ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಬಹು ನಿರೀಕ್ಷಿತ ಚಿತ್ರ ಪುಷ್ಪ 2 ಇಂದು, ಅಂದರೆ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಲ್ಲು ಅರ್ಜುನ್ ಅವರ ಪುಷ್ಪಾ ರಾಜ್ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಈಗಲೇ ಸಿನಿಮಾ ಒಟಿಟಿ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಭಾರಿ ಮೊತ್ತಕ್ಕೆ ಡಿಜಿಟಲ್ ಹಕ್ಕು ಮಾರಾಟವಾಗಿದೆ ಎಂದು ವರದಿಯಾಗಿದೆ.
ಈ ವರ್ಷದ ಆರಂಭದಲ್ಲಿಯೇ ‘ಪುಷ್ಪ 2’ ಸಿನಿಮಾದ ನಿರ್ಮಾಪಕರು ಒಟಿಟಿ ಡೀಲ್ ಅಂತ್ಯಗೊಳಿಸಿದ್ದಾರೆ. ಮೂಲಗಳ ಪ್ರಕಾರ ಸಿನಿಮಾವನ್ನು ಎರಡು ಒಟಿಟಿಗಳಿಗೆ ಮಾರಾಟ ಮಾಡಲಾಗಿದೆಯಂತೆ. ವಿಶ್ವದಾದ್ಯಂತ ಭಾರಿ ಸಂಖ್ಯೆಯ ಚಂದಾದಾರರಿರುವ ನೆಟ್ಫ್ಲಿಕ್ಸ್ ಗೆ ಭಾರಿ ಮೊತ್ತಕ್ಕೆ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಬಗ್ಗೆಯೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮುಂಚೆಯೇ ನೆಟ್ಫ್ಲಿಕ್ಸ್ ಈ ಬಗ್ಗೆ ಪೋಸ್ಟ್ ಕೂಡ ಶೇರ್ ಮಾಡಿಕೊಂಡಿತ್ತು.
ಬಹು ನಿರೀಕ್ಷಿತ ಚಿತ್ರ ಪುಷ್ಪ 2ರ ಡಿಜಿಟಲ್ ಹಕ್ಕುಗಳನ್ನು ನೆಟ್ಫ್ಲಿಕ್ಸ್ 270 ಕೋಟಿ ರೂ. ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ದುಬಾರಿ ಮತ್ತು ಉನ್ನತ-ಮಟ್ಟದ ವ್ಯವಹಾರಗಳಲ್ಲಿ ಒಂದಾಗಿದೆ ಎನ್ನಲಾಗಿದೆ. ನೆಟ್ಫ್ಲಿಕ್ಸ್ ತನ್ನ ಥಿಯೇಟ್ರಿಕಲ್ ನಂತರದ ಬಿಡುಗಡೆಯ ಹಕ್ಕುಗಳನ್ನು ಎಲ್ಲಾ ಭಾಷೆಗಳಲ್ಲಿ ಖರೀದಿಸಿದೆ.
ನೆಟ್ಫ್ಲಿಕ್ಸ್ ಮಾತ್ರವೇ ಅಲ್ಲದೆ ಮತ್ತೊಂದು ಒಟಿಟಿಗೆ ಸಹ ‘ಪುಷ್ಪ 2’ ಸಿನಿಮಾದ ಹಕ್ಕುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ ಜೀ5 ಅಥವಾ ಅಮೆಜಾನ್ ಪ್ರೈಂಗೆ ‘ಪುಷ್ಪ 2’ ಡಿಜಿಟಲ್ ಹಕ್ಕುಗಳು ಮಾರಾಟ ಆಗಲಿವೆ.
ಈ ಹಿಂದೆ ರಾಜಮೌಳಿಯ ‘RRR’ ಸಿನಿಮಾವನ್ನು ನೆಟ್ಫ್ಲಿಕ್ಸ್ ಮತ್ತು ಜೀ5 ಎರಡರಲ್ಲೂ ಬಿಡುಗಡೆ ಮಾಡಲಾಗಿತ್ತು. ಆ ನಂತರ ಹಾಟ್ಸ್ಟಾರ್ನಲ್ಲಿಯೂ ಬಿಡುಗಡೆ ಮಾಡಲಾಯ್ತು. ಇದೇ ಮಾದರಿಯನ್ನು ‘ಪುಷ್ಪ 2’ ತಂಡ ಸಹ ಅನುಸರಿಸಲಿದೆ.