕಿತ್ಸಕರು, ಆರ್ಥೋ, ಮಗು, ಸ್ತ್ರೀರೋಗ ತಜ್ಞ ಮತ್ತು ಮಕ್ಕಳ ತಜ್ಞರನ್ನು ಸಹ ಸೆಂಟ್ರಲ್ ಆಸ್ಪತ್ರೆಗೆ ನಿಯೋಜಿಸಲಾಗಿದೆ.
ಇದುವರೆಗೂ ಹೃದಯಾಘಾತಕ್ಕೆ ಒಳಗಾಗಿದ್ದ 100 ರೋಗಿಗಳು ಸೇರಿದಂತೆ 183 ಜನರಿಗೆ ಚಿಕಿತ್ಸೆ ನೀಡಲಾಗಿದೆ. ತಾತ್ಕಾಲಿಕ ಐಸಿಯುನಲ್ಲಿ 580 ಸಣ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. 1,00,0998 ಜನರು ಒಪಿಡಿಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಹಾಕುಂಭದಲ್ಲಿ 1,70,727 ರಕ್ತಪರೀಕ್ಷೆ ನಡೆಸಲಾಗಿದೆ. ಮಧ್ಯಪ್ರದೇಶದ ಇಬ್ಬರು ಭಕ್ತರಿಗೆ ಎದೆನೋವು ಕಾಣಿಸಿಕೊಂಡಿದ್ದಾಗ ಡಾ.ಎಸ್.ಕೆ.ಪಾಂಡೆ ನೇತೃತ್ವದ ವೈದ್ಯಕೀಯ ತಂಡ ಚಿಕಿತ್ಸೆ ನೀಡಿದೆ. ಹನುಮಗಂಜ್ ಮೂಲದ 105 ವರ್ಷದ ಬಾಬಾ ರಾಮ್ ಜೇನ್ ದಾಸ್ ಅವರು ಸಹ ಹೊಟ್ಟೆ ನೋವಿನ ಸಮಸ್ಯೆಯಿಂದ ಸೆಂಟ್ರಲ್ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದುಕೊಂಡಿದ್ದರು.
ಜನವರಿ 13 ರಿಂದ ಪ್ರಾರಂಭವಾದ ಪ್ರಯಾಗರಾಜ್ ಮಹಾಕುಂಭದಲ್ಲಿ ಇಲ್ಲಿಯವರೆಗೆ, ಕೋಟ್ಯಂತರ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಈ ಮಹಾಕುಂಭವನ್ನು ಆಯೋಜಿಸಲು ಯೋಗಿ ಸರ್ಕಾರವು ಭದ್ರತಾ ವ್ಯವಸ್ಥೆಯನ್ನು ಹೆಚ್ಚು ಬಲಪಡಿಸಿದೆ. ಸಾವಿರಾರು ಭದ್ರತಾ ಸಿಬ್ಬಂದಿ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಮಹಾಕುಂಭದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಡ್ರೋನ್ ಮೂಲಕ ನಿಗಾ ಇರಿಸಲಾಗಿದೆ. ಈ ಮಹಾಕುಂಭಮೇಳ ಫೆಬ್ರವರಿ 26ರವರೆಗೆ ನಡೆಯಲಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ:https://chat.whatsapp.com/HWayJDSBf9aI06q6jplPgc