ಮುಂಬರುವ ಚಿತ್ರ ಬೇಬಿ ಜಾನ್ ಸಿನಿಮಾ ಪ್ರಚಾರಕ್ಕಾಗಿ ನಿರ್ದೇಶಕ ಅಟ್ಲೀ ಇತ್ತೀಚೆಗೆ ನೆಟ್ಫ್ಲಿಕ್ಸ್ನ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಭಾಗಿಯಾಗಿದ್ದರು. ವರುಣ್ ಧವನ್, ಕೀರ್ತಿ ಸುರೇಶ್, ವಾಮಿಕಾ ಗಬ್ಬಿ ಸೇರಿದಂತೆ ಚಿತ್ರದ ಉಳಿದ ತಾರಾಬಳಗದವರು ಸಹ ಸಂಚಿಕೆಯಲ್ಲಿ ಹಾಜರಿದ್ದರು. ಆದರೆ ಕಪಿಲ್ ಅವರ ತಮಾಷೆಯಿಂದಾಗಿ ಈ ಎಪಿಸೋಡ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಅಟ್ಲಿ ಅವರ ದೇಹದ ಬಣ್ಣವನ್ನು ಇಟ್ಟುಕೊಂಡು ಕಪಿಲ್ ಶರ್ಮಾ ಅವರು ಟೀಕೆ ಮಾಡಿದ್ದಾರೆ.
ಬೇಬಿ ಜಾನ್ ಚಿತ್ರತಂಡದೊಂದಿಗೆ ತಮಾಷೆ ಮಾಡುತ್ತಿದ್ದಾಗ , ಕಪಿಲ್ ಅಟ್ಲಿಯನ್ನು ಕೇಳಿದ್ದು ಹೀಗೆ, ” ನೀವು ಮೊದಲ ಬಾರಿಗೆ ಒಬ್ಬ ಸ್ಟಾರ್ ಅನ್ನು ಭೇಟಿಯಾದಾಗ, ಅವರು ಅಟ್ಲೀ ಎಲ್ಲಿ ಎಂದು ಕೇಳಿದ್ದು ಇದೆಯಾ?” ಎಂದು ಹೇಳಿದ್ದಾರೆ. ಪ್ರಶ್ನೆ ಕೇಳುತ್ತಾ ನಕ್ಕರು ಕಪಿಲ್ ಶರ್ಮಾ. ಆದರೆ, ಅಟ್ಲಿ ನಗಲಿಲ್ಲ.
ನೀವು ಯಾವ ಅರ್ಥದಲ್ಲಿ ಪ್ರಶ್ನೆ ಕೇಳಿದಿರಿ ಎಂಬುದು ನನಗೆ ಅರ್ಥವಾಯಿತು. ನಾನು ಉತ್ತರಿಸಲು ಪ್ರಯತ್ನಿಸುತ್ತೇನೆ. ನಾನು ಎಆರ್ ಮುರುಗದಾಸ್ಗೆ ಧನ್ಯವಾದ ಹೇಳಬೇಕು. ಅವರೇ ನನ್ನ ಮೊದಲ ಸಿನಿಮಾನ ನಿರ್ಮಾಣ ಮಾಡಿದ್ದು. ಅವರು ಸ್ಕ್ರಿಪ್ಟ್ ಕೇಳಿದರು. ನಾನು ಹೇಗಿದ್ದೇನೆ ಎಂದು ನೋಡಿಲ್ಲ. ಅವರು ನನ್ನ ಸ್ಕ್ರಿಪ್ಟ್ ನರೇಷನ್ ಕೇಳಿ ಇಷ್ಟಪಟ್ಟರು. ನಾವು ಹೇಗೆ ಕಾಣುತ್ತೇವೆ ಎಂಬುದರ ಮೇಲೆ ಜಡ್ಜ್ ಮಾಡಬಾರದು. ನಮ್ಮ ಮನಸ್ಸನ್ನು ನೋಡಿ ಜಡ್ಜ್ ಮಾಡಬೇಕು’ ಎಂದು ಅಟ್ಲಿ ಹೇಳಿದ್ದಾರೆ.
ಅಟ್ಲಿ ಅವರು ಖ್ಯಾತ ನಿರ್ದೇಶಕರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ಅವರು ಈಗ ಬಾಲಿವುಡ್ನಲ್ಲೂ ಹೆಸರು ಮಾಡಿದ್ದಾರೆ. ಈಗ ಅಟ್ಲಿ ಅವರ ದೇಹದ ಬಣ್ಣವನ್ನು ಇಟ್ಟುಕೊಂಡು ಕಪಿಲ್ ಶರ್ಮಾ ಅವರು ಟೀಕೆ ಮಾಡಿದ್ದಾರೆ. ಇದಕ್ಕೆ ನಗದೆ ಅಟ್ಲಿ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರ ಬಣ್ಣ ನೋಡಿ ಈ ರೀತಿಯಲ್ಲಿ ಟೀಕೆ ಮಾಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಕಪಿಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆತ್ಮೀಯ ಸರ್, ನಾನು ಈ ವೀಡಿಯೊದಲ್ಲಿ ಏನಿದೆ ಎಂದು ನನಗೆ ವಿವರಿಸುವಿರಾ? ದಯವಿಟ್ಟು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷವನ್ನು ಹರಡಬೇಡಿ ಎಂದು ಬರೆದುಕೊಂಡಿದ್ದಾರೆ.