ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಇನ್ನೊಂದು ಕಡೆ , ಚೈತ್ರಾ ಹಾಗೂ ತ್ರಿವಿಕ್ರಮ್ ಈ ವಾರ ಕಳಪೆ ಪಟ್ಟವನ್ನು ಪಡೆದು ಜೈಲು ಸೇರಿದ್ದಾರೆ. ಈ ವಾರ ಗೋಲ್ಡ್ ಸುರೇಶ್ ಅವರು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಇದೀಗ ಚೈತ್ರಾ ಹಾಗೂ ತ್ರಿವಿಕ್ರಮ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಮನೆಗೆ ಏನಾದರೂ ನಾನು ಶಿಕ್ಷ ಕೊಡಬೇಕು. ನೆಮ್ಮದಿ ಇರಲು ಬಿಡಲ್ಲ ಎಂದಿದ್ದಾರೆ ಚೈತ್ರಾ. ಇನ್ನು ತ್ರಿವಿಕ್ರಮ್ ಕೂಡ ಆಗಿದ್ದು ಆಗಲಿ ಅಂತ ಜೈಲಿನಿಂದ ಆಚೆ ಬಂದಿದ್ದಾರೆ. ಇನ್ನು ಬಾಲ್ಕನಿಯಲ್ಲಿ ಡ್ಯಾನ್ಸ್ ಮಾಡಬೇಕು ಮಜಾ ಇರತ್ತೆ ಅಂತ ಚೈತ್ರಾ ತಮಾಷೆ ಕೂಡ ಮಾಡಿದ್ದಾರೆ.
ಮೈಕ್ ಹಾಕಿಕೊಳ್ಳದೇ ಮಾತಾಡುವುದು, ಸ್ಪರ್ಧಿಗಳು ಪಿಸು ಧ್ವನಿಯಲ್ಲಿ ಮಾತಾಡುವುದು, ದೈಹಿಕವಾಗಿ ಹಲ್ಲೆ ಮಾಡುವುದು, ಮುಖ್ಯವಾಗಿ ಜೈಲಿಗೆ ಹೋಗಿರೋ ಸ್ಪರ್ಧಿಗಳು ಆಚೆ ಬರಬಾರದು, ಅಲ್ಲದೇ ರಾಗಿ ಕಂಜಿ, ನೀರು ಬಿಟ್ಟು ಯಾವ ಪದಾರ್ಥವನ್ನು ಸೇವಿಸುವಂತಿಲ್ಲ. ಆದರೆ, ರೂಲ್ಸ್ ಗೊತ್ತಿದ್ದು ಗೊತ್ತಿದ್ದು ಇದೀಗ ಬಿಗ್ಬಾಸ್ ಮನೆಯ ಮೂಲಕ ನಿಯಮವನ್ನೇ ಈ ಇಬ್ಬರು ಸ್ಪರ್ಧಿಗಳು ಬ್ರೇಕ್ ಮಾಡಿದ್ದಾರೆ.
ಕಲರ್ಸ್ ಕನ್ನಡ ರಿಲೀಸ್ ಮಾಡಿದ ಹೊಸ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಜೈಲಿನಿಂದ ಆಚೆ ಹೋಗಿ ರೂಲ್ಸ್ ಬ್ರೇಕ್ ಮಾಡೋಣ ಅಂತ ಹೇಳಿದ್ದಾರೆ. ಇದಾದ ಬಳಿಕ ತಡ ಮಾಡದೇ ತ್ರಿವಿಕ್ರಮ್ ಹಾಗೂ ಚೈತ್ರಾ ಇಬ್ಬರು ಜೈಲಿನಿಂದ ಆಚೆ ಬಂದಿದ್ದಾರೆ. ಇಂದಿನ ಎಪಿಸೋಡ್ನಲ್ಲಿ ಈ ಇಬ್ಬರಿಗೆ ಕ್ಯಾಪ್ಟನ್ ಯಾವ ಶಿಕ್ಷೆ ನೀಡುತ್ತಾರೆ ಅಂತ ಕಾದು ನೋಡಬೇಕಿದೆ.