ಬೆಂಗಳೂರು : ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ಇನ್ನು ನೆನಪು ಮಾತ್ರ. ಕನ್ನಡ ಚಿತ್ರರಂಗವನ್ನ ಆಳಿದ ಪ್ರಚಂಡ ಕುಳ್ಳ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ರವೀಂದ್ರ ಕಲಾಕ್ಷೇತ್ರದಿಂದ ಚಾಮರಾಜಪೇಟೆಯ ಟಿಆರ್ ಮಿಲ್ ವರೆಗೂ ದ್ವಾರಕೀಶ್ ಪಾರ್ಥೀವ ಶರೀರದ ಅಂತಿಮ ಯಾತ್ರೆ ಮಾಡಲಾಗಿದೆ. ನಂತರ ಬ್ರಾಹ್ಮಣ ಸಂಪ್ರದಾಯದಂತೆ ದ್ವಾರಕೀಶ್ ಅವರ ಅಂತ್ಯಕ್ರಿಯೆನೆರವೇರಿದೆ.
ಇಡೀ ಕನ್ನಡ ಇಂಡಸ್ಟ್ರಿ ಕನ್ನಡದ ಪ್ರಚಂಡ ಕುಳ್ಳನಿಗಾಗಿಯೇ ಸ್ಥಗಿತೊಂಡಿದೆ. ಸಿನಿಮಾ ಪ್ರದರ್ಶನ ಮತ್ತು ಸಿನಿಮಾ ಚಟುವಟಿಕೆಗಳು ಎಲ್ಲವೂ ಬಂದ್ ಆಗಿವೆ. ರವಿಂದ್ರ ಕಲಾಕ್ಷೇತ್ರದಲ್ಲಿ ಅಂತಿದ ದರ್ಶನ ಪಡೆದ ಸಿನಿ ಮಂದಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.