ಟ್ರೋಲರ್ಗಳ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗರಂ ಆಗಿದ್ದಾರೆ. ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎನ್ನುವ ವಿಚಾರವಾಗಿ ವಿವಿಧ ಟ್ರೋಲ್ ಪೇಜ್ಗಳು ಮಧು ಬಂಗಾರಪ್ಪ ಅವರ ಬಗ್ಗೆ ಹಾಸ್ಯ ಮಾಡಿತ್ತು. ಇದಕ್ಕೆ ಕೆಂಡಾಮಂಡಲವಾಗಿರುವ ಅವರು, ಟ್ರೋಲ್ ಮಾಡಿ ನನ್ನನ್ನು ಬಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ. ಟ್ರೋಲ್ಗಳಿಗೆ ಹೆದರುವ ಮಧು ಬಂಗಾರಪ್ಪ ನಾನಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದು ಕೂಗಿದ್ದ. ಈ ವಿಡಿಯೋ ಎಲ್ಲಡೆ ಹರಿದಾಡಿತ್ತು. ಇದಕ್ಕೆ ಗರಂ ಆಗಿದ್ದ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸೂಚಿಸಿದ್ದರು.
ಇನ್ನು ಈ ಬಗ್ಗೆ ಯೂಟರ್ನ್ ಹೊಡೆದಿರುವ ಮಧು ಬಂಗಾರಪ್ಪ ನಾನು ಹೇಳಿದ್ದು ವಿದ್ಯಾರ್ಥಿಗಲ್ಲ ಎಂದಿದ್ದಾರೆ. ನಾನು ಸಂಬಂಧಪಟ್ಟ ಹೆಡ್ ಮಾಸ್ಟರ್ ಮತ್ತು ಬಿಇಓ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದು, ಇದನ್ನು ಮಾಧ್ಯಮಗಳು ತಪ್ಪಾಗಿ ತೋರಿಸಿವೆ ಎಂದು ಗರಂ ಆಗಿದ್ದಾರೆ.
ಮಕ್ಕಳ ಮೇಲೆ ಕ್ರಮ ತೆಗೆದುಕೊಳ್ಳಲು ನಮಗೆ ಯಾವುದೇ ಅಧಿಕಾರವಿಲ್ಲ. ಹಾಗಾಗಿ ನಿಮ್ಮ ಮಕ್ಕಳನ್ನು ಕಂಟ್ರೋಲ್ನಲ್ಲಿ ಇಡಬೇಕು ಎಂದು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಮಾಧ್ಯಮಗಳು ಸುಮ್ಮನೆ ಇಲ್ಲದ್ದನ್ನು ತಂದಿದ್ದೀರಿ. ಇದು ಸರಿಯಲ್ಲ ಎಂದು ಮಾಧ್ಯಮಗಳ ವಿರುದ್ಧವೂ ಗರಂ ಆಗಿದ್ದಾರೆ.
ಸರ್ಕಾರದಿಂದ ಮೊಟ್ಟೆ ಕೊಟ್ಟಿರುವ ವಿಚಾರವನ್ನು ಯಾರೂ ಹೇಳಲ್ಲ. ಆದ್ರೆ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಅನ್ನೋದನ್ನ ತೋರಿಸ್ತೀರಿ. ಸಾವಿರಾರು ಮಕ್ಕಳು ಇದ್ದಾಗ ಆ ರೀತಿ ಮಾತನಾಡುವುದು ಸರಿಯಲ್ಲ. ಟ್ರೋಲ್ ಮಾಡಿದ್ರೆ ನನಗೇನು ಆಗಬೇಕಿಲ್ಲ ಎಂದಯ ಟ್ರೋಲರ್ಗಳ ವಿರುದ್ಧ ಗುಡುಗಿದ್ದಾರೆ.