ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 60 ದಿನಕ್ಕೆ ಕಾಲಿಟ್ಟಿದೆ. 10ನೇ ವಾರಕ್ಕೆ ಕಾಲಿಡುವ ಹೊತ್ತಲ್ಲಿ ಬಿಗ್ಬಾಸ್ ಮನೆಯಲ್ಲಿ ಜಿಲೇಬಿ ಕಳ್ಳತನವಾಗಿದೆ.
ಹೌದು, ಭವ್ಯಾ ಗೌಡ ತಾನು ತಿನ್ನಬೇಕೆಂದು ಫ್ರಿಡ್ಜ್ನಲ್ಲಿ ಜಿಲೇಬಿ ಇಟ್ಟಿದ್ದರು. ಆದರೆ ಅದನ್ನು ಮೋಕ್ಷಿತಾ ಹಾಗೂ ಐಶ್ವರ್ಯಾ ತಿಂದಿದ್ದರು. ಆದರೆ ಆ ಜಿಲೇಬಿ ಭವ್ಯಾ ಅವರದ್ದು ಅಂತ ಈ ಇಬ್ಬರಿಗೆ ಗೊತ್ತಾಗಿಲ್ಲ. ಟಾಸ್ಕ್ ಆಡುವ ಭರದಲ್ಲಿ ಈ ಇಬ್ಬರು ಜಿಲೇಬಿ ತಿಂದು ಬಿಟ್ಟಿದ್ದಾರೆ. ಇನ್ನೂ ಇಂದು ಜಿಲೇಬಿ ತಿನ್ನಬೇಕೆಂದು ಫ್ರಿಡ್ಜ್ ಓಪನ್ ಮಾಡಿದ ಭವ್ಯಾ ಗೌಡ ಕಾಲಿ ಬಾಕ್ಸ್ ನೋಡಿ ಶಾಕ್ ಆಗಿದ್ದಾರೆ. ಅಲ್ಲದೇ ಇದೇ ವಿಚಾರಕ್ಕೆ ರಂಪಾಟ ಮಾಡಿದ್ದಾರೆ.
ಮನೆಯ ಕ್ಯಾಪ್ಟನ್ ಆದ ಧನರಾಜ್ಗೆ ಭವ್ಯಾ ಗೌಡ ನನ್ನ ಜಿಲೇಬಿ ಯಾರು ತಿಂದಿದ್ದು ಅಂತ ಕೇಳಿಕೊಂಡು ಬನ್ನಿ, ಅವರನ್ನು ಸುಮ್ಮನೆ ಬಿಡೋದಿಲ್ಲ ಮಾತ್ರಾ ಅಂತ ಅವಾಜ್ ಹಾಕಿದ್ದಾರೆ.ಯಾರು ಆ ಜಿಲೇಬಿ ತಿಂದಿದ್ದಾರೋ ಅವರಿಗೆ ವಾಮಿಟ್ ಮಾಡೋದಕ್ಕೆ ಹೇಳಿ, ನನಗೆ ಸಿಕ್ಕಿಲ್ಲ ಅಂದ್ರೆ ಅದು ಯಾರಿಗೂ ಸಿಗಬಾರದು. ಯಾರು ತಿಂದಿರುತ್ತಾರೆ ದೇವರೇ ಅವರಿಗೆ ಲೂಸ್ ಮೋಷನ್ ಆಗಲಿ ಅಂತ ಶಾಪ ಹಾಕಿದ್ದಾರೆ.
ಇನ್ನೂ ಬಿಗ್ಬಾಸ್ ಮನೆಗೆ ಏನೇ ತಿಂಡಿ ಬಂದರು ಅವರೆಲ್ಲಾ ಸಮನಾಗಿ ತಿನ್ನಬೇಕು ಅನ್ನೋ ನಿಯಮ ಇದೆ. ಆದರೆ ಕೇಲವರಿಗೆ ಹಸಿವು ತಾಳಲಾರದೇ ತಿಂದು ಬಿಡುತ್ತಾರೆ. ಹೀಗೆ ಭವ್ಯಾ ಗೌಡ ತಾನು ತಿನ್ನಬೇಕು ಅಂತ ಇಟ್ಟುಕೊಂಡಿದ್ದ ಜಿಲೇಬಿಯನ್ನು ಮೋಕ್ಷಿತಾ ಹಾಗೂ ಐಶ್ವರ್ಯಾ ತಿಂದುಬಿಟ್ಟಿದ್ದಾರೆ. ಹೀಗಾಗಿ ಭವ್ಯಾ ಗೌಡ ಕೋಪದಲ್ಲಿ ಅವರಿಗೆ ಶಾಪ ಹಾಕಿದ್ದಾರೆ.