ಮಾದಕ ವ್ಯಸನಕ್ಕೆ ಅಡಿಕ್ಟ್ ಆದರೆ..ಅಲ್ಲಿಗೆ ಆ ವ್ಯಕ್ತಿ ಜೀವನವೇ ಮುಗಿತು ಎಂದೇ ಅರ್ಥ. ಅದರಲೂ ಯುವಕರನ್ನ ಈ ಮಾದಕ ಸುಳಿಯಲ್ಲಿ ಸಿಲುಕಿಸಲು ನಾನಾ ರೀತಿಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತವೆ. ಇದಕ್ಕಾಗಿ ದೊಡ್ಡ ದೊಡ್ಡ ಜಾಲಗಳೇ ತೆರೆಮರೆಯಲ್ಲಿದ್ದುಕೊಂಡು ಡ್ರಗ್ಸ್ ಭಾಹುಬಲವನ್ನ ಆಗಾಗ ತೋರುತ್ತವೆ. ಜಸ್ಟ್ ಒಂದು ಬಾರಿ ಡ್ರಗ್ಸ್ ರುಚಿ ನೋಡಿದ್ರೆ ಸಾಕು, ಅದನ್ನ ಪಡೆಯಲು ಹುಚ್ಚರಂತೆ ತಿರುಗಾಡ್ತಾರೆ. ನಮ್ಮ ದೇಶದಲೂ ಉಡ್ತಾ ಪಂಜಾಬ್ ದೊಡ್ಡ ಮಟ್ಟಿಗೆ ವಿವಾದವಾಗಿತ್ತು. ಎಷ್ಟೇ ಕಠಿಣ ಕಾನೂನುಗಳನ್ನ ಜಾರಿಗೆ ತಂದ್ರೂ..ಈ ಮಾದಕ ಜಾಲಕ್ಕೆ ಬ್ರೇಕ್ ಹಾಕಲು ಸಾಧ್ಯವೇ ಆಗ್ತಿಲ್ಲ.
ಗಾಂಜಾ, ಅಫೀಮು , ಕೋಕೇನ್, ಹೆರಾಯಿನ್, ಮರಿಜುವಾನಾ ಸೇರಿದಂತೆ ವಿವಿಧ ರೀತಿಯ ಸಿಂಥೆಟಿಕ್ ಡ್ರಗ್ಸ್ಗಳ ಸಪ್ಲೈ ಮಾಡುವ ಜಾಲ ದೇಶ ವಿದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಈ ಡ್ರಗ್ಸ್ಗಳ ಹೆಸರುಗಳನ್ನ ಸಾಮಾನ್ಯವಾಗಿ ನಾವು ನೀವು ಕೇಳಿರ್ತೀವಿ. ಆದರೆ “ಮನುಷ್ಯ ಮೂಳೆ ಡ್ರಗ್ಸ್” ಕೇಳಿದ್ದೀರಾ.? ಗಾಬರಿ ಆಗಬೇಡಿ..ಆಫ್ರಿಕಾದಲ್ಲಿ ಇತ್ತೀಚಿಗೆ ಮನುಷ್ಯ ಮೂಳೆಯಿಂದ ತಯಾರಿಸಲಾದ ಅತ್ಯಂತ ಡೇಂಜರಸ್ ಡ್ರಗ್ಸ್ ಮಾಫಿಯಾ ತಲೆ ಎತ್ತಿದೆ. ಈ ವಿಷಯವನ್ನ ಆ ದೇಶದ ಅಧ್ಯಕ್ಷರೆ ಬಹಿರಂಗ ಪಡಿಸಿದ್ದಾರೆ. ಹೌದು ಪಶ್ಚಿಮ ಆಫ್ರಿಕಾದಲ್ಲಿ ಮನುಷ್ಯನ ಮೂಳೆಯಿಂದ ತಯಾರಿಸಲಾದ “ಜಾಂಬಿ ಡ್ರಗ್ಸ್” ಪೆಡ್ಲಿಂಗ್ ಶುರುವಾಗಿದೆ. “ಕುಷ್” ಅಥವಾ “ಜಾಂಬಿ” ಡ್ರಗ್ಸ್ ಸಖತ್ ಅಮಲೇರಿಸುತ್ತಂತೆ..ಇದಕ್ಕೆ ಒಂದು ಬಾರಿ ಅಡಿಕ್ಟ್ ಆದರೆ, ಆ ವ್ಯಕ್ತಿಯ ಆಯಸ್ಸು ಆಲ್ ಮೋಸ್ಟ್ ಕೊನೆಗೊಂಡ ಹಾಗೆ ಅಂತ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಇತ್ತೀಚಿಗೆ ಪಶ್ಚಿಮ ಆಫ್ರಿಕಾದಲ್ಲಿ ಈ ಜಾಂಬಿ ಮಾಫಿಯಾ ಹೆಚ್ಚಾಗುತ್ತಿದ್ದು, ಹೆಚ್ಚಾಗಿ ಪೆಡ್ಲಿಂಗ್ ಆಗುತ್ತಿದೆ. ಈ ಜಾಂಬಿ ಡ್ರಗ್ಸ್ ಅನ್ನ “ಮನುಷ್ಯ ಮೃತದೇಹಗಳಿಂದ ಮೂಳೆಗಳನ್ನ ಬೇರ್ಪಡಿಸಿ” ಅದರಿಂದ ಕುಷ್ ಅಥವಾ ಜಾಂಬಿ ಡ್ರಗ್ಸ್ಗಳನ್ನ ತಯಾರಿಸಲಾಗುತ್ತೆ.
