ಕಿಚ್ಚ ಸುದೀಪ್ ಅವರು ನಡೆಸಿಕೊಡುವಂತ ಕನ್ನಡದ ಬಿಗ್ ರಿಯಾಲಿಟಿ ಸೋ ಬಿಗ್ ಬಾಸ್ 11ನೇ ವಾರದತ್ತ ಮುನ್ನುಗ್ಗುತ್ತಿದೆ. ಮನೆಯಲ್ಲಿ ಮೊದಲಿನಂತೆ ಇಲ್ಲ. ಒಬ್ಬರ ಮೇಲೆ ಒಬ್ಬರು ದೂರು ಹೇಳುವುದು ಕಾಮನ್ ಆಗಿದೆ.
ಈ ವಾರ ಕಿಚ್ಚ ಸುದೀಪ್ ಅವರು ಪಂಚಾಯಿತಿಯಲ್ಲಿ ತ್ರಿವಿಕ್ರಮ್ ಹಾಗೂ ಮೋಕ್ಷಿತಾ ಅವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಜತೆಗೆ ಚೈತ್ರಾ ಅವರ ಆಟದ ಬಗ್ಗೆಯೂ ಮೆಚ್ಚುಗೆ ಮಾತುಗಳನ್ನು ಹೇಳಿದ್ದಾರೆ. ನಿನ್ನೆ ರಜತ್ ಹಾಗೂ ಗೌತಮಿ ಸೇವ್ ಕೂಡ ಆಗಿದ್ದಾರೆ. ಇದೀಗ ಈ ವಾರ ಮನೆಯಿಂದ ಹೊರ ಹೋಗೋದು ಯಾರು ಎನ್ನುವ ಚರ್ಚೆಗಳು ಆಗುತ್ತಿವೆ. ಇನ್ನು ಈ ವಾರ ವೋಟಿಂಗ್ ಲೈನ್ಸ್ ಕೂಡ ತೆರೆದಿಲ್ಲ ಹೀಗಾಗಿ ನೋ ಎಲಿಮಿನೇಷನ್ ಎನ್ನಲಾಗುತ್ತಿದೆ. ಆದರೆ ಒಂದು ಟ್ವಿಸ್ಟ್ ಖಂಡಿತ ಇರಲಿದೆ ಎನ್ನಲಾಗುತ್ತಿದೆ.
ಈ ವಾರ ದೊಡ್ಮನೆ ತೊರೆಯಲು ಭವ್ಯಾ, ಮೋಕ್ಷಿತಾ, ಚೈತ್ರಾ, ಗೋಲ್ಡ್ ಸುರೇಶ್, ಐಶ್ವರ್ಯಾ, ರಜತ್, ಮಂಜು ಹಾಗೂ ಗೌತಮಿ ನಾಮಿನೇಟ್ ಆಗಿದ್ದರು. ಎಲಿಮಿನೇಷನ್ ಬದಲು ಒಬ್ಬರು ಬಿಗ್ಬಾಸ್ ಮನೆಯ ಸೀಕ್ರೆಟ್ ರೂಮ್ಗೆ ಹೋಗ್ತಾರೆ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರ್ತಿದೆ.
ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಯ ಸೀಕ್ರೆಟ್ ರೂಮ್ಗೆ ಹೋಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಚೈತ್ರಾ ಇತ್ತೀಚೆಗೆ ಕೋರ್ಟ್ ವಿಚಾರಣೆಗೂ ಹಾಜರಾಗಿದ್ದರು. ಬಿಗ್ಬಾಸ್ ಮನೆಯಿಂದ ನೇರವಾಗಿ ಕೋರ್ಟ್ಗೆ ತೆರಳಿ ವಿಚಾರಣೆ ಮುಗಿಸಿ ಮತ್ತೆ ಮನೆ ಒಳಗೆ ಹೋಗಿದ್ದರು. ಇಂದಿನ ಎಪಿಸೋಡ್ನಲ್ಲಿ ಯಾರು ಸೀಕ್ರೆಟ್ ರೂಮ್ಗೆ ಹೋಗಬಹುದು ಎಂದು ಕಾದುನೋಡಬೇಕಿದೆ.