ರಾಯ್ಪುರದಿಂದ ಸುಮಾರು 350 ಕಿಮೀ ದೂರದಲ್ಲಿರುವ ಬಿಜಾಪುರದ, ಹರಿತ ಜಿಲ್ಲೆಯ ಚಿಪುರ್ ಭಟ್ಟಿ ಪ್ರದೇಶದಲ್ಲಿ ಫೈರಿಂಗ್ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳಾ ಕಾರ್ಯಕರ್ತರು ಸೇರಿ, ಕಾನೂನುಬಾಹಿರ ಸಿಪಿಐನ 6 ಬಂಡುಕೋರರನ್ನ ಭದ್ರತಾ ಪಡೆ ಹೊಡೆದುರುಳಿಸಿವೆ. ಮಾವೋವಾದಿಗಳು ಈ ಪ್ರದೇಶದಲ್ಲಿ ಮೂವರು ಗ್ರಾಮಸ್ಥರನ್ನು ಕೊಂದ ನಂತರ ಸಿಆರ್ ಪಿಎಫ್, ಎಲೈಟ್ ಕೋಬ್ರಾ ಘಟಕ ಮತ್ತು ಡಿಆರ್ಜಿ ಜಂಟಿ ತಂಡದಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.