ಟಿ.ಎನ್. ಸೀತಾರಾಮ್ ಅವರ ಮುಕ್ತ ಮುಕ್ತ ಧಾರಾವಾಹಿಗಳು ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ಅವಿಸ್ಮರಣೀಯವಾಗಿದ್ದು, ಲಾಯರ್ ಸಿ.ಎಸ್.ಪಿ ಪಾತ್ರದಲ್ಲಿ ಅವರ ಅಭಿನಯ ಪ್ರೇಕ್ಷಕರ ಹೃದಯ ಗೆದ್ದಿತ್ತು. ಕಿರುತೆರೆಯಿಂದ ಅವರು ದೂರವಿದ್ದರೂ, ಸೀತಾರಾಮ್ ಅವರನ್ನು ಮತ್ತೆ ಸಣ್ಣ ತೆರೆಗೆ ಕಾಣುವ ಹಂಬಲ ಅಭಿಮಾನಿಗಳಲ್ಲಿ ಯಾವತ್ತೂ ಇತ್ತು. ಈಗ ಸೀತಾರಾಮ್ ಅವರ ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದು ದೊರಕಿದೆ.
ಅವರು ತಮ್ಮ ಫೇಸ್ಬುಕ್ನಲ್ಲಿ ಭಾವಪೂರ್ಣವಾಗಿ ಹಂಚಿಕೊಂಡಿರುವ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ. ಈ ಪೋಸ್ಟ್ನಲ್ಲಿ
ಪ್ರೀತಿಯ ಗೆಳೆಯ ಪರಮ್ ಕೆಲದಿನಗಳ ಹಿಂದೆ ಫೋನ್ ಮಾಡಿ ನನ್ನ ಸ್ವಂತ ಧಾರಾವಾಹಿ ಶುರು ಮಾಡುತ್ತಿದ್ದೇನೆ.. ನೀವು ಪಾತ್ರ ಮಾಡಬೇಕು ಎಂದರು.
ಏನು ಕಥೆ, ಏನು ಪಾತ್ರ ಎಂದೆ
ಕೋರ್ಟ್ ಕಥೆ.
ನಿಮ್ಮದು ಸಿ.ಎಸ್.ಪಿ. .ಪಾತ್ರ ಎಂದರು
ಒಂದು ಕ್ಷಣ ನನ್ನ ಮನಸ್ಸು ಆಕಾಶದಲ್ಲಿ ಹಾರಿ ವಾಪಸ್ ಬಂತು.
ನನ್ನ ಇಷ್ಟದ ಪಾತ್ರ, ತಿಂಗಳಗೊಮ್ಮೆ ಕನಸಿನಲ್ಲಿ ಬರುವ ಪಾತ್ರ.ಎರಡು ತಿಂಗಳಿಗೊಮ್ಮೆ ಕನಸಿನಲ್ಲಿ ಪಾಟೀಸವಾಲು ಬರುತ್ತದೆ
ಅರ್ಧ ಸೆಕೆಂಡಿನಲ್ಲಿ ಹೂ ಎಂದೆ.
ಮೊನ್ನೆ ಗುರುವಾರ ಪ್ರೊಮೋ ಶೂಟಿಂಗ್ ಆಗಿಯೇ ಹೋಯಿತು.
ಎಷ್ಟು ದಿನ ಬರುತ್ತಾರೆ ಎಂದು ಗೊತ್ತಿಲ್ಲ.
ಕೆಲವು ದಿನವಾದರೂ ಸೀ.ಎಸ್.ಪಿ ನಿಮ್ಮ ಮುಂದೆ ಬರುತ್ತಾನೆ
ಈ ಸಂಗತಿ ಇಷ್ಟ ವಾದರೆ ಹೇಳಿ ಎಂದು ಬರೆದುಕೊಂಡಿದ್ದಾರೆ. ಪರಮೇಶ್ವರ್ ಅವರೊಂದಿಗೆ ತಮ್ಮ ಸ್ನೇಹವನ್ನು ಸ್ಮರಿಸಿಕೊಂಡು ಸೀತಾರಾಮ್ ಅವರು, “ಪ್ರೀತಿಯ ಗೆಳೆಯ ಪರಮ್, ನನ್ನನ್ನು ಧಾರಾವಾಹಿಯೊಂದಕ್ಕೆ ಆಹ್ವಾನ ನೀಡಿದ್ದು ತುಂಬಾ ಸಂತೋಷದ ಸಂಗತಿ,” ಎಂದು ಹೇಳಿದ್ದಾರೆ. ಅಭಿಮಾನಿಗಳು ಈಗ ಸೀತಾರಾಮ್ ಅವರನ್ನು ಹೊಸ ಪಾತ್ರದಲ್ಲಿ ಕಿರುತೆರೆಯ ಮೇಲೆ ನೋಡಲು ಆತುರದಿಂದ ಕಾಯುತ್ತಿದ್ದಾರೆ.