ಇದನ್ನ ಸೇವಿಸಿದರೆ ದೇಹಕ್ಕೆ ಇನ್ನಿಲ್ಲದ ಸಮಸ್ಯೆಗಳನ್ನ ತಂದೊಡ್ಡುತ್ತವೆ. ಹೀಗಾಗಿ ಪೆಡ್ಲರ್ ಗಳು ಸನ್ಮಾಶಗಳಿಂದ ಮನುಷ್ಯ ಮೂಳೆಗಳನ್ನ ಸಂಗ್ರಹ ಮಾಡುತ್ತಿದ್ದಾರೆ. ಪೆಡ್ಲರ್ಗಳಿಂದ ಸನ್ಮಾಶಗಳನ್ನ ಕಾಯುವ ಕೆಲಸವನ್ನ ಆ ದೇಶದ ಪೊಲೀಸರು ಮಾಡುತ್ತಿದ್ದಾರೆ. ಇದಕ್ಕಾಗಿ ವಿಶೇಷ ತಂಡವನ್ನೇ ರಚನೆ ಮಾಡಲಾಗಿದೆ. ಹಗಲು ರಾತ್ರಿ ಎನ್ನದೆ ದುಡಿಯುತ್ತಿರುವ ಪೊಲೀಸರು, ಮಾದಕ ಜಾಲಗಳಿಂದ ಸನ್ಮಾಶವನ್ನ ಕಾಯುವುದೇ ಸವಾಲಾಗಿದೆ. ಇದರ ಗಂಭೀರತೆ ಅರಿತ ಆಫ್ರಿಕಾದ ರಾಷ್ಟ್ರಾಧ್ಯಕ್ಷ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಮಾನವನ ಮೂಳೆಯಿಂದ ಸಲ್ಪರ್ ಬೇರ್ಪಡಿಸಿ ಅದನ್ನು ಮರಿಜುವಾನಾ ಡ್ರಗ್ಸ್ಗೆ ಕೆಲವು ಮೂಲಿಕೆಗಳಿಗೆ ಸೇರಿಸಿ ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಾರೆ. ಅದನ್ನೇ ಕುಷ್ ಡ್ರಗ್ಸ್ ಎನ್ನಲಾಗುತ್ತೆ.
ಇದಕ್ಕಾಗಿ ಸಿಯೆರಾದ ಡ್ರಗ್ಸ್ ಪೆಡ್ಲರ್ಗಳು, ಸ್ಮಶಾನಗಳ ಕಡೆ ಸುತ್ತಾಡುತ್ತಿದ್ದಾರೆ. ಸಮಾಧಿಗಳನ್ನು ಅಗೆದು ಮನುಷ್ಯ ಮೂಳೆಗಳನ್ನು ಕದ್ದೊಯ್ದು ಅದರಿಂದ ಕುಷ್ ಡ್ರಗ್ಸ್ ತಯಾರಿಸುತ್ತಿದ್ದಾರೆ. ‘ಜಾಂಬಿ ಡ್ರಗ್ಸ್ ಒಂದೇ ಒಂದು ಬಾರಿ ಸೇವಿಸಿದ್ರೆ, ಆ ವ್ಯಕ್ತಿ ಅದಿಲ್ಲದೇ ಬದುಕಲು ಆಗುವುದಿಲ್ಲ ಎನ್ನುವ ಮಟ್ಟಿಗೆ ಹೋಗುತ್ತಾನೆ. ಹಾಗೆ ಕೈ ಕಾಲು ದೇಹದ ಭಾಗಗಳಲ್ಲಿ ತೂತು ಬೀಳಲು ಶುರುವಾಗುತ್ತೆ..ವಿಕಾರಗೊಳ್ಳುತ್ತದೆ. ಕ್ರಮೇಣ ದೇಹದ ಎಲ್ಲಾ ಅಂಗಾಂಗಗಳು ವೈಪಲ್ಯ ಆಗುತ್ತೆ ಅಂತ ವೈದ್ಯರು ಹೇಳುತ್ತಾರೆ. ಹೀಗಾಗಿ ಈ ಜಾಂಬಿ ಜಾಲಕ್ಕೆ ಕಡಿವಾಣ ಹಾಕಲು ಮುಂದಾಗಿರೋ ಪಶ್ಚಿಮ ಆಫ್ರಿಕಾ ತುರ್ತು ಪರಿಸ್ಥಿತಿ ಹೇರಿದ್ದು, ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.