- ಡಕ್ವರ್ತ್ ಲೂಯಿಸ್ ರೂಲ್ಸ್ನ ಸಹ ಸೃಷ್ಟಿಕರ್ತ ಫ್ರಾಂಕ್ ಡಕ್ವರ್ತ್ ವಿಧಿವಶ
- ಜೂನ್ 21 ರಂದು ಇಹಲೋಕ ತ್ಯಜಿಸಿದ ಫ್ರಾಂಕ್ ಡಕ್ವರ್ತ್
ಡಕ್ವರ್ತ್ ಲೂಯಿಸ್ ರೂಲ್ಸ್ನ ಸಹ ಸೃಷ್ಟಿಕರ್ತ ಫ್ರಾಂಕ್ ಡಕ್ವರ್ತ್ ಇನ್ನಿಲ್ಲ. 1939ರಲ್ಲಿ ಹುಟ್ಟಿದ ಇವರು 84 ವಯಸ್ಸಿನವರಾಗಿದ್ದರು. ಮಾಹಿತಿ ಪ್ರಕಾರ ಡಕ್ವರ್ತ್ ಜೂನ್ 21 ರಂದು ಇಹಲೋಕ ತ್ಯಜಿಸಿರುವುದಾಗಿ ತಿಳಿದು ಬಂದಿದೆ.
ಡಕ್ವರ್ತ್-ಲೂಯಿಸ್ ನಿಯಮವು ಮ್ಯಾಚ್ನಲ್ಲಿ ಬಳಸಲಾಗುವ ಪ್ರಮುಖ ರೂಲ್ಸ್ಗಳಲ್ಲಿ ಒಂದಾಗಿದೆ. ಈ ನಿಯಮವನ್ನು ರೂಪಿಸಿದವರಲ್ಲಿ ಡಕ್ವರ್ತ್ ಅವರೂ ಒಬ್ಬರಾಗಿದ್ದರು . ಮೂಲತಃ ಲಂಡನ್ನಲ್ಲಿ ಜನಿಸಿರುವ ಇವರು ಫ್ರಾಂಕ್ ಡಕ್ವರ್ತ್ ಹಾಗೂ ಟೋನಿ ಲೂಯಿಸ್ ಇಬ್ಬರು ಜೊತೆಗೂಡಿ ಈ ರೂಲ್ಸ್ ಅನ್ನು ಸೃಷ್ಟಿದರು. ಈ ರೂಲ್ಸ್ ಅನ್ನು ಹೆಚ್ಚಾಗಿ ಮಳೆ ಬಾಧಿತ ಪಂದ್ಯಗಳಿಗೆ ಉಪಯೋಗಿಸಲಾಗುತ್ತದೆ. ಈಗಲೂ ಸಹ ಈ ನಿಯಮ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಈ ನಿಯಮವನ್ನು 1997 ರಲ್ಲಿ ಜಿಂಬಾಬ್ವೆ ಮತ್ತು ಇಂಗ್ಲೆಂಡ್ ಮಧ್ಯೆ ನಡೆದ ಮ್ಯಾಚ್ನಲ್ಲಿ ಬಳಲಾಗಿತ್ತು. ನಂತರದಲ್ಲಿ ಐಸಿಸಿಯು 2001 ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಸಂಪೂರ್ಣವಾಗಿ ಜಾರಿಗೊಳಿಸಲಾಯಿತು. 2014 ರಲ್ಲಿ ಆಸ್ಟ್ರೇಲಿಯಾದ ಸಂಖ್ಯಾಶಾಸ್ತ್ರಜ್ಞ ಸ್ಟೀವನ್ ಸ್ಟ್ರೇನ್, ಡಕ್ವರ್ತ್ ಮತ್ತು ಲೂಯಿಸ್ ನಿಯಮದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದರು. ಆ ಬಳಿಕ ಈ ನಿಯಮದ ಹೆಸರನ್ನು ಡಕ್ವರ್ತ್-ಲೂಯಿಸ್-ಸ್ಟ್ರೇನ್ ಎಂದು ಬದಲಾಯಿಸಲಾಯಿತು.
ಈ ಹಿಂದೆ ಅದರ ಇನ್ನೋಬ್ಬ ರೂವಾರಿ ಟೋನಿ ಲೂಯಿಸ್ 2020 ರಲ್ಲಿ ಸಾವನ್ನಪ್ಪಿದ್ದರು. ಇವರ ಈ ಸಾಧನೆಗೆ ಈ ಹಿಂದೆ 2010 ರಲ್ಲಿ ಬ್ರಿಟಿಷ್ ಎಂಪೈರ್ ಸದಸ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.